Modi in Kedarnath ಕೇದಾರನಾಥದಲ್ಲಿ ₹130 ಕೋಟಿ ಮೌಲ್ಯದ 5 ಯೋಜನೆ ಉದ್ಘಾಟಿಸಿದ ಮೋದಿ | PM Narendra Modi inaugurates re development projects worth Rs 130cr at Kedarnath in Uttarakhand


Modi in Kedarnath ಕೇದಾರನಾಥದಲ್ಲಿ ₹130 ಕೋಟಿ ಮೌಲ್ಯದ 5 ಯೋಜನೆ ಉದ್ಘಾಟಿಸಿದ ಮೋದಿ

ಕೇದಾರನಾಥದಲ್ಲಿ ಮೋದಿ

ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥದಲ್ಲಿ(Kedarnath) ₹130 ಕೋಟಿ ರೂಪಾಯಿಗಳ  ಪುನರಾಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಿದ್ದಾರೆ. ಈ ಯೋಜನೆಗಳಲ್ಲಿ ಸರಸ್ವತಿ ರಿಟೈನಿಂಗ್ ವಾಲ್ ಆಸ್ಥಾಪಥ್ ಮತ್ತು ಘಾಟ್‌ಗಳು, ಮಂದಾಕಿನಿ ರಿಟೈನಿಂಗ್ ವಾಲ್ ಆಸ್ಥಾಪತ್, ಅರ್ಚಕರ ಮನೆ, ಮಂದಾಕಿನಿ ನದಿಯ ಗರುಡ್ಚಟ್ಟಿ ಸೇತುವೆ ಸೇರಿದಂತೆ ಮೂಲಸೌಕರ್ಯ ಯೋಜನೆಗಳು ಇವೆ. ಯೋಜನೆಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದ ಮೋದಿ ಇಂದು ಇಲ್ಲಿ ನಡೆದ ಆದಿ ಶಂಕರಾಚಾರ್ಯ ಸಮಾಧಿ ಉದ್ಘಾಟನೆಗೆ ನೀವೆಲ್ಲರೂ ಸಾಕ್ಷಿಯಾಗಿದ್ದೀರಿ. ಅವರ ಭಕ್ತರು ಇಲ್ಲಿ ಉತ್ಸಾಹದಿಂದ ಇದ್ದಾರೆ. ದೇಶದ ಎಲ್ಲಾ ಮಠಗಳು ಮತ್ತು ‘ಜ್ಯೋತಿರ್ಲಿಂಗಗಳು’ ಇಂದು ನಮ್ಮೊಂದಿಗೆ ಸಂಪರ್ಕ ಹೊಂದಿವೆ ಎಂದು ಹೇಳಿದ್ದಾರೆ.

2013 ರ ವಿನಾಶದ ನಂತರ, ಜನರು ಕೇದಾರನಾಥವನ್ನು ಪುನರಾಭಿವೃದ್ಧಿ ಮಾಡಬಹುದೇ ಎಂದು ಜನರು ಯೋಚಿಸುತ್ತಿದ್ದರು. ಆದರೆ ಕೇದಾರನಾಥ ಮತ್ತೆ ಅಭಿವೃದ್ಧಿಯಾಗಲಿದೆ ಎಂದು ನನ್ನೊಳಗಿನ ಧ್ವನಿ ಯಾವಾಗಲೂ ಹೇಳುತ್ತಿತ್ತು. ನಿನ್ನೆ ಯೋಧರ ಜತೆ ದೀಪಾವಳಿ ಆಚರಿಸಿ ಬಂದಿರುವೆ. 130 ಕೋಟಿ ಜನರ ಆಶೀರ್ವಾದದಿಂದ ದೀಪಾವಳಿ ಆಚರಣೆ ಮಾಡಲಾಗಿದೆ. ಬಲಿಪಾಡ್ಯಮಿಯಂದು ಕೇದಾರನಾಥದಲ್ಲಿ ಪೂಜೆ ಮಾಡಿರುವೆ. ಕೆಲ ದೈವಿಕ ಅನುಭವಗಳನ್ನು ವ್ಯಕ್ತಪಡಿಸಲು ಆಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Modi in Kedarnath ಕೇದಾರನಾಥದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಪ್ರತಿಮೆ ಅನಾವರಣ ಮಾಡಿದ ನರೇಂದ್ರ ಮೋದಿ

TV9 Kannada


Leave a Reply

Your email address will not be published. Required fields are marked *