Modi’s Mumbai Visit: ಮುಂಬೈಗೆ ಮೋದಿ ಭೇಟಿ: ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳ ಪಟ್ಟಿ ಹೀಗಿದೆ | PM Narendra Modi’s visit to Mumbai: Some roads leading to BKC to remain closed

ಮುಂಬೈ: ಪ್ರಧಾನಿ ನರೇಂದ್ರ ಮೋದಿ( Narendra Modi) ಇಂದು( ಜೂ.14) ಮುಂಬೈಗೆ ಆಗಮಿಸಲಿದ್ದು, ದ್ವಿ ಶತಾಬ್ದಿ ಮಹೋತ್ಸವ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಮುಂಬೈನಲ್ಲಿ ಜಲ ಭೂಷಣ ಕಟ್ಟಡ ಮತ್ತು ಕ್ರಾಂತಿಕಾರಿಗಳ ಗ್ಯಾಲರಿ ಮತ್ತು ಪುಣೆಯ ಜಗತ್ಗುರು ಶ್ರೀಶಾಂತ್ ತುಕಾರಾಂ ಮಹಾರಾಜ ದೇವಾಲಯದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.

ಇದೇ ವೇಳೆ ಸಂಜೆ ಗಂಟೆಗೆ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆಯುವ ಮುಂಬೈ ಸಮಾಚಾರ್ ಪತ್ರಿಕೆಯ ದ್ವಿಶತಾಬ್ದಿ ಮಹೋತ್ಸವದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. 200 ವರ್ಷಗಳಿಂದ ಪತ್ರಿಕೆಯು ನಿರಂತರವಾಗಿ ಪ್ರಕಟವಾಗುತ್ತಿದೆ.

ಮಧ್ಯಾಹ್ನ 1:45 ರ ಸುಮಾರಿಗೆ ಪುಣೆಯ ದೇಹುನಲ್ಲಿರುವ ಜಗತ್ಗುರು ಶ್ರೀಶಾಂತ್ ತುಕಾರಾಂ ಮಹಾರಾಜ್ ದೇವಾಲಯ ಹಾಗೂ ಸಂಜೆ 4:15 ರ ಸುಮಾರಿಗೆ ಪ್ರಧಾನಿಯವರು ಮುಂಬೈನ ರಾಜಭವನದಲ್ಲಿ ಜಲ ಭೂಷಣ ಕಟ್ಟಡ ಮತ್ತು ಕ್ರಾಂತಿಕಾರಿಗಳ ಗ್ಯಾಲರಿಯನ್ನು ಉದ್ಘಾಟಿಸಲಿದ್ದಾರೆ ಎಂದು ಪಿಎಂ ಕಚೇರಿ ಮಾಹಿತಿ ನೀಡಿದೆ.

ಮಾರ್ಗ ಬದಲಾವಣೆ
ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಬಿಕೆಸಿಗೆ ತೆರಳುವ ಸಾಕಷ್ಟು ಮಾರ್ಗಗಳನ್ನು ಬಂದ್ ಮಾಡಲಾಗಿದ್ದು, ಕೆಲವು ಮಾರ್ಗಗಳನ್ನು ಬದಲಾಯಿಸಲಾಗಿದೆ.

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿ ನಡೆಯಲಿರುವ, ಮುಂಬೈ ಸಮಾಚಾರ ಪತ್ರಿಕೆಯ ದ್ವಿ ಶತಾಬ್ಧಿ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಬಿಕೆಸಿಯನ್ನು ಸಂಪರ್ಕಿಸುವ ಹಾಗೂ ಕುರ್ಲಾ ರಜಾಕ್ ಜಂಕ್ಷನ್ ರಸ್ತೆ, ಎಂಟಿಎನ್​ಎಲ್ ಜಂಕ್ಷನ್, ಪ್ಲಾಟಿನಾ ಜಂಕ್ಷನ್, ಟ್ರಿಡೆಂಟ್ ಜಂಕ್ಷನ್, ಜಿಯೋ ವರ್ಲ್ಡ್​ ಸೆಂಟರ್ ಹಾಗೂ ಅಮೆರಿಕನ್ ಕಾನ್ಸುಲೇಟ್ ಬಳಿ ಎಲ್ಲಾ ರೀತಿಯ ವಾಹನಗಳು ಓಡಾಡುವಂತಿಲ್ಲ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada

Leave a Reply

Your email address will not be published.