Mohan Bhagwat: ಯಾರನ್ನೂ ಮತಾಂತರಗೊಳಿಸಬೇಕಾಗಿಲ್ಲ, ಹೇಗೆ ಬದುಕಬೇಕೆಂಬುದನ್ನು ಕಲಿಸಿ; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ | On Religious Conversion RSS Chief Mohan Bhagwat Says Dont Convert Anyone Just Teach How to Live


Mohan Bhagwat: ಯಾರನ್ನೂ ಮತಾಂತರಗೊಳಿಸಬೇಕಾಗಿಲ್ಲ, ಹೇಗೆ ಬದುಕಬೇಕೆಂಬುದನ್ನು ಕಲಿಸಿ; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್

ಮೋಹನ್ ಭಾಗವತ್

ನವದೆಹಲಿ: ನಾವು ಯಾರನ್ನೂ ಮತಾಂತರ ಮಾಡುವ ಅಗತ್ಯವಿಲ್ಲ. ಆದರೆ, ಯಾವ ರೀತಿಯಲ್ಲಿ ಬದುಕಬೇಕೆಂಬುದನ್ನು ಕಲಿಸಬೇಕಾದ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ. ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಲು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು ಎಂದು ಛತ್ತೀಸ್‌ಗಢದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಸಲಹೆ ನೀಡಿದ್ದಾರೆ. ನಾವು ಯಾರನ್ನೂ ಮತಾಂತರಗೊಳಿಸಬೇಕಾಗಿಲ್ಲ, ಆದರೆ ಹೇಗೆ ಬದುಕಬೇಕೆಂದು ಕಲಿಸಬೇಕಿದೆ. ಇಡೀ ಜಗತ್ತಿಗೆ ಈ ಕುರಿತು ಪಾಠವನ್ನು ಹೇಳಲು ನಾವು ಭಾರತದಲ್ಲಿ ಹುಟ್ಟಿದ್ದೇವೆ. ನಮ್ಮ ಪಂಥವು ಯಾರ ಆರಾಧನಾ ವ್ಯವಸ್ಥೆಯನ್ನು ಕೂಡ ಬದಲಾಯಿಸದೆ ಉತ್ತಮ ಮನುಷ್ಯರನ್ನು ರೂಪಿಸುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಇತ್ತೀಚೆಗೆ ಗುಜರಾತ್​ನ ಭರೂಚ್ ಜಿಲ್ಲೆಯ ಗ್ರಾಮವೊಂದರಲ್ಲಿ ಜನರನ್ನು ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನಿಸಿದ 4 ಜನರನ್ನು ಬಂಧಿಸಲಾಗಿತ್ತು. ಉತ್ತಮ ಉದ್ಯೋಗ ನೀಡುವ ಭರವಸೆ ನೀಡಿ ತಮ್ಮನ್ನು ಮತಾಂತರಗೊಳಿಸಿದ್ದ ಆರೋಪದಲ್ಲಿ 9 ಜನರ ವಿರುದ್ಧ ದೂರು ದಾಖಲಿಸಲಾಗಿತ್ತು. ಗುಜರಾತ್‌ನಲ್ಲಿ ಸುಮಾರು 35 ಕುಟುಂಬಗಳ ಸುಮಾರು 100 ಜನರನ್ನು ಹಣದ ಆಮಿಷವೊಡ್ಡಿ ಬಲವಂತವಾಗಿ ಮತಾಂತರಗೊಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಮತಾಂತರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್, ಒಗ್ಗಟ್ಟಿನಿಂದ ಎಲ್ಲರೂ ಭಾರತವನ್ನು ವಿಶ್ವದ ನಾಯಕನನ್ನಾಗಿ ಮಾಡಬೇಕಿದೆ. ಇಡೀ ಜಗತ್ತೇ ಒಂದು ಕುಟುಂಬ ಎಂದು ನಂಬುವವರು ಮತಾಂತರದ ಬಗ್ಗೆ ಯೋಚಿಸಲಾರರು ಎಂದು ಹೇಳಿದ್ದಾರೆ.

ಜಗತ್ತಿಗೆ ಯಾವ ರೀತಿ ಆದರ್ಶವಾಗಿ ಬದುಕಬೇಕೆಂದು ತಿಳಿಸಲು ನಾವು ಭಾರತದ ಭೂಮಿಯಲ್ಲಿ ಹುಟ್ಟಿದ್ದೇವೆ. ನಮ್ಮ ಪಂಗಡವು ಯಾರ ಪೂಜಾ ಪದ್ಧತಿಯನ್ನೂ ಬದಲಾಯಿಸದೆ ಒಳ್ಳೆಯ ಮನುಷ್ಯರನ್ನಾಗಿ ಮಾಡುತ್ತದೆ ಎಂದು ಮೋಹನ್ ಭಾಗವತ್ ಮತಾಂತರ ವಿರುದ್ಧ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: RSS Baithak: ಧಾರವಾಡದಲ್ಲಿ ರಾಷ್ಟ್ರೀಯ ಮಟ್ಟದ ಆರ್​ಎಸ್​ಎಸ್​ ಬೈಠಕ್​ಗೆ ಮೋಹನ್ ಭಾಗವತ್ ಚಾಲನೆ

ನೀವು ಮತಾಂತರಗೊಂಡಿದ್ದರೆ ಅದನ್ನು ಬಹಿರಂಗಪಡಿಸಿ, ಎರಡೆರಡು ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ: ಆರ್‌ಎಸ್‌ಎಸ್

TV9 Kannada


Leave a Reply

Your email address will not be published. Required fields are marked *