ಪಾಟ್ನಾ: ಜನಪ್ರಿಯ ವೆಬ್​ ಸಿರೀಸ್ MONEY HEIST ಮಾದರಿಯಲ್ಲೇ ಪಾಟ್ನಾದ ಹಾಜಿಪುರ್​ ಬ್ರಾಂಚ್​ನ ಹೆಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಬರೋಬ್ಬರಿ 1,19,00,000 ಹಣ ಕದ್ದು ಚೀಲದಲ್ಲಿ ತುಂಬಿಕೊಂಡು ಖದೀಮರು ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಕನ್ನ ಹಾಕಿದ ಕಳ್ಳರು ಚೀಲದಲ್ಲಿ ಹಣ ತುಂಬಿಕೊಂಡು ಹೊರನಡೆಯುತ್ತಿರುವ ದೃಶ್ಯ ಸೆರೆಯಾಗಿದೆ.

ವರದಿಗಳ ಪ್ರಕಾರ ಕಳ್ಳರು ಬ್ಯಾಂಕ್​ ಪ್ರವೇಶಿಸಿ ಅಲ್ಲಿಂದ ಸಿಬ್ಬಂದಿಯನ್ನ ಒತ್ತೆಯಾಳುಗಳನ್ನಾಗಿರಿಸಿಕೊಂಡು ಹಣವನ್ನ ಲೂಟಿ ಮಾಡಿ ಚೀಲದಲ್ಲಿ ತುಂಬಿಕೊಂಡು ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇದೆಲ್ಲವೂ ಜಸ್ಟ್ 4 ನಿಮಿಷಗಳಲ್ಲಿ ನಡೆದಿದೆ.

ಇನ್ನು ಘಟನೆಯನ್ನ ಕಣ್ಣಾರೆ ಕಂಡವರು ಹೇಳಿರುವ ಪ್ರಕಾರ.. ಬೆಳ್ಳಂಬೆಳಗ್ಗೆ ಬ್ಯಾಂಕ್ ಓಪನ್ ಆಗುತ್ತಲೇ ಕಳ್ಳರು ಒಳಗೆ ನುಗ್ಗಿದ್ದಾರೆ. ಮೊದಲು ಒಳಗಿನಿಂದ ಬ್ಯಾಂಕ್​ನ ಡೋರ್ ಲಾಕ್ ಮಾಡಿಕೊಂಡಿದ್ದಾರೆ. ನಂತರ ಒಳಗಿದ್ದ ಬ್ಯಾಂಕ್ ಸಿಬ್ಬಂದಿ ಹಾಗೂ ಕಸ್ಟಮರ್​ಗಳನ್ನ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡು ಗನ್ ತೋರಿಸಿ ಬೆದರಿಸಿದ್ದಾರೆ. ಈ ವೇಳೆ ಹಣವನ್ನ ಲೂಟಿ ಮಾಡಿದ್ದಾರೆ.

ಘಟನೆ ಬೆಳಕಿಗೆ ಬರುತ್ತಲೇ ಪೊಲೀಸರು ಇಡೀ ಜಿಲ್ಲೆಯ ಬಾರ್ಡರ್​ಗಳನ್ನ ಸೀಲ್ ಮಾಡಿಸಿದ್ದಾರೆ. ಇನ್ನು ಘಟನೆ ನಡೆದ ಸ್ಥಳ ಕೇಂದ್ರ ಸಚಿವ ನಿತ್ಯಾನಂದ ರೈ ಅವರ ನಿವಾಸದ ಪಕ್ಕದಲ್ಲೇ ಎನ್ನಲಾಗಿದೆ. ಸಿಸಿಟಿವಿಯಲ್ಲಿ ಸಿಕ್ಕ ದೃಶ್ಯಾವಳಿಯನ್ನಾಧರಿಸಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

The post MONEY HEIST ಮಾದರಿ ರಾಬರಿ: 4 ನಿಮಿಷದಲ್ಲಿ ₹1.90 ಕೋಟಿ ದೋಚಿದ ಕಳ್ಳರು appeared first on News First Kannada.

Source: newsfirstlive.com

Source link