
ಮಂಕಿಪಾಕ್ಸ್ ರೋಗ
ಚಿಕನ್ ಪಾಕ್ಸ್ನಂತೆಯೇ ಮಂಕಿ ಪಾಕ್ಸ್ ಕೂಡ ಮಾರಕವಾಗಿದೆ. ನೈಜೀರಿಯಾ, ದಕ್ಷಿಣ ಆಫ್ರಿಕಾ, ಅಮೆರಿಕ ದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸದ್ಯ ಈಗ ಜನರು ಕೋತಿಗಳ ಬಗ್ಗೆ ಎಚ್ಚರ ವಹಿಸುತ್ತಿದ್ದಾರೆ. ಬನ್ನೇರುಘಟ್ಟ ಉದ್ಯಾನ, ಮುತ್ಯಾಲ ಮಡುವಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಂಗಗಳಿದ್ದು ಮಂಗಗಳಿಂದ ಜ್ವರ ಹರಡುವ ಭೀತಿಯಲ್ಲಿ ಪ್ರವಾಸಿಗರಿದ್ದಾರೆ.
ಆನೇಕಲ್: ಮಹಾಮಾರಿ ಕೊರೊನಾ ವೈರಸ್ ಕಳೆದೆರಡು ವರ್ಷಗಳಿಂದ ಜನರನ್ನು ನರಕ ಅನುಭವಿಸುವಂತೆ ಮಾಡಿದೆ. ಹೀಗಿರುವಾಗ್ಲೇ ಸೋಂಕಿತ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್ ಮಂಕಿಪಾಕ್ಸ್ ಆರ್ಭಟ ಶುರು ಆಗಿದೆ. ಮೊದಲ ಪ್ರಕರಣ ಯುಕೆನಲ್ಲಿ ಪತ್ತೆಯಾಗಿದ್ದು, ಈಗ ಒಂದೊಂದೇ ದೇಶಗಳಿಗೆ ಲಗ್ಗೆ ಇಡ್ತಿದೆ. ಅಮೆರಿಕಾ, ಫ್ರಾನ್ಸ್, ಜರ್ಮನಿ, ಕೆನಡ, ಬ್ರಿಟನ್, ಬೆಲ್ಜಿಯಂ, ಯುರೋಪ್ ಮತ್ತು ಪೋರ್ಚುಗಲ್ನಲ್ಲಿ 40ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣ ಕಾಣಿಸಿಕೊಂಡಿವೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಕಿ ಪಾಕ್ಸ್ ವೈರಸ್ ಚರ್ಚೆ ಶುರುವಾಗುತ್ತಿದ್ದಂತೆ ಬನ್ನೇರುಘಟ್ಟ ಪಾರ್ಕ್ ಸುತ್ತಲಿನ ಜನಕ್ಕೆ ಮಂಕಿ ಪಾಕ್ಸ್ ಭಯ ಉಂಟಾಗಿದೆ.
ಚಿಕನ್ ಪಾಕ್ಸ್ನಂತೆಯೇ ಮಂಕಿ ಪಾಕ್ಸ್ ಕೂಡ ಮಾರಕವಾಗಿದೆ. ನೈಜೀರಿಯಾ, ದಕ್ಷಿಣ ಆಫ್ರಿಕಾ, ಅಮೆರಿಕ ದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸದ್ಯ ಈಗ ಜನರು ಕೋತಿಗಳ ಬಗ್ಗೆ ಎಚ್ಚರ ವಹಿಸುತ್ತಿದ್ದಾರೆ. ಬನ್ನೇರುಘಟ್ಟ ಉದ್ಯಾನ, ಮುತ್ಯಾಲ ಮಡುವಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಂಗಗಳಿದ್ದು ಮಂಗಗಳಿಂದ ಜ್ವರ ಹರಡುವ ಭೀತಿಯಲ್ಲಿ ಪ್ರವಾಸಿಗರಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ಹೆಚ್ಚಿನ ಮಾಹಿತಿ ಪಡೆಯುತ್ತಿದೆ. ಖುಷಿಯ ವಿಚಾರವೆಂದರೆ ಭಾರತದಲ್ಲಿ ಇನ್ನೂ ಮಂಕಿ ಪಾಕ್ಸ್ ವೈರಸ್ ಕಾಣಿಸಿಕೊಂಡಿಲ್ಲ.