
Image Credit source: Money Control
ಮಂಕಿಪಾಕ್ಸ್ ಸಾವಿನ ಪ್ರಮಾಣವು ಸಿಡುಬಿಗಿಂತ ತುಂಬಾ ಕಡಿಮೆಯಾಗಿದ್ದರೂ ಇದರ ಹರಡುವಿಕೆ ಪ್ರಮಾಣವನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮುಂದೆ ಇನ್ನಷ್ಟು ಹೆಚ್ಚು ಅಪಾಯ ಎದುರಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ನವದೆಹಲಿ: 58 ದೇಶಗಳಲ್ಲಿ 3,417 ಮಂಕಿಪಾಕ್ಸ್ ಪ್ರಕರಣಗಳು (Monkeypox Cases) ವರದಿಯಾದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ನೆಟ್ವರ್ಕ್ (WHN) ಮಂಕಿಪಾಕ್ಸ್ ರೋಗವನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕೊವಿಡ್ ಸಾಂಕ್ರಾಮಿಕ ರೋಗದ ಬೆನ್ನಲ್ಲೇ ಇದೀಗ ಕಾಣಿಸಿಕೊಂಡಿರುವ ಮಂಕಿಪಾಕ್ಸ್ ಇನ್ನಷ್ಟು ಆತಂಕ ಮೂಡಿಸಿದೆ. ಮಂಕಿಪಾಕ್ಸ್ ಸಾವಿನ ಪ್ರಮಾಣವು ಸಿಡುಬಿಗಿಂತ ತುಂಬಾ ಕಡಿಮೆಯಾಗಿದ್ದರೂ ಇದರ ಹರಡುವಿಕೆ ಪ್ರಮಾಣವನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮುಂದೆ ಇನ್ನಷ್ಟು ಹೆಚ್ಚು ಅಪಾಯ ಎದುರಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಕಿಪಾಕ್ಸ್ ಸಾಂಕ್ರಾಮಿಕವಾಗಿ ಎಲ್ಲ ದೇಶಗಳಿಗೂ ಹರಡಿದರೆ ಮಿಲಿಯನ್ಗಟ್ಟಲೆ ಜನರು ಸಾಯುತ್ತಾರೆ, ಅನೇಕರು ಕುರುಡರು ಮತ್ತು ಅಂಗವಿಕಲರಾಗುತ್ತಾರೆ ಎಂದು ವಿಶ್ವ ಆರೋಗ್ಯ ನೆಟ್ವರ್ಕ್ ಹೇಳಿದೆ. 58 ದೇಶಗಳಲ್ಲಿ 3,417 ದೃಢಪಡಿಸಿದ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ವರ್ಲ್ಡ್ ಹೆಲ್ತ್ ನೆಟ್ವರ್ಕ್ (WHN) ಪ್ರಸ್ತುತ ಮಂಕಿಪಾಕ್ಸ್ ಏಕಾಏಕಿ ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ.
ಏಕಾಏಕಿ ಬಹು ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ವೇಗವಾಗಿ ಹರಡುತ್ತಿದೆ. ಸಾವಿನ ಪ್ರಮಾಣವು ಸಿಡುಬಿಗಿಂತ ತುಂಬಾ ಕಡಿಮೆಯಾದರೂ, ಇದು ನಡೆಯುತ್ತಿರುವ ಹರಡುವಿಕೆಯನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಂಕಿಪಾಕ್ಸ್ನಿಂದ ಆಗುವ ವ್ಯಾಪಕ ಹಾನಿಯನ್ನು ತಡೆಗಟ್ಟಲು ಅನೇಕ ದೇಶಗಳಲ್ಲಿ ಅಥವಾ ಪ್ರಪಂಚದಾದ್ಯಂತ ಸಂಘಟಿತ ಪ್ರಯತ್ನವನ್ನು ಸಾಧಿಸುವುದು ಮಂಕಿಪಾಕ್ಸ್ ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸುವುದರ ಉದ್ದೇಶವಾಗಿದೆ.