Monkeypox alert: ಆಫ್ರಿಕಾ, ಯುರೋಪ್ ಮತ್ತು ಅಮೇರಿಕನ್ ದೇಶಗಳಗಳಲ್ಲಿ ಮಂಕಿಪಾಕ್ಸ್ ಹೊಸ ಸಾಂಕ್ರಾಮಿಕ ರೋಗ ಪತ್ತೆ | New Pandemic Monkeypox founded in Africa, Europe and America


Monkeypox alert: ಆಫ್ರಿಕಾ, ಯುರೋಪ್ ಮತ್ತು ಅಮೇರಿಕನ್ ದೇಶಗಳಗಳಲ್ಲಿ ಮಂಕಿಪಾಕ್ಸ್ ಹೊಸ ಸಾಂಕ್ರಾಮಿಕ ರೋಗ ಪತ್ತೆ

ಮಂಕಿಪಾಕ್ಸ್ ಕಾಯಿಲೆ

Image Credit source: Hindustan Times

ಮಂಕಿಪಾಕ್ಸ್ ರೋಗ ಸದ್ಯ ಆಫ್ರಿಕಾದ ದೇಶಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಈ ಸಾಂಕ್ರಾಮಿಕ ರೋಗಕ್ಕೆ ಯುರೋಪ್ ಮತ್ತು ಅಮೇರಿಕನ್ ದೇಶಗಳ ಜನರು  ತುತ್ತಾಗಿದ್ದಾರೆ.

ಕೊರೊನಾದಿಂದ ಬೆಂದು ಹೋಗಿದ್ದ ಜಗತ್ತಿಗೆ ಈಗ ಮತ್ತೊಂದು ಸಾಂಕ್ರಾಮಿಕ ರೋಗ ವಕ್ಕರಿಸುವ ಭೀತಿ ಎದುರಾಗಿದೆ. ಅದು ಮಂಕಿಪಾಕ್ಸ್ (Monkeypox) . ಈ ರೋಗದ ಲಕ್ಷಣಗಳು ಕೆಲವು ದೇಶಗಳಲ್ಲಿ ಮಾತ್ರ ಕಂಡು ಬಂದಿದೆ. ಈ ರೋಗ ಸದ್ಯ ಆಫ್ರಿಕಾದ (Africa) ದೇಶಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದು, ವೈದ್ಯರಿಗೆ ಇದು ತೆಲೆನೋವಾಗಿ ಸಂಭವಿಸಿದೆ. ಅಲ್ಲದೇ ಈ ಸಾಂಕ್ರಾಮಿಕ ರೋಗಕ್ಕೆ ಯುರೋಪ್ (Europe) ಮತ್ತು ಅಮೇರಿಕನ್ (America) ದೇಶಗಳ ಜನರು  ತುತ್ತಾಗಿದ್ದಾರೆ. ಆದರೆ ಆಫ್ರಿಕಾದಷ್ಟು ವ್ಯಾಪಕವಾಗಿ ಹಬ್ಬಿಲ್ಲ.

ಆಫ್ರಿಕಾದ ಸಾಕಷ್ಟು ಜನರು ಈ ರೋಗಕ್ಕೆ ತುತ್ತಾಗುತ್ತಿದ್ದು, ಆರೋಗ್ಯ ಅಧಿಕಾರಿಗಳು ಪ್ರಕರಣಗಳ ಪ್ರಗತಿಯ ಮೇಲೆ ನಿಗಾ ಇರಿಸಿದ್ದಾರೆ. ಅಲ್ಲದೇ ಆಫ್ರಿಕಾಕ್ಕೆ ಪ್ರಯಾಣ ಬೆಳಸಿದವರಲ್ಲೂ ಈ ರೋಗ ಕಂಡು ಬಂದಿದೆ. ಈ ರೋಗ ಹೆಚ್ಚಾಗಿ ಯುವಕರಲ್ಲಿ ಕಂಡು ಬಂದಿದ್ದು, ಇದರಿಂದ ಅಪಾಯ ಕಡಿಮೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು ಅದು ದಂಶಕಗಳು ಮತ್ತು ಪ್ರೈಮೇಟ್‌ಗಳಂತಹ ಕಾಡು ಪ್ರಾಣಿಗಳಿಂದ ಹಬ್ಬುತ್ತದೆ ಎಂದು ವರದಿಯಾಗಿದೆ. ಈ ರೋಗದ ಹೆಚ್ಚಿನ ಪ್ರಕರಣಗಳು ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ದಾಖಲಾಗಿವೆ.

TV9 Kannada


Leave a Reply

Your email address will not be published.