‘ಕೈಗಾರಿಕಾ ಉದ್ಯೋಗ ಕಾಯ್ದೆ 1946’ರ ಪ್ರಕಾರ ಉದ್ಯೋಗಿಗಳು ತಾವು ಕೆಲಸ ಮಾಡುತ್ತಿರುವ ಕಂಪನಿಯ ಹಿತಾಸಕ್ತಿಗೆ ವಿರುದ್ಧವಾಗಿ ಬೇರೊಂದು ಸಂಸ್ಥೆಯ ಪರವಾಗಿ ಕೆಲಸ ಮಾಡಬಾರದು. ಇದರಿಂದ ಉದ್ಯೋಗದಾತರ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯ ಖಾತೆ ಸಚಿವ ರಾಮೇಶ್ವರ್ ತೆಲಿ ಹೇಳಿದ್ದಾರೆ.

Image Credit source: Reuters
ನವದೆಹಲಿ: ಕೆಲವು ತಿಂಗಳುಗಳ ಹಿಂದೆ ಐಟಿ ಉದ್ಯಮ ವಲಯದಲ್ಲಿ (IT Industry) ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮೂನ್ಲೈಟಿಂಗ್ (Moonlighting) ವಿಚಾರ ಸಂಸತ್ತಿನಲ್ಲೂ ಪ್ರತಿಧ್ವನಿಸಿದೆ. ನಿಯಮಾನುಸಾರ ಮೂನ್ಲೈಟಿಂಗ್ಗೆ ಅವಕಾಶವಿಲ್ಲ. ಆದರೆ ಈ ವಿಚಾರವಾಗಿ ಯಾವುದೇ ಸಮೀಕ್ಷೆ ನಡೆಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಸರಳವಾಗಿ ಹೇಳುವುದಾದರೆ ಕಂಪನಿಯೊಂದರ ಪೂರ್ಣಾವಧಿ ಉದ್ಯೋಗಿಯು ಉದ್ಯೋಗದಾತನ ಅರಿವಿಗೆ ಬಾರದೆ ಬೇರೆ ಕಂಪನಿ ಪರ ಕಾರ್ಯನಿರ್ವಹಿಸುವುದನ್ನು ಮೂನ್ಲೈಟಿಂಗ್ ಎನ್ನಲಾಗುತ್ತದೆ. ಕೋವಿಡೋತ್ತರ ದಿನಗಳಲ್ಲಿ ಮತ್ತು ವರ್ಕ್ ಫ್ರಂ ಹೋಮ್ ಅನ್ನು ಕೆಲವು ಕಂಪನಿಗಳು ಕೊನೆಗೊಳಿಸಲು ಮುಂದಾದ ಸಂದರ್ಭದಲ್ಲಿ ಈ ಕುರಿತು ಐಟಿ ವಲಯದಲ್ಲಿ ಹೆಚ್ಚು ಚರ್ಚೆಯಾಗಿತ್ತು.
‘ಕೈಗಾರಿಕಾ ಉದ್ಯೋಗ ಕಾಯ್ದೆ 1946’ರ ಪ್ರಕಾರ ಉದ್ಯೋಗಿಗಳು ತಾವು ಕೆಲಸ ಮಾಡುತ್ತಿರುವ ಕಂಪನಿಯ ಹಿತಾಸಕ್ತಿಗೆ ವಿರುದ್ಧವಾಗಿ ಬೇರೊಂದು ಸಂಸ್ಥೆಯ ಪರವಾಗಿ ಕೆಲಸ ಮಾಡಬಾರದು. ಇದರಿಂದ ಉದ್ಯೋಗದಾತರ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯ ಖಾತೆ ಸಚಿವ ರಾಮೇಶ್ವರ್ ತೆಲಿ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.