Moto G82 5G: ಭರ್ಜರಿ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ: ಭಾರತದಲ್ಲಿ ಮೋಟೋ G82 ಸ್ಮಾರ್ಟ್‌ಫೋನ್‌ ಬಿಡುಗಡೆ | Here is the specification details of Motorola new G series smartphone Moto G82 5G


ಮೋಟೋರೊಲಾ ಕಂಪನಿ ಹೊಸ ಮೋಟೋ ಜಿ82 (Moto G82 5G) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್​​ ಇದೆ?, ಇಲ್ಲಿದೆ ನೋಡಿ ಮಾಹಿತಿ.

ಜಾಗತಿಕ ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ ಹಾಗೂ ಒನ್​ಪ್ಲಸ್​ ನಂತಹ ಘಟಾನುಘಟಿ ಮೊಬೈಲ್ ಬ್ರ್ಯಾಂಡ್​​ಗಳು ತಲೆಯೆತ್ತಿ ಮೆರೆಯುತ್ತಿರುವಾಗ ಮೋಟೋರೊಲಾ (Motorola) ಸಂಸ್ಥೆ ತನ್ನದೆಯಾದ ವಿಶೇಷ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸು ಸಾಧಿಸುತ್ತಿದೆ. ಭಾರತದಲ್ಲಿ ಕೂಡ ಮೋಟೋ ಕಂಪನಿಯ ಫೋನ್​ಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ಇತ್ತೀಚೆಗಷ್ಟೆ ಮೋಟೋರೊಲಾ ಕಂಪನಿ ಸದ್ದಿಲ್ಲದೆ ಮೋಟೋ ಇ 32ಎಸ್ (Moto E32s) ಸ್ಮಾರ್ಟ್‌ಫೋನ್‌ ಅನ್ನು ದೇಶದಲ್ಲಿ ಲಾಂಚ್‌ ಮಾಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಹೊಸ ಮೋಟೋ ಜಿ82 (Moto G82 5G) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನಿನ ವಿಶೇಷತೆ ಅಂದರೆ ಇದರ ಮುಖ್ಯ ಕ್ಯಾಮರಾ OIS ಬೆಂಬಲವನ್ನು ಹೊಂದಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್​​ ಇದೆ?, ಇಲ್ಲಿದೆ ನೋಡಿ ಮಾಹಿತಿ.

TV9 Kannada


Leave a Reply

Your email address will not be published.