ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಆಕ್ಷನ್ಗೂ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕ್ಯಾಪ್ಟನ್ ಎಂ.ಎಸ್ ಧೋನಿ ಜತೆಗೆ ಸ್ಟಾರ್ ಆಲ್ರೌಂಡರ್ ರವೀಂದ್ರಾ ಜಡೇಜಾರನ್ನು ರೀಟೈನ್ ಮಾಡಿಕೊಂಡಿದೆ. ಸುಮಾರು ಬರೋಬ್ಬರಿ 10 ವರ್ಷಗಳಿಂದ ಚೆನ್ನೈ ತಂಡದ ಪರ ಆಡುತ್ತಿರೋ ಜಡೇಜಾ, ಎಂ.ಎಸ್ ಧೋನಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದಾರೆ.
ತನ್ನ ಫ್ರಾಂಚೈಸಿಯ ಅಧಿಕೃತ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ರವೀಂದ್ರ ಜಡೇಜಾ, ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನನ್ನ ಬೆಸ್ಟ್ ಬ್ಯಾಟಿಂಗ್ ಪಾರ್ಟ್‌ನರ್ ಎಂದು ಎಂದಿದ್ದಾರೆ.
ಫ್ರಾಂಚೈಸಿ ಆಟಗಾರರನ್ನ ಚೆನ್ನಾಗಿ ನೋಡಿಕೊಳ್ಳುತ್ತದೆ. ಹೀಗಾಗಿ ಫ್ರಾಂಚೈಸಿ ನಮ್ಮ ಮನೆಯಂತೆ ಭಾಸವಾಗುತ್ತದೆ. ನನ್ನನ್ನು ರೀಟೈನ್ ಮಾಡಿಕೊಂಡ ಧೋನಿ ಮತ್ತು ಸಿಎಸ್ಕೆ ತಂಡಕ್ಕೆ ಧನ್ಯವಾದಗಳು ಎಂದರು ಜಡ್ಡು.