MS Dhoni: ಗುರೂಜಿ ಅವತಾರದಲ್ಲಿ ಮಿಂಚಿದ ಧೋನಿ; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಖತ್ ವೈರಲ್ | Team india former captain mahendra singh dhoni pandit avatar photos viral on social media


MS Dhoni: ಈ ಲುಕ್‌ನಲ್ಲಿ ಧೋನಿ ಹಳದಿ ಬಣ್ಣದ ಕುರ್ತಾ ಧರಿಸಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಈ ವೈರಲ್ ಫೋಟೋದಲ್ಲಿ, ಧೋನಿ ಕೈಯಲ್ಲಿ ಜಪಮಾಲೆಯೂ ಕಂಡುಬರುತ್ತದೆ.

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ತಮ್ಮ ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ವಿದಾಯ ಹೇಳಿದ ಬಳಿಕ ತಮ್ಮ ನೆಚ್ಚಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಸೋಶಿಯಲ್ ಮೀಡಿಯಾಗಳಿಂದ (social media) ಆದಷ್ಟು ಅಂತರ ಕಾಯ್ದುಕೊಳ್ಳುವ ಧೋನಿ, ಅಪರೂಪಕ್ಕೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುತ್ತಾರೆ. ಮಹೇಂದ್ರ ಸಿಂಗ್ ಧೋನಿ ಯಾವುದೇ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡರೆ, ಅದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತಿದೆ. ಇತ್ತೀಚಿಗೆ ಅಂತಹದೊಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ವಾಸ್ತವವಾಗಿ, ಈ ಚಿತ್ರದಲ್ಲಿ, ಧೋನಿ ಗುರೂಜಿ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ, ಟೀಂ ಇಂಡಿಯಾದ ಲೆಜೆಂಡರಿ ನಾಯಕರಲ್ಲಿ ಒಬ್ಬರೆಂದು ಹೆಸರುವಾಸಿಯಾಗಿರುವುದು ಗೊತ್ತೇ ಇದೆ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಪಂಡಿತ್ ವೇಷದಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಲುಕ್‌ನಲ್ಲಿ ಧೋನಿ ಹಳದಿ ಬಣ್ಣದ ಕುರ್ತಾ ಧರಿಸಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಈ ವೈರಲ್ ಫೋಟೋದಲ್ಲಿ, ಧೋನಿ ಕೈಯಲ್ಲಿ ಜಪಮಾಲೆಯೂ ಕಂಡುಬರುತ್ತದೆ. ವೈರಲ್ ಆದ ಫೋಟೋ ಧೋನಿಯ ಹೊಸ ಜಾಹೀರಾತಿರಬಹುದೆಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್​ಗೆ ಧೋನಿ ವಿದಾಯ ಹೇಳಿದ್ದರೂ ಐಪಿಎಲ್​ನಲ್ಲಿ ಧೋನಿ ವೈಭವ ಕಾಣುತ್ತಲೇ ಇದೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರುವ ಧೋನಿಯ ಆಟವನ್ನು ಈ ಪಂದ್ಯಾವಳಿಯಲ್ಲಿ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಯಾವಾಗಲೂ ಕಾತುರರಾಗಿರುತ್ತಾರೆ.

TV9 Kannada


Leave a Reply

Your email address will not be published. Required fields are marked *