MS Dhoni: ಪ್ಲೇ ಆಫ್ ಪ್ರವೇಶಿಸುತ್ತೀರಾ? ಪ್ರಶ್ನೆಗೆ ಎಂಎಸ್ ಧೋನಿ ಖಡಕ್ ಉತ್ತರ: ಏನು ಹೇಳಿದ್ರು ಕೇಳಿ | MS Dhoni in post match presentation said if we dont into IPL 2022 playoffs its not the end of the world


MS Dhoni: ಪ್ಲೇ ಆಫ್ ಪ್ರವೇಶಿಸುತ್ತೀರಾ? ಪ್ರಶ್ನೆಗೆ ಎಂಎಸ್ ಧೋನಿ ಖಡಕ್ ಉತ್ತರ: ಏನು ಹೇಳಿದ್ರು ಕೇಳಿ

MS Dhoni post-match presentation CSK vs DC

CSK vs DC, IPL 2022: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಬರೋಬ್ಬರಿ 91 ರನ್​ಗಳ ಅಂತರದಿಂದ ಗೆದ್ದು ಬೀಗಿತು. ಪಂದ್ಯ ಮುಗಿದ ಬಳಿಕ ಸಿಎಸ್​ಕೆ ನಾಯಕ ಎಂಎಸ್ ಧೋನಿ ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ನೋಡಿ.

ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಆರ್​ಸಿಬಿ (SRH vs RCB) ಗೆದ್ದರೆ ಎರಡನೇ ಪಂದ್ಯ ಕೂಡ ರಣರೋಚಕವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ (CSK vs DC) ತಂಡ ಬರೋಬ್ಬರಿ 91 ರನ್​ಗಳ ಅಂತರದಿಂದ ಗೆದ್ದು ಬೀಗಿತು. ಹೈ ಸ್ಕೋರ್ ಗೇಮ್​ನಲ್ಲಿ ರಿಷಭ್ ಪಂತ್ ಪಡೆ ಸಿಎಸ್​ಕೆ ಬೌಲಿಂಗ್ ದಾಳಿಕೆ ತತ್ತರಿಸಿ ಹೋಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ಆರಂಭಿಕ ಬ್ಯಾಟರ್‌ಗಳಾದ ಡೆವೊನ್ ಕಾನ್ವೇ (87 ರನ್) ಹಾಗೂ ರುತುರಾಜ್ ಗಾಯಕ್ವಾಡ್ (41 ರನ್) ಅವರ ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 208 ರನ್ ಪೇರಿಸಿತು. ಪ್ರತಿಯಾಗಿ ಡೆಲ್ಲಿ ತಂಡ 17.4 ಓವರ್‌ಗಳಲ್ಲಿ 117 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಡೆಲ್ಲಿ ಪ್ಲೇ ಆಫ್ ಹಾದಿ ಕಠಿಣಗೊಂಡಿದೆ. ಪಂದ್ಯ ಮುಗಿದ ಬಳಿಕ ಸಿಎಸ್​ಕೆ ನಾಯಕ ಎಂಎಸ್ ಧೋನಿ (MS Dhoni) ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ನೋಡಿ.

“ಈ ಗೆಲುವು ತುಂಬಾ ಸಹಾಯವಾಗಿದೆ. ಇದಕ್ಕಿಂತ ಮೊದಲು ನಾವು ಈರೀತಿಯ ಜಯ ಕಂಡಿದ್ದರೆ ಇನ್ನಷ್ಟು ಸಹಾಯ ಆಗುತ್ತಿತ್ತು. ಇದೊಂದು ಅತ್ಯುತ್ತಮ ಪಂದ್ಯ. ಬ್ಯಾಟರ್​ಗಳು ಬೊಂಬಾಟ್ ಪ್ರದರ್ಶನ ತೋರಿದರು. ಟಾಸ್ ಗೆದ್ದಾಗ ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ವಾಡಿಕೆ ಆದರೆ, ಈ ಬಾರಿ ನಾನು ಟಾಸ್ ಸೋತರೂ ಪರವಾಗಿಲ್ಲ ಅಂದುಕೊಂಡಿದ್ದೆ. 13-14 ಓವರ್​ಗ ನಂತರ ಚೆಂಡು ನಿಂತು ಬರುತ್ತಿತ್ತು. ಎಲ್ಲರೂ ಒಂದಿಷ್ಟು ಕೊಡುಗೆ ನೀಡಿದ್ದಾರೆ. ಡೆಲ್ಲಿ ತಂಡದ ಬಿಗ್ ಹಿಟ್ಟರ್​ಗಳನ್ನು ತಡೆದು ನಿಲ್ಲಿಸುವುದು ದೊಡ್ಡ ಸವಾಲಾಗಿತ್ತು. ಸಿಮರ್ಜೀತ್ ಮತ್ತು ಮುಖೇಶ್ ಇಬ್ಬರೂ ಪ್ರಬುದ್ಧರಾಗಲು ಸಮಯ ತೆಗೆದುಕೊಂಡಿದ್ದಾರೆ. ಅವರಿಗೆ ಆ ಸಾಮರ್ಥ್ಯವಿದೆ. ಬೌಲ್ ಮಾಡಲು ಉತ್ತಮ ಎಸೆತ ಯಾವುದು ಮತ್ತು ಬೌಲ್ ಮಾಡದಿರುವ ಎಸೆತ ಯಾವುದು ಎಂಬ ಅರಿವು ಇರಬೇಕು. ಟಿ20 ಕ್ರಿಕೆಟ್‌ನಲ್ಲಿ, ಯಾವ ಎಸೆತವನ್ನು ಬೌಲ್ ಮಾಡಬಾರದು ಎಂಬುದು ತಿಳಿದಿರುವುದು ಮುಖ್ಯ,” ಎಂದು ಹೇಳಿದ್ದಾರೆ.

“ಸಾಮಾನ್ಯವಾಗಿ ನನಗೆ ನೇರವಾದ ಹೊಡೆತಗಳನ್ನು ಹೊಡೆಯಲು ಇಷ್ಟವಿಲ್ಲ. ಆದರೆ, 12 ಎಸೆತಗಳು ಬಾಕಿ ಇರುವಾಗ 2 ಎಸೆತಗಳಲ್ಲಿ 8 ರನ್ ಗಳಿಸಿದರೂ ಅದು ತಂಡಕ್ಕೆ ಸಹಾಯವಾಗುತ್ತದೆ. 2, 3 ರನ್​ಗಳು ಸಹಾಯ ಮಾಡುವುದಿಲ್ಲ,” ಎಂದಿದ್ದಾರೆ.  ಇದೇವೇಳೆ ಪ್ಲೇ ಆಫ್​​ ಪ್ರವೇಶಿಸುವ ಬಗ್ಗೆ ಪ್ರಶ್ನೆ ಕೇಳಿದಾಗ ಉತ್ತರಿಸಿದ ಧೋನಿ, “ನಾನು ಲೆಕ್ಕದ ಅಭಿಮಾನಿಯಲ್ಲ. ಸ್ಕೂಲ್​ನಲ್ಲೂ ನಾನು ಲೆಕ್ಕದಲ್ಲಿ ಹಿಂದೆ. ನೆಟ್​ರನ್​ರೇಟ್ ಬಗ್ಗೆ ಯೋಚಿಸಿದರೆ ಅದು ಉಪಯೋಗಕ್ಕಿಲ್ಲ. ನೀವು ಐಪಿಎಲ್ ಅನ್ನು ಆನಂದಿಸಬೇಕು. ಇತರೆ ಎರಡು ತಂಡಗಳು ಆಡುತ್ತಿರುವಾಗ ನೀವು ಅದರ ಬಗ್ಗೆ ಯೋಚಿಸಬಾರದರು. ನೀವು ಕೇವಲ ಮುಂದಿನ ಪಂದ್ಯದಲ್ಲಿ ಏನು ಮಾಡಲು ಸಾಧ್ಯ ಎಂದಷ್ಟೆ ಯೋಚಿಸಬೇಕು. ನಾವು ಪ್ಲೇ ಆಫ್ ಪ್ರವೇಶಿಸಿದರೆ ಅತ್ಯುತ್ತಮ ಆಗಿರುತ್ತದೆ. ಹಾಗೆಯೆ ನಾವು ಪ್ಲೇ ಆಫ್ ಪ್ರೇಶಿಸದಿದ್ದರೆ ಅದು ಪ್ರಪಂಚದ ಅಂತ್ಯ ಅಲ್ಲ,” ಎಂಬುದು ಧೋನಿ ಮಾತು.

ಸೋತ ತಂಡದ ನಾಯಕ ರಿಷಭ್ ಪಂತ್ ಮಾತನಾಡಿ, “ಎಲ್ಲ ವಿಭಾಗಗಳಲ್ಲಿ ಸಿಎಸ್​ಕೆ ಉತ್ತಮ ಪ್ರದರ್ಶನ ತೋರಿತು. ನಾನು ಸಾಕಷ್ಟು ಕ್ಲೋಸ್ ಗೇಮ್ ಆಡಿದ್ದೇವೆ. ನಾವು ಇನ್ನಷ್ಟು ಚೆನ್ನಾಗಿ ಬ್ಯಾಟಿಂಗ್-ಬೌಲಿಂಗ್ ಮಾಡಬಹುದಿತ್ತು. ಇನ್ನೇನಿದ್ದರು ಮೂರು ಪಂದ್ಯದ ಬಗ್ಗೆ ಗಮನ ಹರಿಸಬೇಕು. ಆ ಎಲ್ಲ ಪಂದ್ಯ ಗೆದ್ದರೆ ನಾವು ಕ್ವಾಲಿಫೈ ಆಗುತ್ತೇವೆ. ನಮ್ಮ ತಂಡದಲ್ಲಿ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದೆಲ್ಲ ಕಾರಣ ನೀಡಿದರೆ ಆಗದು ನಾವು ಸುಧಾರಿಸಬೇಕಿದೆ,” ಎಂದು ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *