ರಂಜಾನ್ ನಂತರ ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್ನ ಪವಿತ್ರ ತಿಂಗಳು. ಈ ತಿಂಗಳಲ್ಲಿ, ಶಿಯಾ ಮುಸ್ಲಿಮರು ಯುದ್ಧಭೂಮಿಯಲ್ಲಿ ಆದ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ಮರಣಕ್ಕೆ ಶೋಕಿಸುತ್ತಾರೆ.

ಸಾಂದರ್ಭಿಕ ಚಿತ್ರ
ಇಸ್ಲಾಮಿಕ್ ಕ್ಯಾಲೆಂಡರ್ನ(Islamic Calendar) ಪ್ರಕಾರ ಮೊಹರಂ(Muharram) ಮೊದಲ ತಿಂಗಳಾಗಿದೆ. ಅಂದರೆ ಹೊಸ ವರ್ಷಾ ಹೀಗಾಗಿ ಮೊಹರಂ ಅನ್ನು ಹಿಜ್ರಿ ಎಂದೂ ಸಹ ಕರೆಯುತ್ತಾರೆ. ಮೊಹರಂ ಇಸ್ಲಾಂನಲ್ಲಿ ಅಪಾರ ಪ್ರಾಮುಖ್ಯತೆಯನ್ನು ಹೊಂದಿರುವ ತಿಂಗಳು ಮತ್ತು ಮುಸ್ಲಿಂ ಸಮುದಾಯದವರು ಆಚರಿಸುವ ಪವಿತ್ರ ತಿಂಗಳುಗಳಲ್ಲಿ ಇದೂ ಒಂದು. ಮೊಹರಂ ಹಿಂದೂ-ಮುಸ್ಲಿಂರ ಭಾವೈಕ್ಯತೆ ಸಾರುವ ಹಬ್ಬ. ಈ ಹಬ್ಬದಲ್ಲಿ ಯಾವುದೇ ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಂಡು ಹಬ್ಬವನ್ನು ಆಚರಿಸುತ್ತಾರೆ. ಹತ್ತು ದಿನಗಳವರೆಗೆ ಮೊಹರಂ ಆಚರಣೆ ನಡೆಯುತ್ತದೆ. ಈ ವರ್ಷ ಮೊಹರಂ ಜುಲೈ 29 ರಂದು ಪ್ರಾರಂಭವಾಗಿದೆ ಮತ್ತು ಆಗಸ್ಟ್ 28ಕ್ಕೆ ಕೊನೆಗೊಳ್ಳುತ್ತದೆ.
ಮೊಹರಂ ಇತಿಹಾಸ
ರಂಜಾನ್ ನಂತರ ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್ನ ಪವಿತ್ರ ತಿಂಗಳು. ಈ ತಿಂಗಳಲ್ಲಿ, ಶಿಯಾ ಮುಸ್ಲಿಮರು ಯುದ್ಧಭೂಮಿಯಲ್ಲಿ ಆದ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ಮರಣಕ್ಕೆ ಶೋಕಿಸುತ್ತಾರೆ. ಕರ್ಬಲಾ ಯುದ್ಧವು ಇಮಾಮ್ ಹುಸೇನ್ ಮತ್ತು ಉಮಯ್ಯದ್ ಖಲೀಫ್ ಯಾಜಿದ್ I ನಡುವೆ ನಡೆಯಿತು. ಯುದ್ಧದ ಸಮಯದಲ್ಲಿ, ಇಮಾಮ್ ಹುಸೇನ್ ರನ್ನು ಮೋಸದಿಂದ ಕೊಲ್ಲಲಾಯಿತು. ಅವರ ಹುತಾತ್ಮತೆಯನ್ನು ಅಶುರಾ ಎಂದು ಕರೆಯಲಾಗುವ ಈ ತಿಂಗಳ ಹತ್ತನೇ ದಿನದಂದು ಶೋಕ ಮೆರವಣಿಗೆಗಳೊಂದಿಗೆ ಆಚರಿಸಲಾಗುತ್ತದೆ.