Muhurat Trading: ಮುಹೂರ್ತ ಟ್ರೇಡಿಂಗ್​​ನಲ್ಲಿ ಸೆನ್ಸೆಕ್ಸ್ 296 ಪಾಯಿಂಟ್ಸ್, ನಿಫ್ಟಿ 92 ಪಾಯಿಂಟ್ಸ್ ಹೆಚ್ಚಳ | Muhurat Trading Sensex Regain 60500 Points And Nifty 50 Index Near 18000 Points


Muhurat Trading: ಮುಹೂರ್ತ ಟ್ರೇಡಿಂಗ್​​ನಲ್ಲಿ ಸೆನ್ಸೆಕ್ಸ್ 296 ಪಾಯಿಂಟ್ಸ್, ನಿಫ್ಟಿ 92 ಪಾಯಿಂಟ್ಸ್ ಹೆಚ್ಚಳ

ಸಾಂದರ್ಭಿಕ ಚಿತ್ರ

ಮುಹೂರ್ತ ಟ್ರೇಡಿಂಗ್ ಸೆಷನ್​ನಲ್ಲಿ ಸೆನ್ಸೆಕ್ಸ್ ನವೆಂಬರ್ 4ನೇ ತಾರೀಕಿನ ಗುರುವಾರದಂದು ಮತ್ತೆ 60,500 ಪಾಯಿಂಟ್ಸ್ ಕಂಡಿತು. ಇನ್ನು ನಿಫ್ಟಿ 50 ಸೂಚ್ಯಂಕವು 18000 ಪಾಯಿಂಟ್ಸ್ ಸಮೀಪ ಬಂದಿತು. ಈ ಬಾರಿಯ ಮುಹೂರ್ತ ವಹಿವಾಟಿನಲ್ಲಿ ಹೂಡಿಕೆದಾರರಿಗೆ ಉತ್ತಮ ರಿಟರ್ನ್ಸ್ ನೀಡುವ ಸೂಚನೆಯನ್ನು ಪ್ರೀ-ಓಪನ್ ಸೆಷನ್​ನಲ್ಲಿ ನೀಡಿತು. ಆ ನಂತರ ವಹಿವಾಟಿನ ಕೊನೆಗೆ ಬಿಎಸ್​ಇ ಸೆನ್ಸೆಕ್ಸ್ 295.70 ಪಾಯಿಂಟ್ಸ್ ಅಥವಾ ಶೇ 0.49ರಷ್ಟು ಮೇಲೇರಿ 60,067.62 ಪಾಯಿಂಟ್ಸ್​ನೊಂದಿಗೆ ವ್ಯವಹಾರ ಮುಗಿಸಿತು. ಇನ್ನು ನಿಫ್ಟಿ 50 ಸೂಚ್ಯಂಕವು 91.80 ಪಾಯಿಂಟ್ಸ್ ಅಥವಾ ಶೇ 0.51ರಷ್ಟು ಮೇಲೇರಿ 17,921 ಪಾಯಿಂಟ್ಸ್​ನಲ್ಲಿ ವಹಿವಾಟು ಕೊನೆಗೊಳಿಸಿತು.

2535 ಕಂಪೆನಿಯ ಷೇರುಗಳು ಏರಿಕೆಯನ್ನು ದಾಖಲಿಸಿದರೆ, 514 ಕಂಪೆನಿಯ ಷೇರುಗಳು ಇಳಿಕೆ ಕಂಡವು. ಮತ್ತು 146 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ವಲಯವಾರು ನೋಡುವುದಾದರೆ, ವಾಹನ ಮತ್ತು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳ ಸೂಚ್ಯಂಕ ತಲಾ ಶೇ 1ರಷ್ಟು ಹೆಚ್ಚಳವಾದವು. ಮಿಡ್​ಕ್ಯಾಪ್ ಹಾಗೂ ಸ್ಮಾಲ್​ಕ್ಯಾಪ್​ ಸೂಚ್ಯಂಕಗಳು ಶೇ 0.5ರಿಂದ ಶೇ 1ರ ತನಕ ತಲಾ ಹೆಚ್ಚಳವಾದವು,

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಐಷರ್ ಮೋಟಾರ್ಸ್ ಶೇ 5.54
ಮಹೀಂದ್ರಾ ಅಂಡ್ ಮಹೀಂದ್ರಾ ಶೇ 2.81
ಐಟಿಸಿ ಶೇ 1.84
ಬಜಾಜ್ ಆಟೋ ಶೇ 1.65
ಐಒಸಿ ಶೇ 1.58

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಹಿಂಡಾಲ್ಕೋ ಶೇ -1.19
ಐಸಿಐಸಿಐ ಬ್ಯಾಂಕ್​ ಶೇ -0.49
ಏಷ್ಯನ್ ಪೇಂಟ್ಸ್ ಶೇ -0.36
ಜೆಎಸ್​ಡಬ್ಲ್ಯು ಸ್ಟೀಲ್ ಶೇ -0.24
ಸಿಪ್ಲಾ ಶೇ -0.21

ಇದನ್ನೂ ಓದಿ: Diwali Muhurat Trading: ದೀಪಾವಳಿ ಹಬ್ಬದ ಮುಹೂರ್ತ ಟ್ರೇಡಿಂಗ್​ಗೆ ಹೂಡಿಕೆ ತಜ್ಞರಿಂದ 5 ಕಂಪೆನಿಯ ಷೇರು ಶಿಫಾರಸು

TV9 Kannada


Leave a Reply

Your email address will not be published. Required fields are marked *