Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ | Investments Of Rs 1 Lakh In This Multibagger Penny Stock Becomes Rs 4 Crore In 10 Years


Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ

ಸಾಂದರ್ಭಿಕ ಚಿತ್ರ

ಪೆನ್ನಿ ಸ್ಟಾಕ್‌ಗಳಲ್ಲಿ (Penny Stocks) ಹೂಡಿಕೆ ಮಾಡುವುದು ಅಪಾಯಕಾರಿ. ಅದರಲ್ಲೂ ವಿಶೇಷವಾಗಿ ದೀರ್ಘಾವಧಿಯವರೆಗೆ ಹೂಡಿಕೆ ಮಾಡುವುದಾದರೆ ಮತ್ತೂ ಅಪಾಯವೇ. ಏಕೆಂದರೆ ಕೌಂಟರ್‌ನಲ್ಲಿ ಕಡಿಮೆ ಲಿಕ್ವಿಡಿಟಿ ಇರುವುದರಿಂದ ಹೆಚ್ಚಿನ ಚಂಚಲತೆಗೆ ಕಾರಣವಾಗುತ್ತದೆ. ಆದರೆ ನಾವು ಹಿರಿಯ ಹೂಡಿಕೆದಾರರ ದೃಷ್ಟಿಕೋನಗಳ ಮೂಲಕ ಹೋದರೆ, ಷೇರುಗಳಲ್ಲಿ ಹೂಡಿಕೆ ಮಾಡುವುದು ವ್ಯವಹಾರದಲ್ಲಿ ಹೂಡಿಕೆ ಮಾಡಿದಂತೆ. ಕಂಪೆನಿಯ ವ್ಯವಹಾರ ಮಾದರಿ ಮತ್ತು ಲಾಭದಾಯಕತೆಯು ಸುಸ್ಥಿರವಾಗಿ ಕಾಣುವವರೆಗೆ ಷೇರುಗಳಲ್ಲಿ ಹೂಡಿಕೆ ಮಾಡಬೇಕು. ಇದು ದೀರ್ಘಾವಧಿಯಲ್ಲಿ ದೊಡ್ಡ ಲಾಭವನ್ನು ನೀಡಬಹುದು. GRM ಓವರ್​ಸೀಸ್ ಷೇರುಗಳು ಅಂಥ ಇತ್ತೀಚಿನ ಉದಾಹರಣೆಗಳಲ್ಲಿ ಒಂದಾಗಿದೆ. ಕಳೆದ 10 ವರ್ಷಗಳಲ್ಲಿ ಸ್ಮಾಲ್ ಕ್ಯಾಪ್ ರೈಸ್ ಮಿಲ್ಲಿಂಗ್ ಕಂಪೆನಿಯ ಸ್ಟಾಕ್ ಬೆಲೆ ರೂ. 1.93ರಿಂದ ರೂ. 782.40ಕ್ಕೆ ಏರಿದ್ದು, ಈ ಅವಧಿಯಲ್ಲಿ ಸುಮಾರು ಶೇ 40,450ರಷ್ಟು ಏರಿಕೆಯಾಗಿದೆ.

GRM ಓವರ್​ಸೀಸ್ ಷೇರು ಬೆಲೆ ಇತಿಹಾಸ
ಕಳೆದ ಒಂದು ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಸುಮಾರು ರೂ. 505ರಿಂದ ರೂ. 782 ಮಟ್ಟಕ್ಕೆ ಏರಿದೆ. ಈ ಮೂಲಕ ಇದು ಶೇ 55ರಷ್ಟು ಹೆಚ್ಚಾಗಿದೆ. ಕಳೆದ 6 ತಿಂಗಳಲ್ಲಿ, 2022ರ ಈ ಮಲ್ಟಿಬ್ಯಾಗರ್ ಸ್ಟಾಕ್ ಸುಮಾರು ರೂ. 156ರಿಂದ ರೂ. 782ಕ್ಕೆ ಏರಿದೆ. ಈ ಅವಧಿಯಲ್ಲಿ ಸುಮಾರು ಶೇ 400ರಷ್ಟು ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಪೆನ್ನಿ ಸ್ಟಾಕ್ ರೂ.34.44ರಿಂದ ರೂ. 782.40ಕ್ಕೆ ಏರಿದ್ದು, ಈ ಅವಧಿಯಲ್ಲಿ ಸುಮಾರು 2200ರಷ್ಟು ಹೆಚ್ಚಳವಾಗಿದೆ. ಅಂತೆಯೇ, ಕಳೆದ 5 ವರ್ಷಗಳಲ್ಲಿ, ರೂ. 4.49 ರಿಂದ ರೂ. 782.40 ಮಟ್ಟಕ್ಕೆ ಏರಿದ್ದು, ಈ ಅವಧಿಯಲ್ಲಿ 17,325ರಷ್ಟು ಹೆಚ್ಚಳವಾಗಿದೆ.

ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ರೂ. 1.93 ರಿಂದ (10 ಜನವರಿ 2012ರಂದು) ರೂ. 782.40ಕ್ಕೆ (14 ಜನವರಿ 2022ರಂದು) ಏರಿಕೆಯಾಗಿದೆ. ಸುಮಾರು ಒಂದು ದಶಕದ ಈ ಅವಧಿಯಲ್ಲಿ ಸುಮಾರು 405 ಪಟ್ಟು ಏರಿಕೆಯಾಗಿದೆ.

ಹೂಡಿಕೆದಾರರ ಮೇಲೆ ಪರಿಣಾಮ
GRM ಓವರ್​ಸೀಸ್ ಷೇರಿನ ಬೆಲೆ ಇತಿಹಾಸ ನೋಡಿದರೆ ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಅದು 1.55 ಲಕ್ಷಕ್ಕೆ ಬದಲಾಗುತ್ತಿತ್ತು. ಈ ರೈಸ್ ಮಿಲ್ಲಿಂಗ್ ಪೆನ್ನಿ ಸ್ಟಾಕ್‌ನಲ್ಲಿ ಹೂಡಿಕೆದಾರರು 6 ತಿಂಗಳ ಹಿಂದೆ 1 ಲಕ್ಷ ಹೂಡಿಕೆ ಮಾಡಿದ್ದರೆ, ಇಂದು 5 ಲಕ್ಷ ರೂ. ತಲುಪಿರುತ್ತಿತ್ತು. ಕಳೆದ ಒಂದು ವರ್ಷದಲ್ಲಿ ರೂ. 23 ಲಕ್ಷಕ್ಕೆ ಬದಲಾಗಿರುತ್ತಿತ್ತು. ಹೂಡಿಕೆದಾರರು 5 ವರ್ಷಗಳ ಹಿಂದೆ ಈ ಷೇರುಗಳಲ್ಲಿ 1 ಲಕ್ಷ ಹೂಡಿಕೆ ಮಾಡಿ, ಹಾಗೇ ಷೇರುಗಳನ್ನು ಉಳಿಸಿಕೊಂಡಿದ್ದರೆ ರೂ. 1 ಲಕ್ಷ ಇಂದು ರೂ. 1.74 ಕೋಟಿಗೆ ಬದಲಾಗುತ್ತಿತ್ತು. 10 ವರ್ಷಗಳ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ, ಒಂದು ಸ್ಟಾಕ್ ಅನ್ನು ರೂ. 1.93 ಮಟ್ಟದಲ್ಲಿ ಖರೀದಿಸಿದ್ದರೆ ಆ ರೂ. 1 ಲಕ್ಷ ಇಂದು ರೂ. 4.05 ಕೋಟಿಗೆ ಬದಲಾಗುತ್ತಿತ್ತು.

TV9 Kannada


Leave a Reply

Your email address will not be published. Required fields are marked *