ಕುಡಿದ ನಶೆಯಲ್ಲಿ ನಾನು ಬೆಂಗಳೂರಿನಿಂದ 2500 ರೂಪಾಯಿ ಮೌಲ್ಯದ ಬಿರಿಯಾನಿಯನ್ನು ಆರ್ಡರ್ ಮಾಡಿದ್ದೇನೆ ಎಂದು ಸುಭಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜೊಮ್ಯಾಟೊ, ಸುಭೀ, ಆರ್ಡರ್ ನಿಮ್ಮ ಮನೆ ಬಾಗಿಲಿಗೆ ಬಂದ ನಂತರ ನಿಮ್ಮ ಹ್ಯಾಂಗೋವರ್ ಸಂತೋಷದಾಯಕವಾಗಿರುತ್ತದೆ
ಬೆಂಗಳೂರು: ಮುಂಬೈನ (Mumbai) ಯುವತಿಯೊಬ್ಬಳು ಶನಿವಾರ ಬೆಂಗಳೂರಿನ ಖ್ಯಾತ ಮೇಘನಾ ಫುಡ್ಸ್ನಿಂದ (Meghna foods) 2,500 ರೂಪಾಯಿ ಮೌಲ್ಯದ ಬಿರಿಯಾನಿ (Biryani) ಆರ್ಡರ್ ಮಾಡಿದ್ದಾರೆ. ಟ್ವಿಟರ್ನಲ್ಲಿ ತಾನು ಮದ್ಯದ ನಶೆಯಲ್ಲಿ ನೀಡಿದ ಬಿರಿಯಾನಿ ಆರ್ಡರ್ ಬಗ್ಗೆ subiii ಎಂಬ ಬಳಕೆದಾರರು ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ. ಕುಡಿದ ನಶೆಯಲ್ಲಿ ನಾನು ಬೆಂಗಳೂರಿನಿಂದ 2500 ರೂಪಾಯಿ ಮೌಲ್ಯದ ಬಿರಿಯಾನಿಯನ್ನು ಆರ್ಡರ್ ಮಾಡಿದ್ದೇನೆ ಎಂದು ಸುಭಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜೊಮ್ಯಾಟೊ, ಸುಭೀ, ಆರ್ಡರ್ ನಿಮ್ಮ ಮನೆ ಬಾಗಿಲಿಗೆ ಬಂದ ನಂತರ ನಿಮ್ಮ ಹ್ಯಾಂಗೋವರ್ ಸಂತೋಷದಾಯಕವಾಗಿರುತ್ತದೆ. ನಿಮ್ಮ ಅನುಭವದ ಬಗ್ಗೆ ಬರೆಯಿರಿ ಎಂದು ಕಾಮೆಂಟಿಸಿದೆ. ಮುಂಬೈಯ ಯುವತಿ ಬೆಂಗಳೂರಿನ ರೆಸ್ಟೋರೆಂಟ್ ನಿಂದ ಫುಡ್ ಆರ್ಡರ್ ಹೇಗೆ ಮಾಡಿದ್ದಾಳೆ ಎಂಬುದು ಎಲ್ಲರಲ್ಲಿ ಕುತೂಹಲ ಹುಟ್ಟಿಸಿದೆ. ಅಂದಹಾಗೆ Zomato Intercity Legends ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಪ್ರಸ್ತುತ ಫುಡ್ ಡೆಲಿವರಿ ಫ್ಲಾಟ್ ಫಾರ್ಮ್ ಈ ಅವಕಾಶವನ್ನು ಬಳಸಿಕೊಂಡಿದೆ.
ಜೊಮ್ಯಾಟೊ ಲೆಜೆಂಡ್ಸ್ ಎಂಬುದು Zomato ನ ಹೊಸ ಕೊಡುಗೆಯಾಗಿದ್ದು, ಇದು ಖಾದ್ಯದ ಶೆಲ್ಫ್ ಅವಧಿ ಹೆಚ್ಚಿಸುವ ಮೊಬೈಲ್ ಶೈತ್ಯೀಕರಣ ತಂತ್ರಜ್ಞಾನವನ್ನು ಬಳಸಿಕೊಂಡು ನಗರಗಳಾದ್ಯಂತ ಖ್ಯಾತ ರೆಸ್ಟೋರೆಂಟ್ಗಳಿಂದ ಭಾರತದ ಅತ್ಯಂತ ಸಾಂಪ್ರದಾಯಿಕ ಭಕ್ಷ್ಯಗಳ ವಿತರಣೆಯನ್ನು ಖಚಿತಪಡಿಸುತ್ತದೆ. ಅಂದಹಾಗೆ, ಈ ಕೊಡುಗೆಯನ್ನು ಪ್ರಯತ್ನಿಸಲು ಈ ಮಾಹಿತಿಯು ನಿಮಗೆ ಸಹಾಯ ಮಾಡುತ್ತದೆ ಎಂದು ಜೊಮ್ಯಾಟೊ ಹೇಳಿದೆ.
ತಾಜಾ ಸುದ್ದಿ
ಈ ಪೋಸ್ಟಿಗೆ ಕಾಮೆಂಟಿಸಿದ ಬಳಕೆದಾರರು ಮೇಘನಾ ಫುಡ್ಸ್ನಿಂದ ಆರ್ಡರ್ ಮಾಡಿರುವ ಯುವತಿ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
ಹೈದರಾಬಾದ್ ಬದಲು ಬೆಂಗಳೂರಿನಿಂದ ಬಿರಿಯಾನಿ ಆರ್ಡರ್ ಮಾಡಿದ ಯುವತಿ “ನಿಜವಾಗಿಯೂ ಕುಡಿದಿದ್ದಾಳೆ” ಎಂದು ನೆಟಿಜನ್ ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಕೊಲ್ಕತ್ತಾ ಬಿರಿಯಾನಿ ಬಗ್ಗೆ ಅದೇ ರೀತಿ ಹೇಳಿದರು.