Murder: ರೆಸಾರ್ಟ್​ನಲ್ಲಿ ಯುವತಿಯ ಕತ್ತು ಸೀಳಿ, ಶವದೊಂದಿಗೆ ವಿಡಿಯೋ ಮಾಡಿದ ಕೊಲೆಗಾರ! – Man Slits Woman Throat then Posts Video With Dead Body Crime News Kannada News Live


ಈ ಘಟನೆ ನಡೆದು 1 ವಾರ ಕಳೆದಿದ್ದರೂ ಶಿಲ್ಪಾ ಝರಿಯಾ ಎಂಬ 25 ವರ್ಷದ ಯುವತಿಯ ಕತ್ತು ಸೀಳಿ ಕೊಲೆ ಮಾಡಿರುವುದಾಗಿ ವಿಡಿಯೋ ಅಪ್​ಲೋಡ್ ಮಾಡಿರುವ ಅಭಿಜಿತ್ ಪಾಟಿದಾರ್‌ಗಾಗಿ ಪೊಲೀಸರು ಇನ್ನೂ ಹುಡುಕಾಟ ನಡೆಸುತ್ತಲೇ ಇದ್ದಾರೆ.

Murder: ರೆಸಾರ್ಟ್​ನಲ್ಲಿ ಯುವತಿಯ ಕತ್ತು ಸೀಳಿ, ಶವದೊಂದಿಗೆ ವಿಡಿಯೋ ಮಾಡಿದ ಕೊಲೆಗಾರ!

ಅಭಿಜಿತ್ ಪಾಟಿದಾರ್‌

ಜಬಲ್‌ಪುರ: ದೆಹಲಿಯಲ್ಲಿ (Delhi Murder Case) ತನ್ನ ಲಿವ್-ಇನ್ ಪಾರ್ಟನರ್​ ಯುವತಿಯನ್ನು ಆಕೆಯ ಪ್ರಿಯಕರನೇ ಕೊಂದು, ಮೃತದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ತುಂಬ ಬಿಸಾಡಿದ್ದ ಘಟನೆಗೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಅದರ ಬೆನ್ನಲ್ಲೇ ಇನ್ನೊಂದು ಆಘಾತಕಾರಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದಲ್ಲಿ (Madhya Pradesh) ವ್ಯಕ್ತಿಯೊಬ್ಬ ಯುವತಿಯ ಕುತ್ತಿಗೆ ಸೀಳಿ ಕೊಂದು, ಆಕೆಯ ಮೃತದೇಹದ ಜೊತೆಗೆ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ಆ ವಿಡಿಯೋವನ್ನು ತಾನೇ ಸೋಷಿಯಲ್ ಮೀಡಿಯಾದಲ್ಲಿ (Social Media) ಅಪ್​ಲೋಡ್ ಮಾಡಿದ್ದಾನೆ.

ಈ ಘಟನೆ ನಡೆದು 1 ವಾರ ಕಳೆದಿದ್ದರೂ ಶಿಲ್ಪಾ ಝರಿಯಾ ಎಂಬ 25 ವರ್ಷದ ಯುವತಿಯನ್ನು ಕತ್ತು ಸೀಳಿ ಕೊಲೆ ಮಾಡಿರುವುದಾಗಿ ವಿಡಿಯೋ ಅಪ್​ಲೋಡ್ ಮಾಡಿರುವ ಅಭಿಜಿತ್ ಪಾಟಿದಾರ್‌ಗಾಗಿ ಪೊಲೀಸರು ಇನ್ನೂ ಹುಡುಕಾಟ ನಡೆಸುತ್ತಲೇ ಇದ್ದಾರೆ. ಜಬಲ್‌ಪುರದ ಮೇಖ್ಲಾ ರೆಸಾರ್ಟ್‌ನಲ್ಲಿರುವ ಕೊಠಡಿಯಿಂದ ಆ ಯುವತಿಯ ಶವವನ್ನು ವಶಪಡಿಸಿಕೊಳ್ಳಲಾಗಿದೆ.

TV9 Kannada


Leave a Reply

Your email address will not be published.