Mysuru Dasara 2022: ಈ ಬಾರಿ ಮೈಸೂರು ದಸರಾಕ್ಕೆ ಖರ್ಚಾಗಿದ್ದೆಷ್ಟು? ಲೆಕ್ಕಕೊಟ್ಟ ಸಚಿವ ಎಸ್.ಟಿ. ಸೋಮಶೇಖರ್ – 28 croe 74 lack has expanded for Mysore Dasra said S T Somashekar in Myosre


ದಸರಾ ಉತ್ಸವ ಆಚರಣೆಗೆ ಒಟ್ಟು 31ಕೋಟಿ 8 ಲಕ್ಷ ಹಣ ಬಿಡುಗಡೆಯಾಗಿದ್ದು, ಅದರಲ್ಲಿ 28 ಕೋಟಿ 74 ಲಕ್ಷ ರೂಪಾಯಿ ವೆಚ್ಚವಾಗಿದೆ.

Mysuru Dasara 2022: ಈ ಬಾರಿ ಮೈಸೂರು ದಸರಾಕ್ಕೆ ಖರ್ಚಾಗಿದ್ದೆಷ್ಟು? ಲೆಕ್ಕಕೊಟ್ಟ ಸಚಿವ ಎಸ್.ಟಿ. ಸೋಮಶೇಖರ್

ಎಸ್ ಟಿ ಸೋಮಶೇಖರ್, ಸಚಿವರು

ಮೈಸೂರು: ಕರೊನಾದಿಂದ ಕಳೆದ 2 ವರ್ಷಗಳಿಂದ ಸರಳವಾಗಿ ಆಚರಿಸಿದ್ದ ಮೈಸೂರು ದಸರಾವನ್ನು ಈ ವರ್ಷ ವಿಜೃಂಭಣೆಯಿಂದ ಆಚರಿಸಲಾಗಿದೆ. ಮೈಸೂರು ದಸಾರದ ಖರ್ಚು ವೆಚ್ಚದ ವಿವರವನ್ನು ಇಂದು (ನ.1) ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೀಡಿದರು. ದಸರಾ ಉತ್ಸವ ಆಚರಣೆಗೆ ಒಟ್ಟು 31ಕೋಟಿ 8 ಲಕ್ಷ ಹಣ ಬಿಡುಗಡೆಯಾಗಿದ್ದು, ಅದರಲ್ಲಿ 28 ಕೋಟಿ 74 ಲಕ್ಷ ರೂಪಾಯಿ ವೆಚ್ಚವಾಗಿದೆ. ಒಟ್ಟು 2 ಕೋಟಿ 34 ಲಕ್ಷ ಉಳಿತಾಯವಾಗಿದೆ ಎಂದು ತಿಳಿಸಿದರು.

ಮಂಡ್ಯ, ಚಾಮರಾಜ ನಗರ, ಹಾಸನ ಜಿಲ್ಲೆಗೆ ಬಿಡುಗಡೆಯಾದ ಅನುದಾನ ಕೂಡ ಇದರಲ್ಲಿ ಸೇರಿದೆ. ಮೈಸೂರಿನ ರಾಜಮನೆತನಕ್ಕೆ 47 ಲಕ್ಷ ರು. ಗೌರವಧನ ನೀಡಲಾಗಿದೆ. ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ಮಾರಾಟದಿಂದ 76 ಲಕ್ಷ ರೂಪಾಯಿ ಹಣ ಸಂಗ್ರಹವಾಗಿದೆ. ಯುವದಸರಾ ಹಾಗೂ ಯುವ ಸಂಭ್ರಮಕ್ಕೆ 6 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ವಿವರ ನೀಡಿದರು.

ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಎಸ್​.ಟಿ.ಸೋಮಶೇಖರ್​ಗೆ ಬಹಿಷ್ಕಾರ

ಮೈಸೂರಿನ ಏಕಲವ್ಯನಗರದ ನಿವಾಸಿಗಳುಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಸೋಮಶೇಖರ್​​​ಗೆ ಮುತ್ತಿಗೆ ಹಾಲಕು ಯತ್ನಿಸಿದ್ದಾರೆ. ಜನರು ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕಳೆದ 50 ದಿನಗಳಿಂದ ಡಿಸಿ ಕಚೇರಿ ಬಳಿ ಅಹೋರಾತ್ರಿ ನಿರಂತರ ಧರಣಿ ಮಾಡುತ್ತಿದ್ದಾರೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.