Mysuru Dasara 2022: ಮೈಸೂರು ದಸರಾಗೆ ಮನಸೋತ ಪ್ರಧಾನಿ: ಮೈಸೂರು ಜನತೆ ಧನ್ಯವಾದ ಅಂದ್ರು… | PM Narendra Modi thanks to Mysuru Peoples For spectacular of Dasara 2022


ಮೈಸೂರು ದಸರಾ ಮಹೋತ್ಸವ ಅದ್ಧೂರಿಯೊಂದಿಗೆ ಸಂಪನ್ನಗೊಂಡಿದ್ದು, ಇದೀಗ ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ನವದೆಹಲಿ/ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಶ್(Mysuru Dasara) ಮಹೋತ್ಸವಕ್ಕೆ ತೆರೆ ಬಿದ್ದಿದೆ. ನಿನ್ನೆ(ಅ.05)ರಂದು ನಡೆದ ಜಂಬೂಸವಾರಿಗೆ ಲಕ್ಷಾಂತರ ಜನ ಸಾಕ್ಷಿಯಾಗಿದ್ರು. ಕೊರೋನಾ ಮಹಾಮಾರಿಯಿಂದಾಗಿ ಕಳೆಗುಂದಿದ್ದ ಮೈಸೂರು ದಸರಾ ಈ ಬಾರಿ ಅದ್ಧೂರಿಯಾಗಿ ಮಾಡಲಾಯ್ತು. ಇನ್ನು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಪ್ರಧಾನಿ ಮೋದಿ ಅಭಿನಂದನೆ ತಿಳಿಸಿದ್ದಾರೆ.

ಮೈಸೂರು ದಸರಾ ಮಹೋತ್ಸವದ ಬಗ್ಗೆ ಟ್ವೀಟ್ ಮಾಡಿರುವ ನರೇಂದ್ರ ಮೋದಿ (Narendra Modi), ಮೈಸೂರು ದಸರಾ ಯಶಸ್ವಿ ಬಗ್ಗೆ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಮಹಿಷಾಸುರ ಮರ್ಧಿನಿ ವಿಗ್ರಹ ಹೊತ್ತು ಸಾಗಿದ ಅಭಿಮನ್ಯು ಚಿತ್ರ ಹಾಕಿ‌ ಅಭಿನಂದನೆ ಹೇಳಿದ್ದಾರೆ.

TV9 Kannada


Leave a Reply

Your email address will not be published.