ಹಾಡಿ ಪಕ್ಕದಲ್ಲೇ ಇರುವ ಅರಣ್ಯ ಇಲಾಖೆಗೆ ಸೇರಿದ ವಸತಿಗೃಹ ಹಿಂಭಾಗದ ಅರಣ್ಯ ಪ್ರದೇಶಕ್ಕೆ ಮಂಜು ಸೌದೆ ಸಂಗ್ರಹಿಸಲೆಂದು ಒಬ್ಬನೇ ತೆರಳಿದ್ದರು. ಈ ವೇಳೆ ಪೊದೆಯ ಒಳಗೆ ಅವಿತು ಕುಳಿತಿದ್ದ ಹುಲಿ ದಾಳಿ ಮಾಡಿದೆ.
ಮೈಸೂರು: ಚಿರತೆ ದಾಳಿಯಿಂದ(Leopard Attack) ಕಂಗೆಟ್ಟಿದ್ದ ಮೈಸೂರು ಜಿಲ್ಲೆಯ ಜನರಿಗೆ ಇದೀಗ ಹುಲಿ ಆತಂಕ(Tiger Attack) ಎದುರಾಗಿದೆ. ಟಿ. ನರಸೀಪುರದಲ್ಲಿ ಚಿರತೆ ದಾಳಿಗೆ ನಾಲ್ಕು ತಿಂಗಳಲ್ಲಿ ನಾಲ್ಕು ಮಂದಿ ಬಲಿಯಾಗಿದ್ರೆ, ಮತ್ತೊಂದೆಡೆ ಹೆಚ್ಡಿ ಕೋಟೆ(HD Kote) ವ್ಯಾಪ್ತಿಯಲ್ಲಿಯೂ ಹುಲಿ ದಾಳಿಗೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ(Nagarahole Tiger Reserve) ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ 18 ವರ್ಷದ ಯುವಕನೊಬ್ಬ ಹುಲಿ ದಾಳಿಗೆ ಬಲಿಯಾಗಿದ್ದಾರೆ.
ಡಿ.ಬಿ. ಕುಪ್ಪೆ ಅರಣ್ಯ ವಲಯದ ಬಳ್ಳೆ ಹಾಡಿಯ ಬಿ.ಕಾಳ ಎಂಬುವರ ಮಗ ಮಂಜು ಹುಲಿ ದಾಳಿಗೆ ಬಲಿಯಾಗಿದ್ದಾರೆ. ನಿನ್ನೆ ಹಾಡಿ ಪಕ್ಕದಲ್ಲೇ ಇರುವ ಅರಣ್ಯ ಇಲಾಖೆಗೆ ಸೇರಿದ ವಸತಿಗೃಹ ಹಿಂಭಾಗದ ಅರಣ್ಯ ಪ್ರದೇಶಕ್ಕೆ ಮಂಜು ಸೌದೆ ಸಂಗ್ರಹಿಸಲೆಂದು ಒಬ್ಬನೇ ತೆರಳಿದ್ದರು. ಈ ವೇಳೆ ಪೊದೆಯ ಒಳಗೆ ಅವಿತು ಕುಳಿತಿದ್ದ ಹುಲಿ ದಾಳಿ ಮಾಡಿತ್ತು. ಮಿದುಳು ಹಾಗೂ ಮಾಂಸ ಕಿತ್ತು ಬರುವಂತೆ ಯುವಕನ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದ.
ತಾಜಾ ಸುದ್ದಿ
ಅರಣ್ಯ ಇಲಾಖೆ ವಸತಿಗೃಹದ ಹಿಂಭಾಗ ಹುಲಿಯ ಚೀರಾಟ ಕೇಳಿ, ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಓಡಿಹೋಗಿ ನೋಡಿದ್ದಾರೆ. ಇದೇ ವೇಳೆ ಹುಲಿ ಇವರನ್ನು ನೋಡಿ ಮೃತ ದೇಹ ಬಿಟ್ಟು ಅರಣ್ಯದ ಪೊದೆಯೊಳಗೆ ಸೇರಿಕೊಂಡಿದೆ. ತಕ್ಷಣ ಮೃತ ದೇಹವನ್ನು ಹುಲಿ ಎಳೆದುಕೊಂಡು ಹೋಗಬಹುದು ಎಂದು ಭಾವಿಸಿ ಅರಣ್ಯ ಇಲಾಖೆಯ ವಾಹನದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹ ರವಾನಿಸಿದ್ದಾರೆ.