Nagarjuna: ಇಷ್ಟೆಲ್ಲಾ ಸಾಧನೆ ಮಾಡಿರೋ ನಾಗಾರ್ಜುನರನ್ನ ಬೇರೆಡೆ ಹೇಗೆ ಗುರುತಿಸುತ್ತಾರೆ? ಅಚ್ಚರಿಯ ವಿಚಾರ ಹಂಚಿಕೊಂಡ ನಟ | Nagarjuna opens up about being called as South actors details inside


Nagarjuna: ಇಷ್ಟೆಲ್ಲಾ ಸಾಧನೆ ಮಾಡಿರೋ ನಾಗಾರ್ಜುನರನ್ನ ಬೇರೆಡೆ ಹೇಗೆ ಗುರುತಿಸುತ್ತಾರೆ? ಅಚ್ಚರಿಯ ವಿಚಾರ ಹಂಚಿಕೊಂಡ ನಟ

ನಾಗಾರ್ಜುನ

ಟಾಲಿವುಡ್ ನಟ ನಾಗಾರ್ಜುನ (Nagarjuna) ಅವರ ಇಡೀ ಕುಟುಂಬ ಚಿತ್ರರಂಗದಲ್ಲಿ ಗುರುತಿಸಿಕೊಂಡಿದೆ. ಸ್ವತಃ ನಾಗಾರ್ಜುನ ದೇಶವೇ ಗಮನ ಸೆಳೆಯುವ ಹಲವು ಚಿತ್ರಗಳನ್ನು ನೀಡಿದವರು. ಇದೀಗ ನಾಗಾರ್ಜುನ ಹಾಗೂ ಅವರ ಪುತ್ರ ನಾಗಚೈತನ್ಯ (Naga Chaitanya) ಅವರನ್ನು ದಕ್ಷಿಣ ಭಾರತದ ಹೊರಗೆ ಹೇಗೆ ಗುರುತಿಸುತ್ತಾರೆ ಎಂಬ ಅಚ್ಚರಿಯ ವಿಚಾರಗಳನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ. ಸದ್ಯ ಈರ್ವರೂ ಜತೆಯಾಗಿ ನಟಿಸಿರುವ ‘ಬಂಗಾರ್ರಾಜು’ ಚಿತ್ರ ತೆರೆಕಂಡಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ಬಬಲ್ ಜತೆ ಅವರು ಮಾತನಾಡಿದ್ದಾರೆ. ಅದರಲ್ಲಿ ಅವರಿಗೆ ‘ನಿಮ್ಮನ್ನು ಈಗಲೂ ದಕ್ಷಿಣ ಭಾರತದ ನಟ’ ಎಂದು ಗುರುತಿಸುತ್ತಾರೆಯೇ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ನಾಗಾರ್ಜುನ, ಹೌದು ಎಂದಿದ್ದಾರೆ. ‘ದೆಹಲಿ, ಮುಂಬೈ ಅಥವಾ ಇತರೆಡೆ ಎಲ್ಲೇ ಹೋದರೂ ನಮ್ಮನ್ನು- ಅಲ್ಲಿ ನೋಡಿ ದಕ್ಷಿಣದ ನಟರು- ಎಂದು ಗುರುತಿಸುತ್ತಾರೆ’ ಎಂದಿದ್ದಾರೆ ನಾಗಾರ್ಜುನ.

ಈ ರೀತಿ ಕರೆಯುವದರ ಹಿಂದೆಯೂ ಒಂದು ಹಿನ್ನೆಲೆ ಇದೆ. ಉತ್ತರ ಭಾರತದಲ್ಲಿ ಹಲವು ಬಾರಿ ದಕ್ಷಿಣದವರು ಎಂದು ತಾತ್ಸಾರದಿಂದ ಹೇಳುವುದೂ ಉಂಟು. ಇದಲ್ಲದೇ ಉತ್ತರ ಮತ್ತು ದಕ್ಷಿಣ ಎಂಬ ಭೇಧ ಹಿಂದೆಲ್ಲಾ ಬಹಳಷ್ಟಿತ್ತು. ಈ ಹಿನ್ನೆಲೆಯಲ್ಲಿ ನಾಗಾರ್ಜುನ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸುತ್ತಾ ನಾಗಾರ್ಜುನ, ‘‘ದಕ್ಷಿಣದಲ್ಲಿ ಏನಾಗುತ್ತದೆ? ಎಲ್ಲೆಡೆ ಆಗುವಂಥದ್ದೇ ಇಲ್ಲೂ ಆಗುತ್ತದೆ. ಏರ್​ಪೋರ್ಟ್​​ನಿಂದ ಹಿಡಿದು ಎಲ್ಲೆಡೆಯೂ ನಮ್ಮನ್ನು ದಕ್ಷಿಣದ ನಟ ಎಂದು ಕರೆಯುತ್ತಾರೆ’’ ಎಂದಿದ್ದಾರೆ. ಇದರಿಂದ ನಿಮಗೆ ಬೇಸರವಾಗುತ್ತದೆಯೇ ಎಂಬ ಪ್ರಶ್ನೆಗೆ ‘‘ಇಲ್ಲ ಇಲ್ಲ, ದಕ್ಷಿಣದವರು ಎಂಬುದು ನಮಗೆ ಹೆಮ್ಮೆ’’ ಎಂದಿದ್ದಾರೆ ನಾಗಾರ್ಜುನ.

‘ದಕ್ಷಿಣದ ನಟ ಎಂದು ಜನರು ಹೇಳುವುದನ್ನು ಕೇಳಿದಾಗ ನಿಮಗೆ ಏನನ್ನಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ನಾಗಾರ್ಜುನ, ‘‘ಅಂಥದ್ದನ್ನು ಯಾವಾಗಲೂ ಕೇಳುತ್ತೇವೆ. ಅದನ್ನು ಕೇಳಿದಾಗ ಖುಷಿಯಾಗುತ್ತದೆ. ನಮ್ಮ ಬೇರು ಇರುವುದು ಇಲ್ಲಿಯೇ’’ ಎಂದಿದ್ದಾರೆ. ‘‘ಇತ್ತೀಚೆಗೆ ಉತ್ತರ ಹಾಗೂ ದಕ್ಷಿಣದ ಚಿತ್ರಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ. ನಾವೆಲ್ಲರೂ ಮನುಷ್ಯರು. ನಮ್ಮ ಭಾವನೆಗಳು ಒಂದೇ. ಆದ್ದರಿಂದ ಒಳ್ಳೆಯ ಚಿತ್ರಗಳು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿವೆ. ತಂತ್ರಜ್ಞಾನ ಅಂತರವನ್ನು ಕಡಿಮೆಗೊಳಿಸಿದೆ’’ ಎಂದಿದ್ದಾರೆ ನಾಗಾರ್ಜುನ.

‘ಬಂಗಾರ್ರಾಜು’ ಚಿತ್ರ ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ನಾಗಚೈತನ್ಯ ಅವರ ಮೊದಲ ಚಿತ್ರ. ಇದರಲ್ಲಿ ನಾಗಚೈತನ್ಯ ಹಾಗೂ ನಾಗಾರ್ಜುನ ಜತೆಯಾಗಿ ಬಣ್ಣಹಚ್ಚಿದ್ದಾರೆ. ಕಲ್ಯಾಣ್ ಕೃಷ್ಣ ಕುರಸಲ ನಿರ್ದೇಶಿಸಿದ್ದು, ಸಂಕ್ರಾಂತಿಯ ದಿನ ಚಿತ್ರ ಬಿಡುಗಡೆಯಾಗಿದೆ.

TV9 Kannada


Leave a Reply

Your email address will not be published. Required fields are marked *