Narendra Modi: 4 ಲಕ್ಷ ಜನರಿಗೆ ಕುಡಿಯುವ ನೀರು; ಬುಂದೇಲ್​ಖಂಡ್​ನಲ್ಲಿ 3,240 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ | PM Narendra Modi Slams Previous Governments For Creating Water Crisis In Bundelkhand Uttar Pradesh


Narendra Modi: 4 ಲಕ್ಷ ಜನರಿಗೆ ಕುಡಿಯುವ ನೀರು; ಬುಂದೇಲ್​ಖಂಡ್​ನಲ್ಲಿ 3,240 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ

ಬುಂದೇಲ್​ಖಂಡ: ಉತ್ತರ ಪ್ರದೇಶದ ಬುಂದೇಲ್‌ಖಂಡ್ ಪ್ರದೇಶದ ರೈತರಿಗೆ ನೀರಿನ ಕೊರತೆಯನ್ನು ಕೊನೆಗೊಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಇಂದು ಅನೇಕ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಈ ಯೋಜನೆಯಿಂದ 4 ಲಕ್ಷಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರು ಸಿಗಲಿದೆ ಎಂದು ಮಹೋಬಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದ್ದಾರೆ. ಉತ್ತರಪ್ರದೇಶದ ಬುಂದೇಲ್‌ಖಂಡದ ಕೃಷಿಕರಿಗೆ ನೀರಿನ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಇಂದು ಹಲವು ಯೋಜನೆಗಳನ್ನು ಉದ್ಘಾಟಿಸಿದ್ದಾರೆ.

ಮಹೋಬಾಕ್ಕೆ ಇಂದು ಮಧ್ಯಾಹ್ನ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ 3,240 ಕೋಟಿ ರೂ. ವೆಚ್ಚದ ಅರ್ಜುನ್ ಸಹಾಯಕ್ ಯೋಜನೆ, ರತೌಲಿ ಅಣೆಕಟ್ಟು ಯೋಜನೆ, ಭೋನಿ ಅಣೆಕಟ್ಟು ಯೋಜನೆ ಮತ್ತು ಮಜ್ಗಾಂವ್-ಚಿಲ್ಲಿ ಹನಿ ನೀರಾವರಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಈ ಎಲ್ಲಾ ಯೋಜನೆಗಳು ಕಾರ್ಯಗತವಾದರೆ ಮಹೋಬಾ, ಹಮಿರ್‌ಪುರ್‌, ಬಾಂದಾ, ಲಲಿತ್‌ಪುರ ಜಿಲ್ಲೆಗಳ ಸುಮಾರು 65 ಸಾವಿರ ಹೆಕ್ಟೇರ್‌ ಕೃಷಿ ಪ್ರದೇಶಕ್ಕೆ ನೀರಾವರಿ ಸೌಕರ್ಯ ದೊರೆಯಲಿದೆ. ಈ ಪ್ರದೇಶದ ಲಕ್ಷಾಂತರ ರೈತರಿಗೆ ಸಹಾಯಕವಾಗುತ್ತದೆ. ಅಷ್ಟೇ ಅಲ್ಲ, ಈ ಪ್ರದೇಶಗಳಲ್ಲಿನ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕೂಡ ದೊರೆಯಲಿದೆ.

ಬುಂದೇಲ್ ಖಂಡ ಪ್ರಾಂತ್ಯ ಜಲಸಂರಕ್ಷಣೆಗೆ ಉತ್ತಮ ಮಾದರಿ. ಈ ಪ್ರದೇಶ ನೀರಿನ ಕೊರತೆಯ ವಿರುದ್ಧ ಹೋರಾಡಿತ್ತು. ಕೇಂದ್ರ ಸರ್ಕಾರ ಬುಂದೇಲ್​ಖಂಡದ ಅಭಿವೃದ್ಧಿಗೆ ಬದ್ಧವಾಗಿದೆ. ಮಾಫಿಯಾ‌ ನಿಯಂತ್ರಣದಲ್ಲಿದ್ದ ಬುಂದೇಲ್​ಖಂಡದಲ್ಲಿ ಈಗ ಮಾಫಿಯಾಗಳ ಮೇಲೆ ಬುಲ್ಡೋಜರ್ ಹರಿಸಲಾಗುತ್ತಿದೆ ಎಂದು ಉತ್ತರ ಪ್ರದೇಶದ ಮಹೋಬಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಾರ್ವಜನಿಕ ಱಲಿ ಉದ್ದೇಶಿಸಿ ಭಾಷಣ ಮಾಡಿರುವ ನರೇಂದ್ರ ಮೋದಿ, ಈಗ ಗುಜರಾತ್​ನ‌ ಮರುಭೂಮಿಯಲ್ಲಿ ನೀರು ಸಿಗುತ್ತಿದೆ. ಗುಜರಾತ್​ನ ಕಛ್ ಜಿಲ್ಲೆಯು ಅಭಿವೃದ್ಧಿ ಹಾದಿಯಲ್ಲಿದೆ. ಹಾಗೇ ಬುಂದೇಲ್​ಖಂಡ ಪ್ರಾಂತ್ಯ ಅಭಿವೃದ್ಧಿ ಮಾಡ್ತೇವೆ. ಪರಿವಾರವಾದಿ ಸರ್ಕಾರ ಅಭಿವೃದ್ಧಿಗೆ ಅವಕಾಶ ಕೊಟ್ಟಿರಲಿಲ್ಲ. ಪರಿವಾರವಾದಿ ಸರ್ಕಾರ ಸೌಲಭ್ಯ ವಂಚಿತರನ್ನಾಗಿ ಮಾಡಿತ್ತು. ಯೋಗಿ ಸರ್ಕಾರ ಕೃಷಿಕರಿಗೆ ನೀರು ಪೂರೈಕೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ದೆಹಲಿ ಮತ್ತು ಉತ್ತರಪ್ರದೇಶವನ್ನು ದೀರ್ಘಕಾಲ ಆಳಿದವರು ಈ ಪ್ರದೇಶವನ್ನು ಹಾಳು ಮಾಡಲು ಯಾವುದೇ ಕಲ್ಲನ್ನೂ ಬಿಟ್ಟಿಲ್ಲ. ಈ ಪ್ರದೇಶದ ಕಾಡುಗಳು ಮತ್ತು ಸಂಪನ್ಮೂಲಗಳನ್ನು ಮಾಫಿಯಾಗಳಿಗೆ ಹೇಗೆ ಹಸ್ತಾಂತರಿಸಲಾಯಿತು ಎಂಬುದು ರಹಸ್ಯವಾಗಿ ಉಳಿದಿಲ್ಲ. ಈಗ ಈ ಮಾಫಿಯಾಗಳ ವಿರುದ್ಧ ಬುಲ್ಡೋಜರ್ ಅನ್ನು ಬಳಸಲಾಗುತ್ತಿದೆ ಎಂದು ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಹಿಂದಿನ ಸರ್ಕಾರಗಳನ್ನು ಟೀಕಿಸಿದ ಮೋದಿ, ಬುಂದೇಲ್‌ಖಂಡದಲ್ಲಿ ಹಲವಾರು ವರ್ಷಗಳಿಂದ ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡಿಲ್ಲ. ಯೋಗಿ ಆದಿತ್ಯನಾಥ್ ಸರ್ಕಾರದ ಬಂದ ನಂತರ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳಿಗೆ ವೇಗ ಬಂದಿದೆ. ಹಿಂದಿನ ಸರ್ಕಾರಗಳು ಸುಸ್ತಿಲ್ಲದೆ ಉತ್ತರ ಪ್ರದೇಶವನ್ನು ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡಿದರು. ನಾವು ಸುಸ್ತಿಲ್ಲದೆ ಉತ್ತರ ಪ್ರದೇಶವನ್ನು ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ರೈತರಲ್ಲಿ ನಂಬಿಕೆ ಮೂಡಿಸುವಲ್ಲಿ ವಿಫಲ: ಹೆಚ್​ಡಿ ಕುಮಾರಸ್ವಾಮಿ

40,000ಕ್ಕೂ ಹೆಚ್ಚು ತಮಿಳು ಬ್ರಾಹ್ಮಣರಿಗೆ ಸಿಗುತ್ತಿಲ್ಲ ವಧು; ಉತ್ತರ ಪ್ರದೇಶ, ಬಿಹಾರಕ್ಕೂ ವ್ಯಾಪಿಸಿದ ವಧು ಅನ್ವೇಷಣೆ

TV9 Kannada


Leave a Reply

Your email address will not be published. Required fields are marked *