NASA: ಅನ್ಯಗ್ರಹ ಜೀವಿಗಳನ್ನು ಸೆಳೆಯಲು ನಾಸಾ ಕಳುಹಿಸಲಿದೆ ಮನುಷ್ಯರ ನಗ್ನಚಿತ್ರ | To Attract Aliens NASA To Send Naked Pictures of Humans To Space


NASA: ಅನ್ಯಗ್ರಹ ಜೀವಿಗಳನ್ನು ಸೆಳೆಯಲು ನಾಸಾ ಕಳುಹಿಸಲಿದೆ ಮನುಷ್ಯರ ನಗ್ನಚಿತ್ರ

ಅನ್ಯಗ್ರಹ ಜೀವಿ

ಬೈನರಿ ಸಂಕೇತದ ಸಂದೇಶವನ್ನು ಏಲಿಯನ್‌ಗಳು ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಭಾವಿಸಿದ್ದಾರೆ. ಬೈನರಿಗಳು ಸೌರಮಂಡಲದ ಉದ್ದಕ್ಕೂ ಎಲ್ಲಾ ಬುದ್ಧಿಮತ್ತೆಗೂ ನಿಲುಕುವ ಸಾಧ್ಯತೆ ಹೆಚ್ಚಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ, ಶೀಘ್ರವೇ ಈ ಪ್ರಯೋಗ ಶುರುವಾಗಲಿದೆ.

ಅನ್ಯಗ್ರಹ ಜೀವಿ(Aliens)ಗಳನ್ನು ಸೆಳೆಯಲು ಯಾರೂ ಊಹಿಸದ ತಂತ್ರವನ್ನು ನಾಸಾ ಅಳವಡಿಸಿಕೊಳ್ಳುತ್ತಿದೆ, ವಿಜ್ಞಾನಿಗಳು ಅನ್ಯಗ್ರಹ ಜೀವಿಗಳು ಮನುಷ್ಯರ ಕಡೆಗೆ ಲೈಂಗಿಕವಾಗಿ ಆಕರ್ಷಿತವಾಗುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಹೀಗಾಗಿ ಅನ್ಯಗ್ರಹ ಜೀವಿಗಳನ್ನು ಸೆಳೆಯಲು ನಾಸಾವು ಬಾಹ್ಯಾಕಾಶಕ್ಕೆ ಮನುಷ್ಯರ ನಗ್ನ ಚಿತ್ರಗಳನ್ನು ಕಳುಹಿಸಲು ಚಿಂತನೆ ನಡೆಸಿದ್ದಾರೆ. ಬೀಕಾನ್ ಇನ್ ದಿ ಗ್ಯಾಲಕ್ಸಿ( BITG)ಎನ್ನುವ ಯೋಜನೆಯ ಭಾಗವಾಗಿ ಇದನ್ನು ನಡೆಸಲಾಗುತ್ತಿದ್ದು, ಇನ್ನೊಂದು ಜೀವ ಮಾದರಿ ಜತೆಗೆ ಸಂಪರ್ಕ ಖಂಡಿತವಾಗಿಯೂ ಸಾಧ್ಯ ಎನ್ನುವುದು ವಿಜ್ಞಾನಿಗಳ ನಂಬಿಕೆಯಾಗಿದೆ. ಬೇರೆ ಗ್ರಹಗಳಲ್ಲಿ ಜೀವಿಗಳು ವಾಸಿಸುತ್ತಿದ್ದಾರೆ ಎಂಬುದನ್ನು ವಿಜ್ಞಾನಿಗಳು ಒತ್ತಿ ಹೇಳಿದ್ದಾರೆ.

ಅನ್ಯಗ್ರಹ ಜೀವಿಗಳ ಜತೆ ಸಂಪರ್ಕ ಸಾಧಿಸಲು 150 ವರ್ಷಗಳಿಂದ ಮನುಷ್ಯ ನಡಡೆಸುತ್ತಿರುವ ಪ್ರಯತ್ನ ಈವರೆಗೂ ಫಲಕೊಟ್ಟಿಲ್ಲ, ಏಲಿಯನ್ ಇರುವಿಕೆ, ಅವರ ವಾಸ ಹಾಗೂ ಜೀವನ ಶೈಲಿ ತಿಳಿಯುವ ನೂತನ ಪ್ರಯತ್ನಕ್ಕೆ ನಾಸಾದ ವಿಜ್ಞಾನಿಗಳು ಮುಂದಾಗಿದ್ದಾರೆ. ಮಿಲ್ಕಿ ವೇನಲ್ಲಿ ಇರಬಹುದಾದ ಏಲಿಯನ್​ಗಳ ಗಮನ ಭೂಮಿಯತ್ತ ಸೆಳೆಯಲು ಗಂಡು ಹಾಗೂ ಹೆಣ್ಣಿನ ಬೆತ್ತಲೆ ಚಿತ್ರಗಳನ್ನು ಆಗಸಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ.

ವಿಜ್ಞಾನಿಗಳು ಅನ್ಯಗ್ರಹ ಜೀವಿಗಳನ್ನ ಸೆಳೆಯಲು ಬೆತ್ತಲೆ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತಿರುವುದು ಮೊದಲ ಬಾರಿಯಲ್ಲ, ಹಲವು ವರ್ಷಗಳ ಹಿಂದೆಯೇ ಇಂಥಹ ಪ್ರಯತ್ನಕ್ಕೆ ವಿಜ್ಞಾನಿಗಳು ಕೈಹಾಕಿದ್ದರು. 1972ರಲ್ಲಿ ಪಯೋನೀರ್ 10 ಹಾಗೂ 1973ರಲ್ಲಿ ಪಯೋನೀರ್ 11 ಯೋಜನೆಗಳಲ್ಲಿ ತಮ್ಮ ಆಂಟೆನಾಗಳಿಗೆ ಮನುಷ್ಯರ ನಗ್ನ ಚಿತ್ರಗಳನ್ನು ಅಳವಡಿಸಲಾಗಿತ್ತು.
ಬೇರೆ ಗ್ರಹಗಳಲ್ಲಿ ಜೀವಿಗಳು ವಾಸಿಸುತ್ತಿದ್ದಾರೆ ಎಂಬುದಕ್ಕೆ ಪುರಾವೆಗಳಿಲ್ಲದಿದ್ದರೂ ಅನುಭವಗಳು ದಾಖಲಾಗಿವೆ.

ಚಿತ್ರಗಳ್ಯಾವುದೂ ಗ್ರಾಫಿಕ್ಸ್​ಗಳಾಗಿರುವುದಿಲ್ಲ, ಇದೀಗ ಪಿಕ್ಸೆಲ್​ನ ರೇಖಾಚಿತ್ರದೊಂದಿಗೆ ವಿಜ್ಞಾನಿಗಳು ಗುರುತ್ವ ಹಾಗೂ ಡಿಎನ್​ಎ ಚಿತ್ರಣಗಳನ್ನು ಕೂಡ ವಿಜ್ಞಾನಿಗಳು ಅಳವಡಿಸಿದ್ದಾರೆ. ಬೈನರಿಯು ಗಣಿತದ ಅತ್ಯಂತ ಸರಳ ಮಾದರಿಗಳಲ್ಲಿ ಒಂದಾಗಿದೆ, ಶೂನ್ಯ ಹಾಗೂ ಒಂದು, ಹೌದು ಅಥವಾ ಇಲಲ, ಕಪ್ಪು ಅಥವಾ ಬಿಳಿ, ಸಮೂಹ ಅಥವಾ ಖಾಲಿ ಜಾಗ ಎಂಬ ವಿರುದ್ಧ ಅಂಶಗಳನ್ನು ಮಾತ್ರ ಒಳಗೊಂಡಿರುತ್ತದೆ.
ಬೈನರಿ ಸಂಕೇತದ ಸಂದೇಶಗಳನ್ನು ಏಲಿಯನ್​ಗಳು ಅರ್ಥಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ನಂಬಲಾಗಿದೆ.

ಬೈನರಿ ಸಂಕೇತದ ಸಂದೇಶವನ್ನು ಏಲಿಯನ್‌ಗಳು ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಭಾವಿಸಿದ್ದಾರೆ. ಬೈನರಿಗಳು ಸೌರಮಂಡಲದ ಉದ್ದಕ್ಕೂ ಎಲ್ಲಾ ಬುದ್ಧಿಮತ್ತೆಗೂ ನಿಲುಕುವ ಸಾಧ್ಯತೆ ಹೆಚ್ಚಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ, ಶೀಘ್ರವೇ ಈ ಪ್ರಯೋಗ ಶುರುವಾಗಲಿದೆ.

TV9 Kannada


Leave a Reply

Your email address will not be published. Required fields are marked *