National Chocolate Ice Cream Day 2022: ಆ ದಿನ ನಮ್ಮನ್ನು ಕಾಪಾಡಿದ ಪುರಾತನ ಐದರ ನೋಟು | National Chocolate Ice Cream Day 2022 by Sushma Savasuddi


National Chocolate Ice Cream Day 2022: ಆ ದಿನ ನಮ್ಮನ್ನು ಕಾಪಾಡಿದ ಪುರಾತನ ಐದರ ನೋಟು

ಸುಷ್ಮಾ ಸವಸುದ್ದಿ

Childhood : ‘ಅದೆಲ್ಲ ತಿನ್ನಬೇಡವೆ ಸರಿ ಇರಲ್ಲ. ಆ ಡಬ್ಬದಲ್ಲಿ ಹುಳಗಳ ಇರ್ತವೆ’ ಅಂತ ಹೆದರಿಸೋ ಅಮ್ಮನ ಸಾಹಸಕ್ಕೆ ಯಾವ ಬೆಲೆನೂ ಸಿಗ್ತಾ ಇರಲಿಲ್ಲ. ದೊಡ್ಡವರು ಆಗ್ತಾ ಇದ್ದಂಗೆ ಆ ಅಜ್ಜನ ಡಬ್ಬಿನು ಮಾಯ ಆಯ್ತು, ಅದಕ್ಕೆ ಕಾಯುವ ದಾರಿನೂ.

National Chocolate Ice Cream Day 2022: ಆಗೆಲ್ಲ ಎಂಟಾಣೆ ಕೊಟ್ರೆ ಕಲರ್ ಐಸ್ಕ್ರೀಮ್, ಒಂದರೂಪಾಯಿಗೆ ಹಾಲಿನ ಐಸ್ಕ್ರೀಮ್. ಸೈಕಲ್ ಹಿಂದೆ ಒಂದು ತಗಡಿನ ಡಬ್ಬಿ ಇಟ್ಕೊಂಡು ಬರ್ತಾ ಇದ್ದ ಅಜ್ಜನ ದಾರಿಗೆ ಕಾಯೋದರಲ್ಲೆ ರಜೆ ಕಳಿತಾ ಇತ್ತು. ‘ಅದೆಲ್ಲ ತಿನ್ನಬೇಡವೆ ಸರಿ ಇರಲ್ಲ. ಆ ಡಬ್ಬದಲ್ಲಿ ಹುಳಗಳ ಇರ್ತವೆ’ ಅಂತ ಹೆದರಿಸೋ ಅಮ್ಮನ ಸಾಹಸಕ್ಕೆ ಯಾವ ಬೆಲೆನೂ ಸಿಗ್ತಾ ಇರಲಿಲ್ಲ. ದೊಡ್ಡವರು ಆಗ್ತಾ ಇದ್ದಂಗೆ ಆ ಅಜ್ಜನ ಡಬ್ಬಿನು ಮಾಯ ಆಯ್ತು, ಅದಕ್ಕೆ ಕಾಯುವ ದಾರಿನೂ. ಹೈಸ್ಕೂಲ್ ಮೆಟ್ಟಿಲು ಏರೋ ಹೊತ್ತಿಗೆ ಐಸ್ಕ್ರೀಮ್ ಪಾರ್ಲರ್​ಗೆ  ಹೋಗಿ, ಹೋಟೆಲಿಗೆ ಹೋಗಿ ನಾನಾ ತರಹದ ಐಸ್ಕ್ರೀಮ್ ಹೆಸರು ಹೇಳಿ ನೂರಾರು ರೂಪಾಯಿ ಕೊಟ್ಟು ತಿಂದು ಬರೋವಷ್ಟ ದೊಡ್ಡವರು ಆಗಿ ಹೋಗಿದ್ವಿ. ಮಳೇಲಿ ಯೂನಿಫಾರ್ಮ್ ಒದ್ದೆ ಮಾಡ್ಕೊಂಡು ವೆನಿಲಾ ಐಸ್ಕ್ರೀಮ್ ತಿಂದದ್ದು ಇನ್ನೂ ಹಸಿ ನೆನಪು. ಒಮ್ಮೆ ಅಪ್ಪ ಮತ್ತು ತಂಗಿ ಜೊತೆಗೆ ಶಾಪಿಂಗ್ ಮಾಡ್ಕೊಂಡ ಬರೋವಾಗ ಹೊಸ ಐಸ್ಕ್ರೀಮ್ ಶಾಪ್ ಕಣ್ಣಿಗೆ ಬಿತ್ತು. ಹೊಸದು ಹೋಗಿ ಟೆಸ್ಟ ಮಾಡುವ ಅಂತ ಅಪ್ಪನ ಎಳೆದುಕೊಂಡೆ ಹೋದ್ವಿ. ಮೆನು ತಂದು ಮುಂದೆ ಇಟ್ರು.
ಸುಷ್ಮಾ ಸವಸುದ್ದಿ (Sushma Savasuddi)

ನಾನು ಮೂರು Chocolate Ice Cream ಕೊಡಿ ಎಂದೆ ಮೆನು ನೋಡದೆ. ಮೇಲಾಗಿ ಚೆನ್ನಾಗಿ ಇರುತ್ತೆ ನೀವು ಇಷ್ಟಪಡ್ತೀರಿ ಅಂತ ಬೇರೆ ಪುಸಲಾಯಿಸಿದ್ದೆ. ರೆಗ್ಯೂಲರ್ ಆಗಿ ತಿನ್ನೋ  ಐಸ್​ಕ್ರೀಮ್​ಗಿಂ ಸಖತ್ ಆಗಿ ಇರೋದು. ಇಲ್ಲೂ ಚೆನ್ನಾಗೇ ಸಿಗಬಹುದು ಅನ್ನೋ ಊಹೆ ನಂದಾಗಿತ್ತು. ಆದರೆ ನನ್ನ ಊಹೆ ತಪ್ಪಿತ್ತು. ನನ್ನ ಮುಂದೆ ಕುಳಿತ ಇಬ್ಬರ ಕಂಗೆಣ್ಣು ನನ್ನನ್ನೇ ಗುರಾಯಿಸೋವಷ್ಟು ಕೆಟ್ಟದಾಗಿತ್ತು. ನನಗೆ ಒಳ ಒಳಗೆ ಯಾಕಾದ್ರೂ ಇಲ್ಲಿಗೆ ಬಂದನೋ? ಸುಮ್ನೆ ಮೆನು ಅವರ ಕೈಯಲ್ಲಿ ಕೊಟ್ಟಿದ್ರೆ ಆಗಿರೋದು ಅಂತ ಪೇಚಾಡಿದೆ. ಎರಡೇ ಸ್ಪೂನ್​ ತಿನ್ನುವ ಹೊತ್ತಿಗೆ ಸಾಕಾಗಿ ಎದ್ದುಹೊರಟ ನಮ್ಮನ್ನು ಹೇಗಿತ್ತು ಐಸ್​ಕ್ರೀಮ್ ಅಂತ ಕೇಳೋ ಆತುರದಲ್ಲಿ ಇದ್ದ ಅಂಗಡಿಯವನಿಗೆ ‘ಹೋಗಿ ಟೇಬಲ್ ಮೇಲೆ ಇದ್ದ ನಮ್ಮ ಕಪ್ ನೋಡಿ ಗೊತ್ತಾಗುತ್ತೆ’ ಅನ್ನೋದಾ ನನ್ನ ತಂಗಿ! ಅದೇ ಮೊದಲ ಸಲ ಐಸ್ಕ್ರೀಮನಾ ಅರ್ಧಕ್ಕೆ ಬಿಟ್ಟು ಬಂದಿದ್ದು. ಅದೇ ಕೊನೇ ಕೂಡ ಅನ್ನಿ.

TV9 Kannada


Leave a Reply

Your email address will not be published.