National Chocolate Ice Cream Day 2022: ಕಪ್ಪನ್ನೇ ಮುರಿದು ತಿಂದರೂ ಐಸ್​ಕ್ರೀಮ್ ಕೋಪಗೊಳ್ಳದು! | National Chocolate Ice Cream Day 2022 by Umarani Pujar


National Chocolate Ice Cream Day 2022: ಕಪ್ಪನ್ನೇ ಮುರಿದು ತಿಂದರೂ ಐಸ್​ಕ್ರೀಮ್ ಕೋಪಗೊಳ್ಳದು!

ಉಮಾರಾಣಿ ಪೂಜಾರ

Stress Free : ‘ಸರಿ. ಮುಂದೆ, ಮತ್ತೆ…’ ಎನ್ನುತ್ತಿರುತ್ತೇನೆ. ಆಕೆಯ ಐಸ್​ಕ್ರೀಮ್​ ಕೂಡ ಮುಗಿದಿರುತ್ತದೆ ಉದ್ವೇಗ, ಹತಾಶೆ, ಕೋಪ ಎಲ್ಲವೂ ಶಮನ. ಏಕೆಂದರೆ stress, pain ಮಾಯವಾಗಿ Endorphins ಹಾರ್ಮೋನು ಬಿಡುಗಡೆ ಆಗಿರುತ್ತದೆ. ಆಗ ಆಕೆಯನ್ನು ಸಂತೈಸುವುದೇ ಬೇಡ,

National Chocolate Ice Cream Day 2022: According to John Locke Our mind is tabula rasa. ಅಂದರೆ ನಮ್ಮ ಮನಸ್ಸು ಸ್ವಚ್ಛ ಫಲಕವಿದ್ದಂತೆ. ನಮ್ಮ ಸುತ್ತಮುತ್ತ ನಡೆಯುವ ಹಾಗೂ, ಕೇಳುವ, ಕಾಣಿಸುವ ಎಲ್ಲವೂ ನಮಗೆ ಅರಿವಿಲ್ಲದಂತೆ ಆ ಸ್ವಚ್ಛ ಫಲಕವನ್ನು ಸೇರುತ್ತಿರುತ್ತವೆ. ಆದ್ದರಿಂದ ಋಣಾತ್ಮಕ ಅಂಶ, ವ್ಯಕ್ತಿ,  ನಿರಾಶಾದಾಯಕ ಅಂಶಗಳನ್ನು ದೂರವಿಡಲು ಸಾಧ್ಯವೆ? ಏಕೆಂದರೆ ನಮಗಿರುವುದು ಒಂದೇ ಜೀವನ. ಎಲ್ಲರನ್ನೂ ದೂರವಿಟ್ಟು ದ್ವೀಪದಂತೆ ಬದುಕಲೂ ಆಗದು. ಜೊತೆಜೊತೆಗೇ ಆಗಾಗ ಕೆಲವು ಋಣಾತ್ಮಕ ಮೊಟ್ಟೆಗಳನ್ನು ಎದುರಿಸಲೇಬೇಕಾಗುತ್ತದೆ. ಹೀಗಾದಾಗೆಲ್ಲ ನಾನು ನನ್ನನ್ನು ಕಾಪಾಡಿಕೊಳ್ಳಲು ಇತ್ತೀಚೆಗೆ ಒಂದು ಉಪಾಯ ಕಂಡುಕೊಂಡಿದ್ದೇನೆ. ಅದೇ ಚಾಕೋಲೇಟ್ ಐಸ್ ಕ್ರೀಮ್! ಹೀಗೆ ಆಪ್ತಗೆಳತಿಯರು ಯಾರಾದರೂ ದುಃಖ, ಬೇಸರದಲ್ಲಿದ್ದಾಗ ನನ್ನ ಮಾತುಗಳು ಏನೂ ಅವರಿಗೆ ಸಾಂತ್ವನ ನೀಡುತ್ತಿಲ್ಲ ಎನ್ನಿಸಿದಾಗ ನಾನೂ ಬೇಸರಕ್ಕೊಳಗಾಗುತ್ತಿದ್ದೆ. ಹೀಗೇ ಆದರೆ ಏನು ಪ್ರಯೋಜನ ಎನ್ನಿಸಿ ಮೇಲಿನ ಉಪಾಯಕ್ಕೆ ಶರಣಾದೆ. ದೇಹವನ್ನು ಬಿಟ್ಟು ಮನಸ್ಸಿಲ್ಲ, ಮನಸ್ಸು ಬಿಟ್ಟು ದೇಹವಿಲ್ಲ!
ಉಮಾರಾಣಿ ಪೂಜಾರ (Umarani Pujar) 

ಚಾಕೋಲೇಟ್ ಚಾಕ್ಲೇಟ್ ಐಸ್ ಕ್ರೀಮ್ ತಿಂದಾಗ ಎಲ್ಲ ಜಂಜಡಗಳೂ ಗಾವುದ ದೂರ ಓಡುತ್ತವೆ. ಹೀಗೆ ಗೆಳತಿಯರೊಂದಿಗೆ ಐಸ್​ಕ್ರೀಮ್ ತಿನ್ನುತ್ತಾ, ಅವಳ ಬೇಗುದಿ, ಹತಾಶೆ, ನಿರಾಶೆ ಎಲ್ಲವನ್ನೂ ನೋಡುತ್ತಿರುತ್ತೇನೆ. ಕೇಳುತ್ತಿರುತ್ತೇನೆ. ‘ಸರಿ. ಮುಂದೆ, ಮತ್ತೆ…’ ಎನ್ನುತ್ತಿರುತ್ತೇನೆ. ಆಕೆಯ ಐಸ್​ಕ್ರೀಮ್​ ಕೂಡ ಮುಗಿದಿರುತ್ತದೆ ಉದ್ವೇಗ, ಹತಾಶೆ, ಕೋಪ ಎಲ್ಲವೂ ಶಮನವಾಗಿರುತ್ತದೆ. ಆ ಕ್ಷಣಕ್ಕಾದರೂ ಆಕೆಗೆ ಸಮಾಧಾನವಾಗಿರುತ್ತದೆ. ಏಕೆಂದರೆ stress ಹಾಗೂ pain ಎರಡೂ ಮಾಯವಾಗಿ Endorphins ಹಾರ್ಮೋನು ಬಿಡುಗಡೆ ಆಗಿರುತ್ತದೆ. ಆಗ ನಾನು ಆಕೆಯನ್ನು ಸಂತೈಸುವುದೂ ಬೇಡ, ನನ್ನ ಗಂಟಲಿಗೆ ಶ್ರಮ ಕೊಡುವುದೂ ಬೇಡ. ಇದೆಲ್ಲವನ್ನು ಒಂದು ಚಾಕೋಲೇಟ್ ಐಸ್ಕ್ರೀಮ್ ಮಾಡಿಬಿಡುತ್ತದೆ. ಆಮೇಲೆ ಐಸ್ ಕ್ರೀಂ ತಿಂದಾದ ಮೇಲೆ ‘ಏನೋ ಹೇಳ್ತಾ ಇದ್ದೆ’ ಎಂದು ತಿರುಗಿ ಕೇಳಿದರೆ, ಮೊದಲು ಅಳುತ್ತಿದ್ದವಳು ನಂತರ ನಸುನಗುತ್ತಾ ‘ನೀನಿದ್ದೀಯಲ್ಲ ನನ್ನ ಫ್ರೆಂಡು ಬಿಡು, ನಾನಿನ್ಮೇಲೆ ಯಾವುದಕ್ಕೂ ಹೆದರಲ್ಲ’ ಅನ್ನುವುದೆ?! ಹಾಗಾದರೆ ಈ ಕರಾಮತ್ತು ಮಾಡಿದ್ದು ನಾನಾ? ಐಸ್ ಕ್ರೀಮ್ ಆ? ಒಂದು ಕ್ಷಣ ನನಗೆ ಅಚ್ಚರಿ. ಅದಕ್ಕೆ ಎನಿಸುತ್ತದೆ ದೇಹದ ತೂಕ ಹೆಚ್ಚುತ್ತದೆ ಎಂದು ಎಲ್ಲಾ ಆಹಾರವನ್ನು ಬದಿಗೆ ಸರಿಸುವ ಕತ್ರಿನಾ ಕೈಫ್; ಫೇವರಿಟ್ ಡಿಶ್ ಯಾವುದು ಎಂದು ಕೇಳಿದಾಗ ಊಟದ ಹೆಸರನ್ನು ಹೇಳುವುದು ಬಿಟ್ಟು ಐಸ್ ಕ್ರೀಂ ಹೆಸರನ್ನು ಹೇಳುವುದು!

TV9 Kannada


Leave a Reply

Your email address will not be published.