National Handloom Day: ಆ.7ರಂದು 8ನೇ ರಾಷ್ಟ್ರೀಯ ಕೈಮಗ್ಗ ದಿನದ ಆಚರಣೆ: ಸಚಿವ ದರ್ಶನಾ ಜರ್ದೋಶ್ | National Handloom Day: Celebration of 8th National Handloom Day on August 7: Minister Darshana Zardosh


2015 ರಲ್ಲಿ, ಕೇಂದ್ರ ಸರ್ಕಾರವು 1905 ರಲ್ಲಿ ಪ್ರಾರಂಭವಾದ ಸ್ವದೇಶಿ ಆಂದೋಲನದ ನೆನಪಿಗಾಗಿ ಆಗಸ್ಟ್ 7ನ್ನು ರಾಷ್ಟ್ರೀಯ ಕೈಮಗ್ಗ ದಿನವೆಂದು ಘೋಷಿಸಿತು. ಆಂದೋಲನವು ವಿದೇಶಿ ನಿರ್ಮಿತ ಉಡುಪುಗಳ ಬದಲಿಗೆ ಸ್ಥಳೀಯ ಸಮುದಾಯಗಳಿಂದ ನೇಯ್ದ ಬಟ್ಟೆಗಳನ್ನು ಧರಿಸಲು ಭಾರತೀಯರನ್ನು ಉತ್ತೇಜಿಸುವ ಗುರಿಯನ್ನು ಹೊಂದಿತ್ತು.

ಜವಳಿ ಸಚಿವಾಲಯವು ಕೈಮಗ್ಗ ಉದ್ಯಮ ಮತ್ತು ಅದರ ನೇಕಾರರ ಗೌರವಾರ್ಥವಾಗಿ ಆಗಸ್ಟ್ 7ರಂದು 8 ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಯೋಜಿಸುತ್ತದೆ. ಕೈಮಗ್ಗವು ನಮ್ಮ ದೇಶದ ಅದ್ಭುತ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ ಮತ್ತು ಜೀವನೋಪಾಯದ ಪ್ರಮುಖ ಮೂಲವಾಗಿದೆ. ಜವಳಿ ಸಚಿವಾಲಯವು 8ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು 7 ಆಗಸ್ಟ್ 2022 ರಂದು ಆಯೋಜಿಸಿದೆ ಎಂದು ಜವಳಿ ಖಾತೆ ರಾಜ್ಯ ಸಚಿವ ದರ್ಶನಾ ಜರ್ದೋಶ್ ಹೇಳಿದ್ದಾರೆ.

2015 ರಲ್ಲಿ, ಕೇಂದ್ರ ಸರ್ಕಾರವು 1905 ರಲ್ಲಿ ಪ್ರಾರಂಭವಾದ ಸ್ವದೇಶಿ ಆಂದೋಲನದ ನೆನಪಿಗಾಗಿ ಆಗಸ್ಟ್ 7ನ್ನು ರಾಷ್ಟ್ರೀಯ ಕೈಮಗ್ಗ ದಿನವೆಂದು ಘೋಷಿಸಿತು. ವಿದೇಶಿ ನಿರ್ಮಿತ ಉಡುಪುಗಳ ಬದಲಿಗೆ ಸ್ಥಳೀಯ ಸಮುದಾಯಗಳು ಕೈಯಿಂದ ನೇಯ್ದ ಬಟ್ಟೆಗಳನ್ನು ಧರಿಸಲು ಭಾರತೀಯರನ್ನು ಉತ್ತೇಜಿಸುವ ಗುರಿಯನ್ನು ಈ ಚಳುವಳಿಯು ಹೊಂದಿತ್ತು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದಿರುವ ಜಾರ್ದೋಶ್ ಅವರು ರಾಷ್ಟ್ರೀಯ ಆಚರಣೆಕ್ಕೆ ಹೆಚ್ಚು ಒತ್ತು ನೀಡುವಂತೆ ಹೇಳಿದ್ದಾರೆ. ಈ ದಿನವನ್ನು ಆಚರಣೆ ಮಾಡುವುದರಿಂದ ಕೈಮಗ್ಗ ನೇಕಾರರಿಗೆ ಬೆಂಬಲ ಮತ್ತು ಪ್ರೋತ್ಸಾಹ ಇದರ ಜೊತೆಗೆ ಜೀವನೋಪಾಯಕ್ಕೆ ಸಹಾಯವಾಗುವಂತೆ ಈ ಆಚರಣೆಯನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದರು.

ತೆಲಂಗಾಣ ರಾಷ್ಟ್ರ ಸಮಿತಿಯ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರು ತೆಲಂಗಾಣದಲ್ಲಿ ಕೈಮಗ್ಗ ಮತ್ತು ಪವರ್ ಲೂಮ್ ನೇಕಾರರಿಗೆ ಜೀವ ವಿಮಾ ಯೋಜನೆಯನ್ನು ಘೋಷಿಸಿದರು. ಟ್ವಿಟರ್​ನಲ್ಲಿ ಅವರು, ತೆಲಂಗಾಣ ಸರ್ಕಾರವು ಎಲ್ಲಾ ಕೈಮಗ್ಗ ಮತ್ತು ಪವರ್ಲೂಮ್ ನೇಕಾರರಿಗೆ ರಾಷ್ಟ್ರೀಯ ಕೈಮಗ್ಗ ದಿನದಂದು ಹೊಸ ಜೀವ ವಿಮಾ ಯೋಜನೆಯನ್ನು ಪ್ರಾರಂಭಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

TV9 Kannada


Leave a Reply

Your email address will not be published. Required fields are marked *