ವಿದೇಶಿ ನಿರ್ಮಿತ ಉತ್ಪನ್ನಗಳನ್ನು ಬಹಿಷ್ಕರಿ, ಭಾರತೀಯ ನಿರ್ಮಿತ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ವರ್ಷವು ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ.

National Handloom Day 2022
ಭಾರತದಲ್ಲಿ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನ (National Handloom Day 2022) ವನ್ನು ಆಚರಿಸಲಾಗುತ್ತದೆ. ಈ ದಿನದಂದು ಅಂದರೆ 1905 ರಲ್ಲಿ ಬಂಗಾಳದಲ್ಲಿ ಸ್ವದೇಶಿ ಚಳುವಳಿ ಪ್ರಾರಂಭವಾಗಿತ್ತು. ಆ ಚಳುವಳಿಯ ಮೂಲ ಉದ್ದೇಶ ವಿದೇಶಿ ನಿರ್ಮಿತ ಉತ್ಪನ್ನಗಳನ್ನು ಬಹಿಷ್ಕರಿ, ಭಾರತೀಯ ನಿರ್ಮಿತ ಉತ್ಪನ್ನಗಳನ್ನು ಉತ್ತೇಜಿಸುವುದಾಗಿದೆ. ಹಾಗಾಗಿ ಪ್ರತಿ ವರ್ಷವು ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತವಿರು ನೇಕಾರರ ಕೆಲಸ ಮತ್ತು ಅವರ ಶ್ರಮವನ್ನು ಶ್ಲಾಘಿಸುವ ಮೂಲಕ ಮೊದಲ ರಾಷ್ಟ್ರೀಯ ಕೈಮಗ್ಗ ದಿನವನ್ನು ಉದ್ಘಾಟಿಸಿದರು.