Navjot Singh Sidhu: ಪಟಿಯಾಲಾ ಜೈಲಿನಲ್ಲಿ ಗುಮಾಸ್ತನ ಕೆಲಸ ಮಾಡ್ತಿದ್ದಾರೆ ನವಜೋತ್ ಸಿಂಗ್ ಸಿಧು; ಸಂಬಳವೆಷ್ಟು ಗೊತ್ತಾ? | Navjot Singh Sidhu will do Clerk job in Patiala jail know how much he will earn


Navjot Singh Sidhu: ಪಟಿಯಾಲಾ ಜೈಲಿನಲ್ಲಿ ಗುಮಾಸ್ತನ ಕೆಲಸ ಮಾಡ್ತಿದ್ದಾರೆ ನವಜೋತ್ ಸಿಂಗ್ ಸಿಧು; ಸಂಬಳವೆಷ್ಟು ಗೊತ್ತಾ?

ನವಜೋತ್ ಸಿಂಗ್ ಸಿಧು

Image Credit source: Hindustan Times

ರಸ್ತೆ ಅಪಘಾತ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಪಂಜಾಬ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರಿಗೆ ಪಟಿಯಾಲ ಜೈಲಿನಲ್ಲಿ ಗುಮಾಸ್ತನ ಕೆಲಸ ನೀಡಲಾಗಿದೆ. ಅವರಿಗೆ ದಿನಕ್ಕೆ ಎಷ್ಟು ಸಂಬಳ ಕೊಡುತ್ತಾರೆ? ತಿನ್ನಲು ಏನೇನು ಆಹಾರ ಕೊಡುತ್ತಾರೆ ಗೊತ್ತಾ?

ಪಟಿಯಾಲಾ: ಜೈಲು ಶಿಕ್ಷೆಗೆ ಒಳಗಾಗಿರುವ ಪಂಜಾಬ್ ಮಾಜಿ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Navjot Singh Sidhu) ಜೈಲಿನಲ್ಲಿ ‘ಮುನ್ಷಿ (ಗುಮಾಸ್ತ)’ ಆಗಿ ಕೆಲಸ ಮಾಡಲಿದ್ದಾರೆ. ನವಜೋತ್ ಸಿಂಗ್ ಸಿಧು ಅವರನ್ನು ಪಟಿಯಾಲ ಸೆಂಟ್ರಲ್ ಜೈಲಿನಲ್ಲಿ (Patiala Jail) ಕ್ಲೆರಿಕಲ್ ಕೆಲಸಕ್ಕಾಗಿ ಸಹಾಯಕರಾಗಿ ಕೆಲಸ ಮಾಡಲು ನಿಯೋಜಿಸಲಾಗಿದೆ. ಮಂಗಳವಾರದಿಂದ ಸಿಧು ಜೈಲಿನಲ್ಲಿ ಸಹಾಯಕನಾಗಿ ಕೆಲಸ ಆರಂಭಿಸಿದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಎರಡು ಪಾಳಿಯಲ್ಲಿ ತಮ್ಮ ಕೆಲಸವನ್ನು ಮುಂದುವರೆಸಲಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಕೆಲಸದ ಪಾಳಿಗಳ ನಡುವೆ ಸಿಧುಗೆ 3 ಗಂಟೆಗಳ ವಿರಾಮ ಸಿಗಲಿದೆ.

ಪಟಿಯಾಲಾ ಜೈಲಿನ ನಿಯಮಗಳ ಪ್ರಕಾರ, ನವಜೋತ್ ಸಿಂಗ್ ಸಿಧುಗೆ ಮೊದಲ 3 ತಿಂಗಳು ವೇತನವಿಲ್ಲದೆ ತರಬೇತಿ ನೀಡಲಾಗುತ್ತದೆ. ನಂತರ ಕೌಶಲ್ಯರಹಿತ, ಅರೆ ಕೌಶಲ್ಯ ಅಥವಾ ನುರಿತ ಖೈದಿ ಎಂದು ವರ್ಗೀಕರಿಸಲಾಗುತ್ತದೆ. ಇವರಿಗೆ ದಿನಕ್ಕೆ 40 ರೂ, 50 ರೂ. ಹಾಗೂ ನುರಿತ ಕೆಲಸಗಾರರಿಗೆ 60 ರೂ. ನೀಡಲಾಗುತ್ತದೆ. ಕೆಲಸಕ್ಕೆ ಸೇರಿದ ಆರಂಭದಲ್ಲಿ ನವಜೋತ್ ಸಿಂಗ್ ಸಿಧು 3 ತಿಂಗಳ ತರಬೇತಿ ಮುಗಿದ ನಂತರ ದಿನಕ್ಕೆ 40 ರೂ. ಗಳಿಸುತ್ತಾರೆ ಎಂದು ವರದಿಯಾಗಿದೆ. ಅವರ ಸಂಪಾದನೆಯನ್ನು ಅವರ ಖಾತೆಗೆ ಜಮಾ ಮಾಡಲಾಗುವುದು. ಸೋಮವಾರ ವೈದ್ಯಕೀಯ ಸಮಿತಿಯಿಂದ ಪರೀಕ್ಷಿಸಿದ ನಂತರ ಆರೋಗ್ಯ ಸ್ಥಿತಿಯ ಕಾರಣದಿಂದ ನವಜೋತ್ ಸಿಂಗ್ ಸಿಧುಗೆ ವಿಶೇಷ ಆಹಾರವನ್ನು ನೀಡಲಾಗುತ್ತಿದೆ.

TV9 Kannada


Leave a Reply

Your email address will not be published. Required fields are marked *