
ನವಜೋತ್ ಸಿಂಗ್ ಸಿಧು
ದೆಹಲಿ: ಪಂಜಾಬ್ ಕಾಂಗ್ರೆಸ್ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಪಟಿಯಾಲ ನ್ಯಾಯಾಲಯದಲ್ಲಿ ಶುಕ್ರವಾರ ಶರಣಾಗಿದ್ದಾರೆ. 1988ರ ರಸ್ತೆ ಜಗಳ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸಿಧುಗೆ 1 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಮನೆಯ ಸಮೀಪದಲ್ಲೇ ಇರುವ ಜಿಲ್ಲಾ ಕೋರ್ಟ್ ಗೆ ಸಿಧು ಬಂದಿದ್ದು, ನವತೇಜ್ ಸಿಂಗ್ ಚೀಮಾ ಸೇರಿದಂತೆ ಕೆಲವು ಪಕ್ಷದ ನಾಯಕರು ಅವರ ಜತೆ ಇದ್ದರು ಎಂದುಪಿಟಿಐ ವರದಿ ಮಾಡಿದೆ. ಎಸ್ಯುವಿಯಲ್ಲಿ ಚೀಮಾ ಅವರೇ ಸಿಧುವನ್ನು ಕೋರ್ಟ್ ಗೆ ಕರೆತಂದಿದ್ದಾರೆ. ಕೆಲವು ಬೆಂಬಲಿಗರು ಶುಕ್ರವಾರ ಬೆಳಗ್ಗೆ […]
ದೆಹಲಿ: ಪಂಜಾಬ್ ಕಾಂಗ್ರೆಸ್ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಪಟಿಯಾಲ ನ್ಯಾಯಾಲಯದಲ್ಲಿ ಶುಕ್ರವಾರ ಶರಣಾಗಿದ್ದಾರೆ. 1988ರ ರಸ್ತೆ ಜಗಳ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸಿಧುಗೆ 1 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಮನೆಯ ಸಮೀಪದಲ್ಲೇ ಇರುವ ಜಿಲ್ಲಾ ಕೋರ್ಟ್ ಗೆ ಸಿಧು ಬಂದಿದ್ದು, ನವತೇಜ್ ಸಿಂಗ್ ಚೀಮಾ ಸೇರಿದಂತೆ ಕೆಲವು ಪಕ್ಷದ ನಾಯಕರು ಅವರ ಜತೆ ಇದ್ದರು ಎಂದುಪಿಟಿಐ ವರದಿ ಮಾಡಿದೆ. ಎಸ್ಯುವಿಯಲ್ಲಿ ಚೀಮಾ ಅವರೇ ಸಿಧುವನ್ನು ಕೋರ್ಟ್ ಗೆ ಕರೆತಂದಿದ್ದಾರೆ. ಕೆಲವು ಬೆಂಬಲಿಗರು ಶುಕ್ರವಾರ ಬೆಳಗ್ಗೆ ಸಿಧು ನಿವಾಸಕ್ಕೆ ತಲುಪಿದ್ದರು. ಏತನ್ಮಧ್ಯೆ ಸಿಧು ಪತ್ನಿ ನವಜೋತ್ ಕೌರ್ ಸಿಧು ಗುರುವಾರ ರಾತ್ರಿಯೇ ಪಟಿಯಾಲದಲ್ಲಿರುವ ಮನೆಗೆ ಬಂದಿದ್ದಾರೆ. ಕೆಲವೊಂದು ಆರೋಗ್ಯ ಸಮಸ್ಯೆಗಳಿವೆ. ಸುಪ್ರೀಂಕೋರ್ಟ್ ಗೆ ಶರಣಾಗಲು ಕಾಲಾವಕಾಶ ಬೇಕು ಎಂದು ಸಿಧು ಶುಕ್ರವಾರ ಬೆಳಗ್ಗೆ ಹೇಳಿದ್ದರು. ನ್ಯಾಯಮೂರ್ತಿ ಖಾಲ್ವಿಲ್ಕರ್ ಅವರು ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ಅವರಲ್ಲಿ ಈ ವಿಷಯ ಪ್ರಸ್ತಾಪಿಸಿ ಔಪಚಾರಿಕ ಮನವಿ ಸಲ್ಲಿಸಿ ಎಂದಿದ್ದರು.
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)