Nawazuddin Siddiqui Birthday: ನವಾಜುದ್ದೀನ್ ಸಿದ್ದಿಕಿ ನಟನೆಯ ಈ ಕಿರುಚಿತ್ರಗಳನ್ನು ವೀಕ್ಷಿಸಿದ್ದೀರಾ? ಮಿಸ್ ಮಾಡಲೇಬೇಡಿ | Nawazuddin Siddiqui Birthday Profile Wiki Biography Movies and other details best short films of sacred games actor watch


Nawazuddin Siddiqui Birthday: ನವಾಜುದ್ದೀನ್ ಸಿದ್ದಿಕಿ ನಟನೆಯ ಈ ಕಿರುಚಿತ್ರಗಳನ್ನು ವೀಕ್ಷಿಸಿದ್ದೀರಾ? ಮಿಸ್ ಮಾಡಲೇಬೇಡಿ

ನವಾಜುದ್ದೀನ್ ಸಿದ್ದಿಕಿ

Nawazuddin Siddiqui Best short Films: ಕಿರುಚಿತ್ರಗಳಲ್ಲೂ ಅಭಿನಯಿಸಿ ಜನಮನ ಸೂರೆಗೊಂಡಿದ್ದಾರೆ ನವಾಜುದ್ದೀನ್ ಸಿದ್ದಿಕಿ. ನೀವು ಮಿಸ್ ಮಾಡಲೇಬಾರದ ನವಾಜುದ್ದೀನ್ ನಟನೆಯ ಕಿರುಚಿತ್ರಗಳು ಇಲ್ಲಿವೆ.

ಭಾರತೀಯ ಚಿತ್ರರಂಗದಲ್ಲಿ ಪ್ರಸ್ತುತ ಇರುವ ಅತ್ಯುತ್ತಮ ಕಲಾವಿದರ ಪಟ್ಟಿಯಲ್ಲಿ ನವಾಜುದ್ದೀನ್ ಸಿದ್ದಿಕಿ ಹೆಸರು ಮೊದಲ ಸಾಲಿನಲ್ಲಿ ಬರುತ್ತದೆ. ಯಾವ ಪಾತ್ರಕ್ಕೂ ಸೈ ಎನ್ನುವ ಅವರ ಅಭಿನಯಕ್ಕೆ ಮಾರುಹೋಗದವರು ವಿರಳ. ಇಂದು (ಮೇ.19) ನಟನ ಜನ್ಮದಿನ. 48ನೇ ವಸಂತಕ್ಕೆ ಕಾಲಿಡುತ್ತಿರುವ ನವಾಜುದ್ದೀನ್, ತಮ್ಮ ಅಭಿನಯದಿಂದ ಹಾಲಿವುಡ್​ನಲ್ಲೂ ಛಾಪು ಮೂಡಿಸಿದವರು. ರಾಷ್ಟ್ರೀಯ ನಾಟಕ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ನಟ ಆಕ್ಷನ್ ಚಿತ್ರಗಳಲ್ಲಿ ಮಿಂಚಿದಷ್ಟೇ ರೊಮ್ಯಾಂಟಿಕ್ ಚಿತ್ರಗಳಲ್ಲೂ ಗಮನ ಸೆಳೆದಿದ್ದಾರೆ. ಓಟಿಟಿ ಕ್ಷೇತ್ರದಲ್ಲೂ ನವಾಜುದ್ದೀನ್ (Nawazuddin Siddiqui)  ದೊಡ್ಡ ಹೆಸರು. ಕಾರಣ, ಭಾರತದಲ್ಲಿ ವೆಬ್ ಸೀರೀಸ್ ಜನಪ್ರಿಯತೆಗೆ ನಾಂದಿ ಹಾಡಿದ ಸರಣಿಗಳಲ್ಲಿ ಪ್ರಮುಖವಾದ ‘ಸೇಕ್ರೆಡ್ ಗೇಮ್ಸ್’ನ ಪ್ರಮುಖ ಆಕರ್ಷಣೆಯೇ ನವಾಜುದ್ದೀನ್! ಪ್ರಸ್ತುತ ಓಟಿಟಿಯಿಂದ ತುಸು ಅಂತರ ಕಾಯ್ದುಕೊಂಡಿರುವ ನವಾಜುದ್ದೀನ್ ಮತ್ತೆ ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ನಟ ಕಿರುಚಿತ್ರಗಳಲ್ಲೂ ನಟಿಸಿ ಜನಮನ ಸೂರೆಗೊಂಡಿದ್ದಾರೆ ಎಂಬುದು ನಿಮಗೆ ಗೊತ್ತಿದೆಯೇ? ಮಿಸ್ ಮಾಡಲೇಬಾರದ ನವಾಜುದ್ದೀನ್ ನಟಿಸಿರುವ ಕಿರುಚಿತ್ರಗಳು ಇಲ್ಲಿವೆ.

ಬೈಪಾಸ್ (BYPASS)/ 2003: ನವಾಜುದ್ದೀನ್ ಈ ಕಿರುಚಿತ್ರದಲ್ಲಿ ಇರ್ಫಾನ್ ಖಾನ್ ಜತೆ ನಟಿಸಿದ್ದಾರೆ. ಯಾವುದೇ ಡೈಲಾಗ್‌ಗಳಿಲ್ಲದ ಈ ಕಿರುಚಿತ್ರ ನಿಮ್ಮನ್ನು ಮೋಡಿ ಮಾಡುವುದರಲ್ಲಿ ಅನುಮಾನವಿಲ್ಲ.

ಪತಂಗ್: ದಿ ಕೈಟ್/ 2011: ಇಡೀ ನಗರ ಗಾಳಿಪಟ ಉತ್ಸವದಲ್ಲಿ ತೊಡಗಿಸಿಕೊಂಡಿದ್ದಾಗ ಒಂದು ಕುಟುಂಬದ ಏರಿಳಿತದ ಕತೆಯನ್ನು ಇದು ಕಟ್ಟಿಕೊಡುತ್ತದೆ.

TV9 Kannada


Leave a Reply

Your email address will not be published. Required fields are marked *