Nayanthara: ತಿರುಪತಿ ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಯನತಾರಾ; ಇದಕ್ಕೆ ಗಂಡ ನೀಡಿದ ಸ್ಪಷ್ಟನೆ ಏನು? | Nayanthara Vignesh Shivan apologize for wearing footwear at Tirumala Tirupati Temple


Nayanthara: ತಿರುಪತಿ ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ ಓಡಾಡಿದ ನಯನತಾರಾ; ಇದಕ್ಕೆ ಗಂಡ ನೀಡಿದ ಸ್ಪಷ್ಟನೆ ಏನು?

ನಯನತಾರಾ, ವಿಘ್ನೇಶ್ ಶಿವನ್

Vignesh Shivan | Tirumala Tirupati Temple: ನಯನತಾರಾ ಪರವಾಗಿ ವಿಘ್ನೇಶ್​ ಶಿವನ್​ ಸ್ಪಷ್ಟನೆ ನೀಡಿದ್ದಾರೆ. ತಿರುಪತಿ ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಧರಿಸಿ ಓಡಾಡಿದ್ದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಖ್ಯಾತ ನಟಿ ನಯನತಾರಾ (Nayanthara) ಮತ್ತು ನಿರ್ದೇಶಕ ವಿಘ್ನೇಶ್​ ಶಿವನ್​ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ದೊಡ್ಡ ಸುದ್ದಿ ಆಗಿದೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರಿಬ್ಬರು ಜೂನ್​ 9ರಂದು ಹಸೆಮಣೆ ಏರಿದರು. ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮದುವೆ ಮಾಡಿಕೊಳ್ಳಬೇಕು ಎಂಬುದು ಈ ಜೋಡಿಯ ಆಸೆ ಆಗಿತ್ತು. ಅದಕ್ಕಾಗಿ ಸಕಲ ಪ್ರಯತ್ನವನ್ನೂ ಮಾಡಿದ್ದರು. ಆದರೆ ಅಲ್ಲಿ ಅನುಮತಿ ಸಿಗದ ಕಾರಣ ಮಹಾಬಲಿಪುರಂನಲ್ಲಿ ವಿವಾಹ ನೆರವೇರಿತು. ಈಗ ನಯನತಾರಾ ಮತ್ತು ವಿಘ್ನೇಶ್​ ಶಿವನ್​ (Vignesh Shivan) ಅವರು ಒಂದು ಕಾಂಟ್ರವರ್ಸಿ ಮಾಡಿಕೊಂಡಿದ್ದಾರೆ. ತಿರುಪತಿ ದೇವಾಲಯದ (Tirumala Temple) ಆವರಣದಲ್ಲಿ ಅವರು ಚಪ್ಪಲಿ ಧರಿಸಿ ಓಡಾಡಿರುವುದು ಬೆಳಕಿಗೆ ಬಂದಿದೆ. ಅವರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಭಕ್ತರ ಭಾವನೆಗಳಿಗೆ ಇದರಿಂದ ಧಕ್ಕೆ ಆಗಿದೆ ಎಂಬ ಕೂಗು ಕೇಳಿಬಂದಿದೆ. ಈ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ವಿಘ್ನೇಶ್​ ಶಿವನ್​ ಅವರು ಸ್ಪಷ್ಟನೆ ನೀಡಿದ್ದಾರೆ.

ನಯನತಾರಾ ಪರವಾಗಿ ವಿಘ್ನೇಶ್​ ಶಿವನ್​ ಅವರು ಬರೆದಿರುವ ಪತ್ರದ ಪ್ರತಿ ವೈರಲ್​ ಆಗಿದೆ. ತಿರುಪತಿ ದೇವಸ್ಥಾನದ ಆವರಣದಲ್ಲಿ ತಾವು ಚಪ್ಪಲಿ ಧರಿಸಿ ಓಡಾಡಿದ್ದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಇದು ಗಡಿಬಿಡಿಯಲ್ಲಿ ಆದ ಅಚಾತುರ್ಯ ಎಂದು ಅವರು ಹೇಳಿದ್ದಾರೆ.

TV9 Kannada


Leave a Reply

Your email address will not be published.