NDTV: ಎನ್​ಡಿಟಿವಿಯಲ್ಲಿ ಪ್ರಣಯ್ ರಾಯ್, ರಾಧಿಕಾ ರಾಯ್ ಆಡಳಿತ ಸಂಪೂರ್ಣ ಅಂತ್ಯ; ನಿರ್ದೇಶಕರ ಮಂಡಳಿಗೆ ರಾಜೀನಾಮೆ – Prannoy and Radhika Roy resign from NDTV Directors board after Gautam Adani takes control


ಅದಾನಿ ಎಂಟರ್​​ಪ್ರೈಸಸ್ ಸದ್ಯ ಅಂಗಸಂಸ್ಥೆ ಆರ್​​ಆರ್​ಪಿಆರ್​ ಹೋಲ್ಡಿಂಗ್ಸ್ ಮತ್ತು ವಿಶಪ್ರಧಾನ್ ಕಮರ್ಷಿಯಲ್ ಮೂಲಕ ಎನ್​​ಡಿಟಿವಿ ಒಡೆತನ ಹೊಂದಿದೆ. ರಾಯ್ ದಂಪತಿ ಬಳಿ ಶೇಕಡಾ 2.5ರ ಪಾಲು ಇರಲಿದೆ ಎಂದು ಷೇರುಪೇಟೆಯ ಪ್ರಕಟಣೆ ತಿಳಿಸಿದೆ.

NDTV: ಎನ್​ಡಿಟಿವಿಯಲ್ಲಿ ಪ್ರಣಯ್ ರಾಯ್, ರಾಧಿಕಾ ರಾಯ್ ಆಡಳಿತ ಸಂಪೂರ್ಣ ಅಂತ್ಯ; ನಿರ್ದೇಶಕರ ಮಂಡಳಿಗೆ ರಾಜೀನಾಮೆ

ಪ್ರಣಯ್ ರಾಯ್

Image Credit source: PTI

ನವದೆಹಲಿ: ಎನ್​ಡಿಟಿವಿಯಲ್ಲಿ (NDTV) ಅದರ ಸ್ಥಾಪಕರಾದ ಪ್ರಣಯ್ ರಾಯ್ (Prannoy Roy) ಮತ್ತು ರಾಧಿಕಾ ರಾಯ್ ಅವರ ಆಡಳಿತ ಸಂಪೂರ್ಣ ಅಂತ್ಯಗೊಂಡಿದೆ. ಸಂಸ್ಥೆಯ ಶೇಕಡಾ 64.71ರಷ್ಟು ಷೇರುಗಳು ಉದ್ಯಮಿ ಗೌತಮ್ ಅದಾನಿ ಪಾಲಾದ ಬೆನ್ನಲ್ಲೇ ಇಬ್ಬರೂ ಸಹ ನಿರ್ದೇಶಕರ ಮಂಡಳಿಗೂ ರಾಜೀನಾಮೆ ನೀಡಿದ್ದಾರೆ. ರಾಯ್ ದಂಪತಿ ಜತೆಗೆ ಇತರ ನಾಲ್ವರು ಸ್ವತಂತ್ರ ನಿರ್ದೇಶಕರೂ ರಾಜೀನಾಮೆ ನೀಡಿದ್ದಾರೆ ಎಂದು ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ಎನ್​​ಡಿಟಿವಿ ತಿಳಿಸಿದೆ. ಶುಕ್ರವಾರವಷ್ಟೇ ಅದಾನಿ ಸಮೂಹವು ಎನ್​ಡಿಟಿವಿ ಒಡೆತನವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಅದಾನಿ ಎಂಟರ್​​ಪ್ರೈಸಸ್ ಸದ್ಯ ಅಂಗಸಂಸ್ಥೆ ಆರ್​​ಆರ್​ಪಿಆರ್​ ಹೋಲ್ಡಿಂಗ್ಸ್ ಮತ್ತು ವಿಶಪ್ರಧಾನ್ ಕಮರ್ಷಿಯಲ್ ಮೂಲಕ ಎನ್​​ಡಿಟಿವಿ ಒಡೆತನ ಹೊಂದಿದೆ. ರಾಯ್ ದಂಪತಿ ಬಳಿ ಶೇಕಡಾ 2.5ರ ಪಾಲು ಇರಲಿದೆ ಎಂದು ಷೇರುಪೇಟೆಯ ಪ್ರಕಟಣೆ ತಿಳಿಸಿದೆ.

‘ಕಂಪನಿಯಲ್ಲಿ ನಾನು ಹೊಂದಿರುವ ಪ್ರವರ್ತಕ ಸ್ಥಾನವನ್ನು ತೆರವುಗೊಳಿಸಿ ‘ಪಬ್ಲಿಕ್’ ಕೆಟಗರಿಯಲ್ಲಿ ಪರಿಗಣಿಸುವಂತೆ ವಿನಂತಿಸುತ್ತೇನೆ. ಸದ್ಯ ಶೇಕಡಾ 2.5ರಷ್ಟು ಷೇರುಗಳನ್ನು ಮಾತ್ರ ಹೊಂದಿದ್ದೇನೆ. ನಾನೀಗ ಮ್ಯಾನೇಜ್​​ಮೆಂಟ್ ವ್ಯವಹಾರಗಳಲ್ಲಿ ಭಾಗಿಯಾಗುತ್ತಿಲ್ಲ. ನಿರ್ದೇಶಕರನ್ನು ನೇಮಕ ಮಾಡುವ ಅಥವಾ ಇತರ ಯಾವುದೇ ಅಧಿಕಾರವನ್ನು ಹೊಂದಿಲ್ಲ’ ಎಂದು ಪ್ರಣಯ್ ರಾಯ್ ಷೇರುಪೇಟೆಗೆ ತಿಳಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *