Netaji Diwas PM Modi to name Andaman and Nicobar unnamed Islands after 21 Param Vir Chakra awardees on 23rd January | Parakram Diwas: ಅಂಡಮಾನ್ ನಿಕೋಬಾರ್​ನ ದ್ವೀಪಗಳಿಗೆ 21 ಪರಮವೀರ ಚಕ್ರ ಪುರಸ್ಕೃತರ ಹೆಸರು ನಾಮಕರಣ


ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಂಡಮಾನ್-ನಿಕೋಬಾರ್ ದ್ವೀಪಗಳ 21 ದೊಡ್ಡ ಹೆಸರಿಲ್ಲದ ದ್ವೀಪಗಳಿಗೆ 21 ಪರಮವೀರ ಚಕ್ರ ವಿಜೇತರ ಹೆಸರನ್ನು ಇಡಲಿದ್ದಾರೆ.

Parakram Diwas: ಅಂಡಮಾನ್ ನಿಕೋಬಾರ್​ನ ದ್ವೀಪಗಳಿಗೆ 21 ಪರಮವೀರ ಚಕ್ರ ಪುರಸ್ಕೃತರ ಹೆಸರು ನಾಮಕರಣ

ಅಂಡಮಾನ್ ನಿಕೋಬಾರ್

ದೆಹಲಿ: ಸೋಮವಾರ ನಡೆಯುವ ಪರಾಕ್ರಮ್ ದಿವಸ್‌(Parakram Diwas) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ(Andaman Nikobar) ಹೆಸರಿಸದ 21 ದೊಡ್ಡ ದ್ವೀಪಗಳಿಗೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಿದ್ದಾರೆ. ವಾರ್ಚುವಲ್​ ಆಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದುವರೆಗೂ ನಾಮಕರಣ ಮಾಡಲಾಗದ 21 ದೊಡ್ಡ ದ್ವೀಪಗಳಿಗೆ ಹೆಸರಿಡಲಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ನೆನಪಿಗಾಗಿ ಸರ್ಕಾರವು 2021 ರಲ್ಲಿ ಜನವರಿ 23 ಅನ್ನು ಪರಾಕ್ರಮ್ ದಿವಸ್ ಎಂದು ಘೋಷಿಸಿತ್ತು. ಈ ಹಿನ್ನೆಲೆ ಶೌರ್ಯ ದಿನದಂದು, ಭಾರತ ಮಾತೆಯ ವೀರ ಮಕ್ಕಳ ಗೌರವಾರ್ಥ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಬೆಳಿಗ್ಗೆ 11 ಗಂಟೆಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಅಂಡಮಾನ್-ನಿಕೋಬಾರ್ ದ್ವೀಪಗಳ 21 ದೊಡ್ಡ ಹೆಸರಿಲ್ಲದ ದ್ವೀಪಗಳಿಗೆ 21 ಪರಮವೀರ ಚಕ್ರ ವಿಜೇತರ ಹೆಸರನ್ನು ಇಡಲಾಗುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಟ್ವೀಟ್ ಮಾಡಿದ್ದರು.

ತಾಜಾ ಸುದ್ದಿ

ಪ್ರಧಾನಮಂತ್ರಿ ಕಚೇರಿಯ (PMO) ಅಧಿಕೃತ ಪ್ರಕಟಣೆಯ ಪ್ರಕಾರ, ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರಿಗೆ ಗೌರವಾರ್ಥವಾಗಿ 2018ರಲ್ಲಿ ಅಲ್ಲಿನ ರಾಸ್​ ದ್ವೀಪಗಳಿಗೆ ಸುಭಾಷ್​ ಚಂದ್ರ ಬೋಸ್​ ದ್ವೀಪ ಎಂದು ಮರುನಾಮಕರಣ ಮಾಡಲಾಗಿತ್ತು. ಸದ್ಯ ಈಗ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನಿರ್ಮಿಸಲಾದ ನೇತಾಜಿಗೆ ಮೀಸಲಾಗಿರುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಲಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಅಂಡಮಾನ್​-ನಿಕೋಬಾರ್​ ದ್ವೀಪಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಈ ಬದಲಾವಣೆ ಮಾಡಲಾಗಿತ್ತು. ನೇಲ್​ ದ್ವೀಪಕ್ಕೆ ಶಾಹೀದ್​ ದ್ವೀಪವೆಂದೂ, ಹ್ಯಾವ್ಲಾಕ್ ಐಸ್​ಲ್ಯಾಂಡ್​​ಗೆ ಸ್ವರಾಜ್​ ದ್ವೀಪವೆಂದೂ ಮರುನಾಮಕರಣ ಮಾಡಲಾಯಿತು. ಹೆಸರಿಸದ ಅತಿದೊಡ್ಡ ದ್ವೀಪಕ್ಕೆ ಮೊದಲ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಾಗುವುದು, ಎರಡನೇ ದೊಡ್ಡ ಹೆಸರಿಲ್ಲದ ದ್ವೀಪಕ್ಕೆ ಎರಡನೇ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಾಗುವುದು. ರಾಷ್ಟ್ರದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಅಂತಿಮ ತ್ಯಾಗ ಮಾಡಿದ ನಮ್ಮ ವೀರರಿಗೆ ಈ ಹಂತವು ಶಾಶ್ವತ ಗೌರವವಾಗಿದೆ ಎಂದು ಪಿಎಂ​ಒ ತಿಳಿಸಿದೆ.

TV9 Kannada


Leave a Reply

Your email address will not be published. Required fields are marked *