Netflix Password Sharing will end OTT platform CEOs said people in India who share passwords will have to pay | Netflix Password Sharing: ಸ್ನೇಹಿತರ ಪಾಸ್​​ವರ್ಡ್ ಬಳಸಿ ನೆಟ್​ಫ್ಲಿಕ್ಸ್ ನೋಡುವುದು ಇನ್ನು ಸುಲಭವಿಲ್ಲ


ಹೆಚ್ಚುವರಿಯಾಗಿ ಪಾವತಿ ಮಾಡಿ ಇತರರೊಂದಿಗೆ ಪಾಸ್​ವರ್ಡ್ ಹಂಚಿಕೊಳ್ಳುವ ಪೇಯ್ಡ್ ಶೇರಿಂಗ್ ಆಯ್ಕೆಯನ್ನು ನೀಡಲಾಗುತ್ತದೆ ಎಂದೂ ನೆಟ್​​ಫ್ಲಿಕ್ಸ್ ತಿಳಿಸಿದೆ.

Netflix Password Sharing: ಸ್ನೇಹಿತರ ಪಾಸ್​​ವರ್ಡ್ ಬಳಸಿ ನೆಟ್​ಫ್ಲಿಕ್ಸ್ ನೋಡುವುದು ಇನ್ನು ಸುಲಭವಿಲ್ಲ

ನೆಟ್​ಫ್ಲಿಕ್ಸ್ (ಸಾಂದರ್ಭಿಕ ಚಿತ್ರ)

ಪಾಸ್​ವರ್ಡ್ ಶೇರಿಂಗ್ (Password Sharing) ಅಥವಾ ಒಬ್ಬರ ಪಾಸ್​​ವರ್ಡ್ ಬಳಸಿಕೊಂಡು ಇನ್ನೊಬ್ಬರು ನೆಟ್​​ಫ್ಲಿಕ್ಸ್ (Netflix) ನೋಡುವುದಕ್ಕೆ ಕಡಿವಾಣ ಬೀಳಲಿದೆ. ಪಾಸ್​ವರ್ಡ್ ಹಂಚಿಕೆಯನ್ನು ಈ ವರ್ಷದಿಂದ ಸ್ಥಗಿತಗೊಳಿಸುವುದಾಗಿ ಆನ್​ಲೈನ್ ಸ್ಟ್ರೀಮಿಂಗ್ ತಾಣ ನೆಟ್​​ಫ್ಲಿಕ್ಸ್ ತಿಳಿಸಿದೆ. ಇದರಿಂದಾಗಿ, ಈಗ ಸ್ನೇಹಿತರ ಪಾಸ್​ವರ್ಡ್ ಬಳಸಿಕೊಂಡು ನೆಟ್​ಫ್ಲಿಕ್ಸ್ ನೋಡುವವರು ಮುಂದೆ ಒಟಿಟಿ ವೇದಿಕೆಯ ಮೂಲಕ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸಲು ಹಣ ಪಾವತಿ ಮಾಡಬೇಕಾಗಲಿದೆ. ಈ ವಿಚಾರವಾಗಿ ‘ಬ್ಲೂಮ್​ಬರ್ಗ್​’ಗೆ ನೀಡಿರುವ ಸಂದರ್ಶನದಲ್ಲಿ ನೆಟ್​ಫ್ಲಿಕ್ಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ (ಸಿಇಒ) ಟೆಡ್ ಸರಂಡೋಸ್ ಮತ್ತು ಗ್ರೆಗ್ ಪೀಟರ್ಸ್ ತಿಳಿಸಿದ್ದಾರೆ. ಪಾಸ್​ವರ್ಡ್ ಶೇರಿಂಗ್ ಅನ್ನು ಹಂತಹಂತವಾಗಿ ಸ್ಥಗಿತಗೊಳಿಸಿದ ಹೊರತಾಗ್ಯೂ ಗ್ರಾಹಕರ ಅನುಭವದ ವಿಚಾರವಾಗಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಿಇಒgಳು ಹೇಳಿದ್ದಾರೆ. ಎಲ್ಲ ಗ್ರಾಹಕರ ಮನಸ್ಸು ಗೆಲ್ಲುವುದೇ ನಮ್ಮ ಗುರಿ ಎಂದೂ ಅವರು ಹೇಳಿದ್ದಾರೆ.

ಭಾರತದಂಥ ದೇಶಗಳನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಸಬ್​​ಸ್ಕ್ರೈಬರ್ ಸಂಖ್ಯೆಯನ್ನು 15ರಿಂದ 20 ದಶಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನು ನೆಟ್​ಫ್ಲಿಕ್ಸ್ ಹೊಂದಿದೆ ಎಂದೂ ‘ಬ್ಲೂಮ್​ಬರ್ಗ್’ ವರದಿ ತಿಳಿಸಿದೆ. 2023ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಪಾವತಿಸಿದ ಹಂಚಿಕೆ ಅಥವಾ ಪೇಯ್ಡ್ ಶೇರಿಂಗ್ ವಿಧಾನವನ್ನು ಜಾರಿಗೆ ತರುವ ಬಗ್ಗೆ ನಿರೀಕ್ಷೆ ಇದೆ. ಇದರಿಂದ 2023ರ ಎರಡನೇ ತ್ರೈಮಾಸಿಕದಲ್ಲಿ ಜಾಹೀರಾತುಗಳು ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ನೆಟ್​ಫ್ಲಿಕ್ಸ್ ಹೇಳಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *