New Movie Release: ಓ, ದಿಲ್​ ಪಸಂದ್​, ಯಶೋದಾ, ರಾಣಾ.. ಈ ವಾರ ರಿಲೀಸ್ ಆಗ್ತಿವೆ ಸಿಕ್ಕಾಪಟ್ಟೆ ಸಿನಿಮಾ – Dil Pasand Raana Yashoda Black Panther and other movies releasing on 11th November


New Kannada Movie: ಕಳೆದ ವಾರ ರಿಲೀಸ್​ ಆಗಿದ್ದ ಕೆಲವು ಸಿನಿಮಾಗಳು ಉತ್ತಮ ವಿಮರ್ಶೆ ಪಡೆದುಕೊಂಡಿವೆ. ಅವುಗಳ ನಡುವೆ ಈಗ ಹೊಸ ಸಿನಿಮಾಗಳು ಪೈಪೋಟಿ ನೀಡಲು ಬರುತ್ತಿವೆ. ಯಾರಿಗೆ ಎಷ್ಟು ಕಲೆಕ್ಷನ್​ ಆಗಲಿದೆ ಎಂಬುದನ್ನು ಕಾದು ನೋಡಬೇಕು.

New Movie Release: ಓ, ದಿಲ್​ ಪಸಂದ್​, ಯಶೋದಾ, ರಾಣಾ.. ಈ ವಾರ ರಿಲೀಸ್ ಆಗ್ತಿವೆ ಸಿಕ್ಕಾಪಟ್ಟೆ ಸಿನಿಮಾ

ಈ ವಾರ ತೆರೆಗೆ..

ಶುಕ್ರವಾರ ಬಂದರೆ ಸಿನಿಪ್ರೇಮಿಗಳಿಗೆ ಹಬ್ಬ. ಚಿತ್ರಮಂದಿರದಲ್ಲಿ ಹೊಸ ಸಿನಿಮಾ ಕಣ್ತುಂಬಿಕೊಳ್ಳಬೇಕು ಅಂದುಕೊಂಡವರಿಗೆ ಖುಷಿಯೋ ಖುಷಿ. ಆದರೆ ಒಂದೇ ದಿನ ಹಲವು ಸಿನಿಮಾಗಳು ಒಟ್ಟೊಟ್ಟಿಗೆ ಚಿತ್ರಮಂದಿರಕ್ಕೆ ಕಾಲಿಟ್ಟರೆ ಯಾವುದನ್ನು ನೋಡುವುದು? ಯಾವುದನ್ನು ಬಿಡುವುದು ಎಂಬ ಪ್ರಶ್ನೆ ಕಾಡುತ್ತದೆ. ಥಿಯೇಟರ್​ಗಳಲ್ಲಿ ‘ಕಾಂತಾರ’ ಚಿತ್ರದ ಹವಾ ಇನ್ನೂ ಜೋರಾಗಿದೆ. ಅದರ ಜೊತೆ ಫೈಟ್​ ಮಾಡಲು ಹೊಸ ಹೊಸ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಈ ವಾರ (ನವೆಂಬರ್​ 11) ಹಲವು ಚಿತ್ರಗಳು ತೆರೆಕಾಣುತ್ತಿವೆ. ಕನ್ನಡದಲ್ಲಿ ‘ಓ’, ‘ರಾಣಾ’, ‘ದಿಲ್​ ಪಸಂದ್​’, ‘ಹುಬ್ಬಳ್ಳಿ ಡಾಬಾ’, ‘ಯೆಲ್ಲೋ ಗ್ಯಾಂಗ್ಸ್​’ ಸಿನಿಮಾಗಳು ಬಿಡುಗಡೆ ಆಗುತ್ತಿವೆ.

‘ದಿಲ್​ ಪಸಂದ್​’ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ, ಮೇಘಾ ಶೆಟ್ಟಿ, ನಿಶ್ವಿಕಾ ನಾಯ್ಡು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಶಿವ ತೇಜಸ್​ ನಿರ್ದೇಶನ ಮಾಡಿದ್ದು, ಸುಮಂತ್​ ಕ್ರಾಂತಿ ಬಂಡವಾಳ ಹೂಡಿದ್ದಾರೆ. ಟ್ರೇಲರ್ ಮೂಲಕ ಈ ಚಿತ್ರ ಗಮನ ಸೆಳೆದಿದೆ. ಇನ್ನು, ‘ಓ’ ಸಿನಿಮಾದಲ್ಲಿ ಸಸ್ಪೆನ್ಸ್​ ಥ್ರಿಲ್ಲರ್​ ಅಂಶಗಳಿವೆ. ಇದರಲ್ಲಿ ಮಿಲನಾ ನಾಗರಾಜ್​ ಮತ್ತು ಅಮೃತಾ ಅಯ್ಯಂಗಾರ್​ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಶ್ರೇಯಸ್​ ಮಂಜು, ರೀಷ್ಮಾ ನಾಣಯ್ಯ ನಟಿಸಿರುವ ‘ರಾಣಾ’ ಚಿತ್ರ ಕೂಡ ನ.11ರಂದು ತೆರೆಗೆ ಬರುತ್ತಿದೆ. ಈ ಎಲ್ಲ ಸಿನಿಮಾಗಳ ಜೊತೆ ‘ಯೆಲ್ಲೋ ಗ್ಯಾಂಗ್ಸ್​’ ಕೂಡ ಪೈಪೋಟಿಗೆ ಇಳಿಯುತ್ತಿದೆ.

ಹಿಂದಿಯಲ್ಲಿ ಅಮಿತಾಭ್​ ಬಚ್ಚನ್​ ನಟನೆಯ ‘ಊಂಚಾಯಿ’ ಸಿನಿಮಾ ಬಿಡುಗಡೆ ಆಗುತ್ತಿದೆ. ‘ಥಾಯ್​ ಮಸಾಜ್​’, ‘ರಾಕೆಟ್​ ಗ್ಯಾಂಗ್​’ ಚಿತ್ರಗಳು ಕೂಡ ರೇಸ್​ನಲ್ಲಿವೆ. ಇಂಗ್ಲಿಷ್​ನಲ್ಲಿ ‘ಬ್ಲ್ಯಾಕ್​ ಪ್ಯಾಂಥರ್​’ ಚಿತ್ರ ಧೂಳೆಬ್ಬಿಸಲು ಬರುತ್ತಿದೆ. ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗೂ ಡಬ್​ ಆಗಿ ಈ ಚಿತ್ರ ಬಿಡುಗಡೆ ಆಗುತ್ತಿದೆ.

ಸಮಂತಾ ರುತ್​ ಪ್ರಭು ನಟನೆಯ ‘ಯಶೋದಾ’ ಚಿತ್ರ ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಅವರು ಬಾಡಿಗೆ ತಾಯಿ ಪಾತ್ರ ಮಾಡಿದ್ದಾರೆ. ಅಲ್ಲದೇ, ಭರ್ಜರಿ ಸಾಹಸ ದೃಶ್ಯಗಳಲ್ಲೂ ಅಭಿನಯಿಸಿದ್ದಾರೆ. ಹಾಲಿವುಡ್​ ಸಾಹಸ ನಿರ್ದೇಶಕರು ಸಮಂತಾಗೆ ತರಬೇತಿ ನೀಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಚಿತ್ರ ರಿಲೀಸ್​ ಆಗುತ್ತಿದೆ.

ಕಳೆದ ವಾರ ರಿಲೀಸ್​ ಆಗಿದ್ದ ‘ಬನಾರಸ್​’, ‘ಕಂಬ್ಳಿಹುಳ’ ಮುಂತಾದ ಸಿನಿಮಾಗಳು ಉತ್ತಮ ವಿಮರ್ಶೆ ಪಡೆದುಕೊಂಡಿವೆ. ಅವುಗಳ ನಡುವೆ ಈಗ ಹೊಸ ಸಿನಿಮಾಗಳು ಪೈಪೋಟಿ ನೀಡಲು ಬರುತ್ತಿವೆ. ಯಾರಿಗೆ ಎಷ್ಟು ಕಲೆಕ್ಷನ್​ ಆಗಲಿದೆ ಎಂಬುದನ್ನು ಕಾದು ನೋಡಬೇಕು.

TV9 Kannada


Leave a Reply

Your email address will not be published.