Mosque: ತೆಲಂಗಾಣ ರಾಜ್ಯ ಸರ್ಕಾರ ನಿರ್ಮಿಸಿರುವ ನೂತನ ಸಚಿವಾಲಯದ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ಈ ಸಮಾರಂಭಕ್ಕೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲಾಗಿದೆ. ಸೆಕ್ರೆಟರಿಯೇಟ್ ಒಳಗೆ ದೇವಸ್ಥಾನ ಮತ್ತು ಮಸೀದಿ ಕೂಡ ನಿರ್ಮಾಣವಾಗುತ್ತಿದೆ.

ತೆಲಂಗಾಣ ಹೊಸ ಸಚಿವಾಲಯ ಉದ್ಘಾಟನೆಗೆ ಮುಹೂರ್ತ ನಿಗದಿ, ಸೆಕ್ರೆಟರಿಯೇಟ್ ಒಳಗೆ ಮಸೀದಿ ಕೂಡ ನಿರ್ಮಾಣ!
ತೆಲಂಗಾಣ ನೂತನ ಸಚಿವಾಲಯ ಸೆಕ್ರೆಟರಿಯೇಟ್ (Telangana Secretariat) ಉದ್ಘಾಟನೆಗೆ ಸಮಯ ನಿಗದಿಯಾಗಿದೆ. ಈ ಸಮಾರಂಭಕ್ಕೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲಾಗಿದೆ. ಫೆಬ್ರವರಿ 17ರಂದು ಬೆಳಗ್ಗೆ 11.30ಕ್ಕೆ ಸೆಕ್ರೆಟರಿಯೇಟ್ ಉದ್ಘಾಟನೆಯ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ಅಂದು ವಾಸ್ತುಪೂಜೆ, ಚಂಡಿಯಾಗ, ಸುದರ್ಶನ ಯಾಗ ನಡೆಯಲಿದೆ. ಉದ್ಘಾಟನಾ ಸಮಾರಂಭಕ್ಕೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಜಾರ್ಖಂಡ್ ಸಿಎಂ ಸೋರೆನ್ ಭಾಗವಹಿಸುತ್ತಿದ್ದಾರೆ. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಕೂಡ ವಿಶೇಷ ಅತಿಥಿಗಳಾಗಿ ಆಗಮಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ( Dr BR Ambedkar) ಹೆಸರಿನಲ್ಲಿರುವ ತೆಲಂಗಾಣ ಸೆಕ್ರೆಟರಿಯೇಟ್ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (K Chandrashekar Rao) ಅವರು ಉದ್ಘಾಟಿಸಲಿದ್ದಾರೆ. ಫೆಬ್ರವರಿ 17ರ ಶುಕ್ರವಾರ ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರವರೆಗೆ ವೈದಿಕರು ಸೂಚಿಸಿದ ಸಮಯದಂತೆ ನಡೆಯಲಿದೆ ಎಂದು ರಾಜ್ಯ ಸರ್ಕಾರಿ ಮೂಲಗಳು ತಿಳಿಸಿವೆ.
ಉದ್ಘಾಟನೆಗೂ ಮುನ್ನ ಬೆಳಗ್ಗೆ ವೇದ ವಿದ್ವಾಂಸರ ನೇತೃತ್ವದಲ್ಲಿ ವಾಸ್ತು ಪೂಜೆ, ಚಂಡಿ ಯಾಗ, ಸುದರ್ಶನ ಯಾಗ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಸ್ಟಾಲಿನ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿನಿ ಯಾದವ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪ್ರತಿನಿಧಿಯಾಗಿ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್, ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ತಾಜಾ ಸುದ್ದಿ
ಸೆಕ್ರೆಟರಿಯೇಟ್ ಒಳಗೆ ದೇವಸ್ಥಾನ ಮತ್ತು ಮಸೀದಿ ಕೂಡ ನಿರ್ಮಾಣ
ಸೆಕ್ರೆಟರಿಯೇಟ್ ಉದ್ಘಾಟನೆಯ ನಂತರ ಮಧ್ಯಾಹ್ನ ಸಿಕಂದರಾಬಾದ್ನ ಪರೇಡ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಈ ಸಾರ್ವಜನಿಕ ಸಭೆಯಲ್ಲಿ ಸೆಕ್ರೆಟರಿಯೇಟ್ ಉದ್ಘಾಟನೆಯಲ್ಲಿ ಭಾಗವಹಿಸಿದ ಮೇಲೆ ತಿಳಿಸಿರುವ ಎಲ್ಲಾ ಮುಖ್ಯ ಅತಿಥಿಗಳು ಭಾಗವಹಿಸಲಿದ್ದಾರೆ.
Also read:
617 ಕೋಟಿ ವೆಚ್ಚದಲ್ಲಿ ಹಸಿರು ಕಟ್ಟಡ ಪರಿಕಲ್ಪನೆಯೊಂದಿಗೆ ಸೆಕ್ರೆಟರಿಯೇಟ್ ಕಟ್ಟಡವನ್ನು ನಿರ್ಮಿಸಲಾಗಿದೆ. ನೈಸರ್ಗಿಕ ಗಾಳಿ ಮತ್ತು ಬೆಳಕು ಕಟ್ಟಡದಲ್ಲಿ ಧಾರಾಳವಾಗಿರುವಂತೆ ಯೋಜಿಸಿ, ನಿರ್ಮಿಸಲಾಗಿದೆ. ನೂತನ ಸಚಿವಾಲಯಕ್ಕೆ ಈಗಾಗಲೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಸೆಕ್ರೆಟರಿಯೇಟ್ ಒಳಗೆ ದೇವಸ್ಥಾನ ಮತ್ತು ಮಸೀದಿ ಕೂಡ ನಿರ್ಮಾಣವಾಗುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ