New Year 2023: ಡಿ.31ರ ರಾತ್ರಿಯಿಂದಲೇ ಬೆಂಗಳೂರಿನ 30 ಫ್ಲೈ ಓವರ್ ಬಂದ್, 1 ಲಕ್ಷಕ್ಕೂ ಅಧಿಕ ಸಿಸಿಟಿವಿಗಳ ಅಳವಡಿಕೆ – Bengaluru traffic restrictions bengaluru 30 flyovers closed from december 31st night over new year


ಡಿಸೆಂಬರ್ 31ರ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ಎರ್​ಪೋರ್ಟ್ ಫ್ಲೈ ಓವರ್ ಬಿಟ್ಟು ಇನ್ನುಳಿದ​ 30 ಫ್ಲೈ ಓವರ್ ಬಂದ್​ ಮಾಡಲಾಗುತ್ತಿದೆ.

New Year 2023: ಡಿ.31ರ ರಾತ್ರಿಯಿಂದಲೇ ಬೆಂಗಳೂರಿನ 30 ಫ್ಲೈ ಓವರ್ ಬಂದ್, 1 ಲಕ್ಷಕ್ಕೂ ಅಧಿಕ ಸಿಸಿಟಿವಿಗಳ ಅಳವಡಿಕೆ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಹೊಸವರ್ಷದ ಸಂಭ್ರಮಕ್ಕೆ(New Year 2023) ಕೌಂಟ್‌ಡೌನ್‌ ಶುರುವಾಗಿದೆ. 2023ರನ್ನ ಬರ ಮಾಡಿಕೊಳ್ಳೋಕೆ ಇಡೀ ಬೆಂಗಳೂರು ಸಜ್ಜಾಗಿದೆ. ನಾಳೆ ಸಂಜೆಯಾಗ್ತಿದ್ದಂತೆ ಇಡೀ ಸಿಲಿಕಾನ್‌ ಸಿಟಿ ಝಗಮಗಿಸಲಿದ್ದು, ಪಾರ್ಟಿಗಮ್ಮತ್ತು ರಂಗೇರಲಿದೆ. ಹೀಗಾಗಿ ಪೊಲೀಸರು(Bengaluru Police) ಎಲ್ಲ ರೀತಿಯಲ್ಲೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಇಂದು ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ನಗರದ 30 ಫ್ಲೈ ಓವರ್(Flyover) ಮೇಲೆ ದ್ವಿಚಕ್ರ ಸೇರಿ ಎಲ್ಲ​ ವಾಹನ ಸಂಚಾರ ನಿಷೇಧಿಸಲಾಗಿದೆ.

ಡಿಸೆಂಬರ್ 31ರ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ಎರ್​ಪೋರ್ಟ್ ಫ್ಲೈ ಓವರ್ ಬಿಟ್ಟು ಇನ್ನುಳಿದ​ 30 ಫ್ಲೈ ಓವರ್ ಬಂದ್​ ಮಾಡಲಾಗುತ್ತಿದೆ. 30 ಫ್ಲೈ ಓವರ್ ಮೇಲೆ ದ್ವಿಚಕ್ರ ಸೇರಿ ಎಲ್ಲ​ ವಾಹನ ಸಂಚಾರ ನಿಷೇಧಿಸಲಾಗುತ್ತಿದೆ. ಮಾರ್ಕೆಟ್ ಫ್ಲೈ ಓವರ್, ರಿಚ್ಮಂಡ್ ಸರ್ಕಲ್ ಫ್ಲೈ ಓವರ್, ಬೆನಗನಹಳ್ಳಿ ಫ್ಲೈ ಓವರ್, ಸಿಲ್ಕ್ ಬೊರ್ಡ್ ಫ್ಲೈ ಓವರ್, ಜಯದೇವ ಫ್ಲೈ ಓವರ್, ಆನಂದರಾವ್ ಸರ್ಕಲ್ ಫ್ಲೈ ಓವರ್, ತುಮಕೂರು ರೋಡ್ ಫ್ಲೈ ಓವರ್, ಡೈರಿ ಸರ್ಕಲ್ ಫ್ಲೈ ಓವರ್, ನಾಯಂಡಹಳ್ಳಿ ಫ್ಲೈ ಓವರ್, ನಾಗವಾರ ರಿಂಗ್ ರಸ್ತೆ ಫ್ಲೈ ಓವರ್ ಸೇರಿದಂತೆ 30 ಫ್ಲೈ ಓವರ್ ಮೇಲೆ​ ವಾಹನ ಸಂಚಾರ ನಿಷೇಧಿಸಲಾಗುತ್ತಿದೆ.

TV9 Kannada


Leave a Reply

Your email address will not be published. Required fields are marked *