New Zealand vs Afghanistan: ಟೀಮ್ ಇಂಡಿಯಾ ಭವಿಷ್ಯ ಇಂದು ನಿರ್ಧಾರ: ರೋಚಕತೆ ಸೃಷ್ಟಿಸಿದ ನ್ಯೂಜಿಲೆಂಡ್-ಅಫ್ಘಾನ್ ಕದನ | NZ vs AFG India will watch with bated breath as New Zealand face Afghanistan in a T20 World Cup match


New Zealand vs Afghanistan: ಟೀಮ್ ಇಂಡಿಯಾ ಭವಿಷ್ಯ ಇಂದು ನಿರ್ಧಾರ: ರೋಚಕತೆ ಸೃಷ್ಟಿಸಿದ ನ್ಯೂಜಿಲೆಂಡ್-ಅಫ್ಘಾನ್ ಕದನ

New Zealand vs Afghanistan vs India

ಆರನೇ ಆವೃತ್ತಿಯ ಟಿ20 ವಿಶ್ವಕಪ್ (T20 World Cup) ಮಹಾಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡದ (Indian Cricket Team) ಭವಿಷ್ಯ ಇಂದು ನಿರ್ಧಾರವಾಗಲಿದೆ. ಅಬುಧಾಬಿಯ ಶೇಖ್ ಝಯೇದ್ ಕ್ರೀಡಾಂಗಣದಲ್ಲಿಂದು ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ (New Zealand vs Afghanistan) ತಂಡ ಮುಖಾಮುಖಿ ಆಗುತ್ತಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದರೆ ಭಾರತ ಸೆಮಿ ಫೈನಲ್​ಗೆ ಪ್ರವೇಶ ಪಡೆಯುವ ಅವಕಾಶ ಹೊಂದಿದೆ. ಎಲ್ಲದರು ನ್ಯೂಜಿಲೆಂಡ್ ಗೆದ್ದರೆ ವಿರಾಟ್ ವಿರಾಟ್ ಕೊಹ್ಲಿ (Virat Kohli) ಪಡೆ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಮಧ್ಯಾಹ್ನ ಆರಂಭವಾಗಲಿರುವ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದ್ದು, ಹೈವೋಲ್ಟೇಜ್ ಪಂದ್ಯವಾಗುವ ಲಕ್ಷಣಗಳಿವೆ. ಭಾರತೀಯ ಅಭಿಮಾನಿಗಳಂತು ಅಫ್ಘಾನ್ ಗೆಲುವಿಗೆ ಪ್ರಾರ್ಥಿಸುತ್ತಿದ್ದಾರೆ.

ಹೌದು, ಅಫ್ಘಾನಿಸ್ತಾನ ಗೆಲುವು ಭಾರತಕ್ಕೆ ಬಹುಮುಖ್ಯವಾಗಿದೆ. ಆಗ ಮೂರೂ ತಂಡಗಳ ಅಂಕ ಸಮನಾಗಲಿದೆ (ತಲಾ 6). ರನ್‌ರೇಟ್‌ನಲ್ಲಿ ಮುಂದಿರುವ ತಂಡಕ್ಕೆ ನಾಕೌಟ್‌ ಅದೃಷ್ಟ ಒಲಿಯಲಿದೆ. ಇಲ್ಲಿ ಕೊಹ್ಲಿ ಪಡೆಗೆ ಅವಕಾಶ ಹೆಚ್ಚು ಎಂಬುದರಲ್ಲಿ ಅನುಮಾನವಿಲ್ಲ. ಏಕೆಂದರೆ, ಸೋಮವಾರದ ಕಟ್ಟಕಡೆಯ ಲೀಗ್‌ ಪಂದ್ಯದಲ್ಲಿ ಭಾರತ ದುರ್ಬಲ ನಮೀಬಿಯಾವನ್ನು ಎದುರಿಸಲಿರುವುದರಿಂದ ಲೆಕ್ಕಾಚಾರದ ಆಟ ಸಾಧ್ಯವಾಗಲಿದೆ. ಸ್ಕಾಟ್ಲೆಂಡ್ ವಿರುದ್ಧ 86 ರನ್ ಗುರಿಯನ್ನು 6.3 ಓವರ್‌ಗಳಲ್ಲೇ ಕ್ರಮಿಸಿರುವ ಭಾರತ (+1.619), ಈಗಾಗಲೇ ನ್ಯೂಜಿಲೆಂಡ್ (+1.277) ಹಾಗೂ ಅಫ್ಗಾನಿಸ್ತಾನಗಿಂತಲೂ (+1.481) ಉತ್ತಮ ರನ್‌ರೇಟ್ ಕಾಯ್ದುಕೊಂಡಿದೆ ಎಂಬುದು ಇಲ್ಲಿ ಗಮನಾರ್ಹವೆನಿಸುತ್ತದೆ.

ಎಲ್ಲಾದರು ಕಿವೀಸ್‌ ಗೆದ್ದರೆ ಭಾರತ ಮತ್ತು ಅಫ್ಘಾನ್‌ ತಂಡಗಳೆರಡೂ ಕೂಟದಿಂದ ನಿರ್ಗಮಿಸ ಲಿವೆ. ಆಗ ಕಿವೀಸ್‌ ಗ್ರೂಪ್‌-2ರ ದ್ವಿತೀಯ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ. ಭಾರತ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ನಮೀಬಿಯಾವನ್ನು ಎಷ್ಟೇ ದೊಡ್ಡ ಅಂತರದಿಂದ ಮಣಿಸಿದರೂ ಪ್ರಯೋಜನವಾಗದು.

ಬಲಾಬಲದ ಲೆಕ್ಕಾಚಾರದಲ್ಲಿ ನ್ಯೂಜಿಲ್ಯಾಂಡ್‌ ಫೇವರಿಟ್‌ ತಂಡ; ಅಫ್ಘಾನಿಸ್ಥಾನ ಕರಿಗುದುರೆ. ಇತ್ತಂಡ ಗಳು ಟಿ20 ವಿಶ್ವಕಪ್‌ನಲ್ಲಿ ಈವರೆಗೆ ಎದುರಾಗಿಲ್ಲ. ಆದರೆ ಏಕದಿನ ವಿಶ್ವಕಪ್‌ನಲ್ಲಿ 2 ಸಲ ಮುಖಾಮುಖಿಯಾಗಿವೆ. ಎರಡನ್ನೂ ನ್ಯೂಜಿಲ್ಯಾಂಡ್‌ ಗೆದ್ದಿದೆ. ಮಾಜಿ ನಾಯಕ ಅಸ್ಗರ್ ಅಫ್ಘಾನ್‌ ಕೂಟದ ನಡುವೆಯೇ ನಿವೃತ್ತಿ ಘೋಷಿಸಿದ್ದು, ಸ್ಪಿನ್ನರ್‌ ಮುಜೀಬ್‌ ಉರ್‌ ರೆಹಮಾನ್‌ ಇಂಜುರಿಗೆ ತುತ್ತಾಗಿದ್ದು, ಕಳೆದ ಎರಡು ಪಂದ್ಯಗಳಲ್ಲಿ ಆಡಿಲ್ಲ. ಇಂದಿನ ಪಂದ್ಯದಲ್ಲಿ ಇವರ ಲಭ್ಯತೆ ಬಗ್ಗೆ ಇನ್ನೂ ಅಂತಿಮವಾಗಿಲ್ಲ.

ಅಫ್ಘಾನ್ ತಂಡವು ರಶೀದ್ ಖಾನ್, ಮೊಹಮ್ಮದ್ ನಬಿ ಹಾಗೂ ಮುಜೀಬುರ್ ರೆಹಮಾನ್ ಅವರನ್ನು ಅವಲಂಭಿಸಿದ್ದು, ಇವರ ಸ್ಪಿನ್ ಮೋಡಿ ನಡೆದರೆ ನ್ಯೂಜಿಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಬಹುದು. ಅಷ್ಟೇ ಅಲ್ಲದೆ ಬ್ಯಾಟಿಂಗ್​ನಲ್ಲಿ ಝಝೈ, ನಜೀಬ್, ಶೆಹಝಾದ್ ಹಾಗೂ ನಬಿ ಎಂತಹ ಬೌಲರುಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ಆಟಗಾರರು. ಹೀಗಾಗಿ ಅಫ್ಘಾನಿಸ್ತಾನ್ ವಿರುದ್ದ ನ್ಯೂಜಿಲೆಂಡ್​ಗೆ ಗೆಲುವು ಸುಲಭವಲ್ಲ ಎಂದೇ ಹೇಳಬಹುದು.

ಅನುಭವಿ ಬೌಲರ್‌ಗಳಾದ ಟ್ರೆಂಟ್‌ ಬೌಲ್ಟ್‌, ಟಿಮ್‌ ಸೌಥಿ, ಆ್ಯಡಂ ಮಿಲ್ನೆ, ಇಶ್‌ ಸೋಧಿ, ಮಿಚೆಲ್‌ ಸ್ಯಾಂಟ್ನರ್‌ ನ್ಯೂಜಿಲೆಂಡ್ ತಂಡದ ದೊಡ್ಡ ಆಸ್ತಿಯಾಗಿದ್ದಾರೆ. ಬ್ಯಾಟಿಂಗ್​ನಲ್ಲಿ ಮಾರ್ಟಿನ್ ಗುಪ್ಟಿಲ್ ಕ್ರೀಸ್ ಕಚ್ಚಿ ನಿಂತರೆ ತಡೆಯುವುದು ಕಷ್ಟ. ನಾಯಕ ಕೇನ್ ವಿಲಿಯಮ್ಸನ್ ಮೇಲೂ ಹೆಚ್ಚು ನಂಬಿಕೆ ಇಡಲಾಗಿದೆ.

ಇನ್ನು ಇಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಸ್ಕಾಟ್ಲೆಂಡ್ ತಂಡ ಎದುರಾಗಲಿದೆ. 2009ರಲ್ಲಿ ಚಾಂಪಿಯನ್ ಪಟ್ಟ ಧರಿಸಿದ್ದ ಪಾಕಿಸ್ತಾನ ತಂಡಕ್ಕೆ ಇದು ಸೂಪರ್ 12 ಹಂತದಲ್ಲಿ ಕೊನೆಯ ಪಂದ್ಯವಾಗಿದೆ. ಆಡಿದ ನಾಲ್ಕೂ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿರುವ ಬಾಬರ್ ಅಜಾಮ್ ನಾಯಕತ್ವದ ಬಳಗ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಸೆಮಿಫೈನಲ್‌ನಲ್ಲೂ ಸ್ಥಾನ ಖಚಿತಪಡಿಸಿಕೊಂಡಿದೆ.

Kagiso Rabada: ರಬಾಡ ಹ್ಯಾಟ್ರಿಕ್ ವಿಕೆಟ್ ಸಾಧನೆ: ಗೆದ್ದರೂ ಆಫ್ರಿಕಾ ಟೂರ್ನಿಯಿಂದ ಔಟ್: ಸೆಮೀಸ್​ಗೆ ಇಂಗ್ಲೆಂಡ್

(NZ vs AFG India will watch with bated breath as New Zealand face Afghanistan in a T20 World Cup match)

TV9 Kannada


Leave a Reply

Your email address will not be published. Required fields are marked *