ದೇಶದ ಮೇಲೆ ಮೊಟ್ಟ ಮೊದಲ ಡ್ರೋಣ್​ ಅಟ್ಯಾಕ್; ಭವಿಷ್ಯದ ಯುದ್ಧಕ್ಕೆ ಟರ್ನಿಂಗ್ ಪಾಯಿಂಟ್

ದೇಶದ ಮೇಲೆ ಮೊಟ್ಟ ಮೊದಲ ಡ್ರೋಣ್​ ಅಟ್ಯಾಕ್; ಭವಿಷ್ಯದ ಯುದ್ಧಕ್ಕೆ ಟರ್ನಿಂಗ್ ಪಾಯಿಂಟ್

ದೇಶದ ಮೇಲೆ ಇದೇ ಮೊದಲ ಬಾರಿಗೆ ಡ್ರೋನ್​​ನಿಂದ ಅಟ್ಯಾಕ್ ನಡೆಸಲಾಗಿದೆ.. ಭವಿಷ್ಯದ ಯುದ್ಧದ ವೈಖರಿಯನ್ನೇ ಬದಲಿಸಬಲ್ಲಂಥ ಈ ದಾಳಿಯ ಪರಿಣಾಮ ಖಂಡಿತ ಊಹೆಗೂ ನಿಲುಕದ್ದು.. ಹಾಗಿದ್ದರೆ ಈ ದಾಳಿಯ ನಡೆದಿದ್ದು ಎಲ್ಲಿ? ಮತ್ತೆ ಹೇಗೆ? ಇಲ್ಲಿದ ಇಂಟರೆಸ್ಟಿಂಗ್ ಸ್ಟೋರಿ..!

ಸಮಯ ; ರಾತ್ರಿ 1.37 ನಿಮಿಷ
ಸ್ಥಳ : ಏರ್​ಫೋರ್ಸ್​ ಸ್ಟೇಷನ್, ಜಮ್ಮು

27 ಜೂನ್ ತಡ ರಾತ್ರಿ 1.37 ನಿಮಿಷಕ್ಕೆ ಜಮ್ಮುವಿನ ಏರ್​ಫೋರ್ಸ್​ ಸ್ಟೇಷನ್​​ನಲ್ಲಿ ಭಯಂಕರ ಸ್ಫೋಟದ ಶಬ್ದ ಕೇಳಿ ಬರುತ್ತೆ.. ಆ ಶಬ್ದ ಬರೋಬ್ಬರಿ 2 ಕಿಲೋ ಮೀಟರ್​​​ ದೂರದವರೆಗೂ ಕೇಳಿ ಬರುತ್ತೆ.. ಈ ಸ್ಫೋಟಕ ಶಬ್ದ ಕಿವಿಗೆ ಬೀಳುತ್ತಲೇ ಪಹರೆಯಲ್ಲಿದ್ದ ಏರ್​ಫೋರ್ಸ್​ ಸಿಬ್ಬಂದಿ ಶಬ್ದ ಬಿದ್ದ ಸ್ಥಳಕ್ಕೆ ದೌಡಾಯಿಸಲು ಶುರು ಮಾಡ್ತಾರೆ.. ಇದು ಏನು ಸ್ಫೋಟ? ಮತ್ತು ಯಾಕಾಗಿ ಸಂಭವಿಸಿದ ಸ್ಫೋಟ? ಅದೂ ಕೂಡ ಅತ್ಯಂತ ಭದ್ರತೆ ಇರೋ ಏರ್​ಫೋರ್ಸ್​ ಸ್ಟೇಷನಲ್ಲಿ? ಅಂತ ಯೋಚಿಸುತ್ತಲೇ ದೌಡಾಯಿಸುತ್ತಾರೆ.. ಹೀಗೆ ದೌಡಾಯಿಸುತ್ತಿರೋವಾಗಲೇ..

ಸಮಯ ; ರಾತ್ರಿ 1.42 ನಿಮಿಷ
ಸ್ಥಳ : ಏರ್​ಫೋರ್ಸ್​ ಸ್ಟೇಷನ್, ಜಮ್ಮು

ಸರಿಯಾಗಿ 5 ನಿಮಿಷದ ಅವಧಿಯಲ್ಲೇ ಮತ್ತೊಂದು ಅಂಥದ್ದೇ ಶಬ್ದ ಕೇಳಿ ಬರುತ್ತೆ.. ಒಂದು ಬಾರಿ ಒಂದು ಅಂತಸ್ತಿನ ಕಟ್ಟಡದ ಬಳಿಯಿಂದ ಶಬ್ದ ಕೇಳಿ ಬಂದಿದ್ದರೆ.. ಎರಡನೇ ಬಾರಿ ಅದು ಖಾಲಿ ಜಾಗದಲ್ಲಿ ಮತ್ತೊಂದು ಭಯಂಕರ ಶಬ್ದ ಕೇಳಿ ಬಂದಿರುತ್ತೆ.. ಈ ಶಬ್ದ ಕೇಳಿ ಬರುತ್ತಲೇ.. ಏರ್​ಫೋರ್ಸ್​​​ ಸ್ಟೇಷನ್​ನಲ್ಲಿ ಹೈ ಅಲರ್ಟ್​ ಘೋಷಣೆಯಾಗುತ್ತೆ.. ಜೊತೆಗೆ ಇದು ಸಾಮಾನ್ಯ ಸ್ಫೋಟವಲ್ಲ ಬದಲಿಗೆ ಬಾಂಬ್​​ ಸ್ಫೋಟ ಅನ್ನೋದು ರಾತ್ರಿಯೇ ಬಹುತೇಕ ಖಚಿತವಾಗುತ್ತೆ.. ಈ ದಾಳಿಯಿಂದಾಗಿ ಇಬ್ಬರು ಸಿಬ್ಬಂದಿಗೆ ಗಾಯವಾಗುತ್ತೆ.. ಮತ್ತು ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗುತ್ತೆ.. ಹಾಗಿದ್ರೆ ಏನಿದು ಸ್ಫೋಟ? ಯಾರು ಮಾಡಿದ್ದು ಈ ಸ್ಫೋಟ..? ಪ್ರಶ್ನೆಗಳು ತಂದ ಉತ್ತರ ಭದ್ರತಾ ಪಡೆಗಳ ಮೈ ಝುಂ ಅನ್ನೋವಂಥ ಅನುವಭವ ತೆರೆದಿಟ್ಟಿರುತ್ತೆ..!

ಇವತ್ತು ಭವಿಷ್ಯದ ಆತಂಕ ವಾಸ್ತವವಾಗಿ ಬದಲಾಗಿದೆ.. ದೇಶದ ಮೇಲೆ ಇದೇ ಮೊದಲ ಬಾರಿಗೆ ಡ್ರೋನ್​​ನಿಂದ ಬಾಂಬ್ ದಾಳಿ ನಡೆದುಹೋಗಿದೆ.. ಭವಿಷ್ಯದಲ್ಲಿ ಇದು ಹುಟ್ಟಿಸಬಹುದಾದ ಭಯಾನಕ ವಿಧ್ವಂಸದ ಝಲಕ್​ ಇಂದು ಕಂಡು ಬಂದಿದೆ.. ಯಾರೋ ಎಲ್ಲೋ ಕುಳಿತು.. ಸ್ಪೋಟಕಗಳನ್ನು ತುಂಬಿಸಿ.. ರಿಮೋಟ್ ಕಂಟ್ರೋಲ್​ ಮೂಲಕ ದಾಳಿ ನಡೆಸಿದ್ದಾರೆ.. ಸರಣಿ ಬಾಂಬ್ ಸ್ಫೋಟ, ಸುಸೈಡ್ ಬಾಂಬಿಂಗ್.. ಲೋನ್​ ಉಲ್ಫ್ ದಾಳಿ ಹೀಗೆ ವಿಭಿನ್ನ ದಾಳಿ ಮೂಲಕ ಬೆಚ್ಚಿ ಬೀಳಿಸ್ತಿದ್ದ ವೈರಿಗಳು ಈಗ ಹಾರಿ ಬರುವ ಸುಸೈಡ್ ಡ್ರೋಣ್ ಬಳಕೆಯನ್ನ ಶುರು ಮಾಡಿದ್ದಾರೆ.. ಎಲ್ಲಿ? ಯಾವಾಗ? ಮತ್ತು ಹೇಗೆ? ಇಂಥ ಸಾಲು ಸಾಲು ಪ್ರಶ್ನೆಗಳನ್ನ ಹುಟ್ಟು ಹಾಕುತ್ತಲೇ ಇರೋ ಇಂಥ ದಾಳಿಗಳಿಗೆ ಇದು ಮುನ್ನುಡಿಯನ್ನ ಬರೆಯಿತಾ?

Yesss.. ಜಮ್ಮು ಕಾಶ್ಮೀರದಲ್ಲಿ ನಡೆದಿರೋ ಈ ದಾಳಿ ಸಾಮಾನ್ಯ ದಾಳಿಯಲ್ಲ..ಬದಲಿಗೆ ಪಕ್ಕಾ ಕ್ಯಾಲ್ಕ್ಯುಲೇಟೆಡ್​ ಡ್ರೋಣ್ ದಾಳಿ..! ರಾತ್ರಿ ಭಾರೀ ಸ್ಫೋಟದ ಶಬ್ದ ಕೇಳಿ ಬಳಿಕ ಒಂದೆಡೆ ಏರ್​ಫೋರ್ಸ್​ ಹೈ ಅಲರ್ಟ್​ ಆಗಿದ್ರೆ.. ಇನ್ನೊಂದು ಕಡೆ ಜಮ್ಮು ಪೊಲೀಸರು, ಭದ್ರತಾ ಪಡೆಗಳೂ ಸ್ಥಳಕ್ಕೆ ಧಾವಿಸಿದ್ವು.. ಹಾಗೆ ಧಾವಿಸಿದ್ದ ಭದ್ರತಾ ಪಡೆಗಳಿಗೆ ಅಚ್ಚರಿಯ ವೆಲ್​ಕಮ್ ಕಾದಿದ್ದು ಸುಳ್ಳಲ್ಲ.. ಯಾಕಂದ್ರೆ ಅವರ ಕಣ್ಣಿಗೆ ಬಿದ್ದಿದ್ದೇ ಡ್ರೋಣ್..ಯೆಸ್​​ ಇದು ಡ್ರೋಣ್ ಮೂಲಕ ನಡೆದ ದಾಳಿಯಾಗಿತ್ತು.. ಜೊತೆಗೆ ಅದ್ರಲ್ಲಿ ಸ್ಫೋಟಗೊಂಡ ವಸ್ತುಗಳನ್ನು ಪರಿಶೀಲಿಸಿದಾಗ ಇದು ಬಾಂಬ್ ಅನ್ನೋದೂ ಕನ್ಫರ್ಮ್​ ಆಗಿತ್ತು.. ಯೆಸ್​ ನೀವು ಕೇಳುತ್ತಿರೋದು ನಿಜ.. ಇದು ದೇಶದ ಮೇಲೆ ನಡೆದ ಮೊಟ್ಟ ಮೊದಲ ಡ್ರೋಣ್ ದಾಳಿ..!

ಡ್ರೋಣ್ ಏರ್​ಫೋರ್ಸ್​​ ಸ್ಟೇಷನ್​ಗೆ ಬಂದಿದ್ದಾದ್ರೂ ಹೇಗೆ?

ಅತ್ಯಂತ ಭದ್ರತೆ ಇರೋ ಜಮ್ಮುವಿನ ಏರ್​ಫೋರ್ಸ್​ ಸ್ಟೇಷನ್​ಗೆ ಡ್ರೋಣ್ ಬಂದಿದ್ದಾದ್ರೂ ಹೇಗೆ? ಅಷ್ಟು ಸುಲಭವಾಗಿ ಬಂದು ಸ್ಫೋಟ ನಡೆಸಬಹುದಾ? ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತೆ. ಆದ್ರೆ ಒಂದು ವಿಷಯ ನೆನಪಿರಬೇಕು.. ಅದೇನು ಅಂತಾ ನೋಡೋದಾದ್ರೆ.. ಏರ್​ಕ್ರಾಫ್ಟ್​, ಫೈಟರ್ ಜೆಟ್, ಮಿಸೈಲ್, ಹೆಲಿಕಾಪ್ಟರ್ ಹೀಗೆ ಯಾವುದೇ ದೊಡ್ಡ ದೊಡ್ಡ ಯಂತ್ರಗಳು ದಾಳಿ ನಡೆಸಲು ಬಂದರೂ ರೆಡಾರ್​ ಮೂಲಕ ಬಹುತೇಕವಾಗಿ ಅದನ್ನ ಪತ್ತೆ ಹಚ್ಚಿ ಬಿಡಬಹುದು.. ಜೊತೆಗೆ ಇವು ಸ್ಟೆಲ್ತ್ ಅಂದ್ರೆ ಕಣ್ಣಿಗೆ ಕಾಣದ ಫೈಟರ್​​ಜೆಟ್​ಗಳನ್ನೂ ಸಹ ಇನ್​ಫ್ರಾರೆಡ್​ ಕಿರಣಗಳನ್ನು ಬಿಟ್ಟು.. ಆ ವಸ್ತುಗಳ ಶಾಖವನ್ನ ಗ್ರಹಿಸಿ ಪತ್ತೆ ಹಚ್ಚ ಬಹುದು. ಆದ್ರೆ ಈ ಡ್ರೋಣ್​ಗಳನ್ನ ಪತ್ತೆ ಹಚ್ಚುವುದ ಅತಿ ಕಷ್ಟ.. ಯಾಕಂದ್ರೆ ಇವು ಏರ್​ಕ್ರಾಫ್ಟ್​​ ಗಿಂತ ಕೆಳಗಡೆ ಹಾರುತ್ತವೆ.. ಸೈಜ್​ ಕೂಡ ಅತಿ ಚಿಕ್ಕದು.. ಅಲ್ಲದೇ.. ನಿಗದಿತ ಅಂತರದಲ್ಲಿ ವೇಗವಾಗಿಯೇ ಸಾಗಬಲ್ಲವು.. ಜೊತೆಗೆ ದೂರದಲ್ಲಿ ಎಲ್ಲೋ ಕುಳಿತು ರಿಮೋಟ್​ ಕಂಟ್ರೋಲ್​ ಮೂಲಕ ಇವುಗಳನ್ನ ಬಳಸಬಹುದು.. ಹೀಗಾಗಿ ಇಂಥದ್ದನ್ನ ಪತ್ತೆ ಹಚ್ಚೋದು ಸಾಮಾನ್ಯವಾಗಿ ಕಷ್ಟ.. ಅದ್ರಲ್ಲೂ ರಾತ್ರಿ ವೇಳೆ ಇಂಥ ಡ್ರೋಣ್​ಗಳು ಹಾರಿ ಬಂದಾಗ.. ಅವುಗಳ ಪತ್ತೆ ಅತಿ ಕಷ್ಟ.. ಹೀಗಾಗಿಯೇ ಅಷ್ಟೆಲ್ಲ ಭದ್ರತೆಯನ್ನ ದಾಟಿ ಇವುಗಳು ಬರೋಕೆ ಸಾಧ್ಯವಾಗಿರಬಹುದು..!

blank
ಭಾರತದ ಏರ್​ಫೋರ್ಸ್ ನೆಲೆ ಮೇಲೆ ಇವತ್ತು ನಡೆದಿರುವ ಡ್ರೋಣ್ ದಾಳಿ ಅಕ್ಷರಶಃ ಅಖಂಡ ಭದ್ರತಾ ಪಡೆಗಳು ಮಗ್ಗಲು ಬದಲಿಸಿ ಎದ್ದು ಕೂರುವಂತೆ ಮಾಡಿದೆ.. ಇಂಥದ್ದೊಂದು ದಾಳಿ ಭವಿಷ್ಯದಲ್ಲಿ ನಡೆಯಬಹುದು ಅನ್ನೋ ಸಾಧ್ಯತೆ ಇತ್ತು.. ಆದ್ರೆ ಅದು ಇಷ್ಟು ಬೇಗ ಆಗುತ್ತೆ ಅಂತ ಯಾರೂ ನಿರೀಕ್ಷಿಸಿರಲಿಲ್ಲ.. ಈ ದಾಳಿ ಕೇವಲ ಒಂದು ಏರ್​ಫೋರ್ಸ್​ಮೇಲೆ ನಡೆದ ಚಿಕ್ಕ ದಾಳಿಯಲ್ಲ.. ಬದಲಿಗೆ ಭವಿಷ್ಯದ ಯುದ್ಧ ವೈಖರಿಯನ್ನೇ ಬುಡಮೇಲು ಮಾಡಬಲ್ಲ ಭಯಾನಕ ದಾಳಿಯ ರಹದಾರಿ.. ಈ ಡ್ರೋನ್ ಬಂದಿದ್ದು ಎಲ್ಲಿಂದ? ಹಾರಿಸಿದ್ದು ಯಾರು? ಇದ್ರಲ್ಲಿ ಬಳಕೆಯಾದ ತಂತ್ರ ಜ್ಞಾನ ಎಂಥದ್ದು? ಇಂಥ ದಾಳಿ ಅಷ್ಟು ಸುಲಭವಾಗಿ ನಡೆದಿದ್ದಾದ್ರೂ ಹೇಗೆ? ಹೀಗೆ ಸಾಲು ಸಾಲು ಪ್ರಶ್ನೆಗಳ ಸುಳಿಯನ್ನೇ ಇದು ಬಿಚ್ಚಿಟ್ಟಿದೆ..

ಹೌದು.. ಜಮ್ಮುನ IAF ವಿಮಾನ ನಿಲ್ದಾಣದಲ್ಲಿ ಇಂದು ನಡೆದ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ದೇಶದ ಶತ್ರುಗಳು.. ಬಾಂಬ್ ಎಸೆಯಲು ಡ್ರೋಣ್ ಬಳಸಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಡ್ರೋಣ್​​ ಸಹಾಯದಿಂದ ಇಂಥ ದುಷ್ಕೃತ್ಯ ನಡೆಸಿದ್ದಾರೆ.

ದ್ರೋಣ್ ದಾಳಿ.. ಇದು ಯಾರ ಕೃತ್ಯ?
ಈ ದಾಳಿ ನಡೆಸೋಕೆ ಕಾರಣವಾದ್ರೂ ಏನು?

ಜಮ್ಮು ಕಾಶ್ಮೀರ ಸದ್ಯ ಕೇಂದ್ರಾಡಳಿತ ಪ್ರದೇಶವಾಗಿ ಶಾಂತಿಯನ್ನು ಕಾಣುತ್ತಿದೆ.. ಅಗಸ್ಟ್​​ 5, 2019ರಲ್ಲಿ ಆರ್ಟಿಕಲ್​ 370 ಮತ್ತು 35-ಎ ರದ್ದಾದ ಬಳಿಕವಂತೂ ಅಭಿವೃದ್ಧಿ ಪಥದತ್ತ ಸಾಗುತ್ತಿದೆ.. ಇನ್ನೊಂದೆಡೆ ಪಾಕಿಸ್ತಾನದೊಂದಿಗೂ ಕದನ ವಿರಾಮ ಘೋಷಿಸಲಾಗಿದೆ.. ಅಲ್ಲದೇ ಲಡಾಖ್​​ನ ಗಡಿಗೆ ಹೊಂದಿಕೊಂಡಂತೆ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ ಬಳಿ ಚೀನಾದ ಕಿರಿಕ್ ಕಡಿಮೆ ಆಗಿದ್ರೂ.. ಯುದ್ಧೋಪಾದಿಯಲ್ಲಿ ಸಿದ್ಧತೆಗಳಂತೂ ಆಗುತ್ತಿವೆ.. ಇಂಥ ಹೊತ್ತಲ್ಲಿ.. ಯಾರು ದಾಳಿ ನಡೆಸಿದ್ರು? ಇದು ನಿಜಕ್ಕೂ ದಾಳಿ ನಡೆಸೋಕೆ ಮಾಡಿದ ಪ್ಲಾನಾ? ಅಥವಾ ಸ್ಫೋಟಕಗಳನ್ನು ಸಾಗಿಸುವಾಗ ಏನಾದ್ರೂ ಬಿದ್ದು ಇಂಥ ಘಟನೆ ಸಂಭವಿಸಿರಬಹುದಾ? ಮುಂತಾದ ಪ್ರಶ್ನೆಗಳೂ ಮೂಡೋದು ಸಹಜ.. ಆದ್ರೆ ಶತ್ರುಗಳಿಗೆ ಕಾಲ..ನೇಮ ಅನ್ನೋದಿಲ್ಲ.. ಅನ್ನೋದು ಸೂರ್ಯ ಬೆಳಕು ಕೊಡ್ತಾನೆ ಅನ್ನೋವಷ್ಟೇ ಸತ್ಯ..

ಇನ್ನು ಈ ದಾಳಿ ವೈಖರಿಯನ್ನ ಗಮನಿಸಿದ್ರೆ ಎರಡು ರೀತಿಯ ಸಾಧ್ಯತೆಗಳು ಗೋಚರವಾಗುತ್ತೆ. ಒಂದು ದಾಳಿ ಮಾಡಲೇಬೇಕು ಮತ್ತು ಏರ್​ಫೋರ್ಸ್​ ಸ್ಟೇಷನ್​​ನಲ್ಲಿರೋ ಏರ್​ಕ್ರಾಫ್ಟ್​ಗಳಿಗೆ ಹಾನಿ ಮಾಡಬೇಕು ಅನ್ನೋದು.. ಜೊತೆಗೆ ಡ್ರೋಣ್ ಮೂಲಕ ಲೋ ಇಂಟೆನ್ಸಿಟಿ ಬಾಂಬ್​ ಸ್ಫೋಟಿಸುವುದರ ಮೂಲಕ.. ದಾಳಿಯ ಪರಿಣಾಮ, ಸಿಗ್ನಲ್​ ಲಿಂಕ್​ಗಳು, ಸ್ಫೋಟದ ಪರಿಣಾಮ, ಅವುಗಳನ್ನು ತಡೆಯಲು ಆಗಿರುವ ಸಿದ್ಧತೆ ಮತ್ತು ಕ್ರಮ ತೆಗೆದುಕೊಳ್ಳುವ ರೀತಿ ಮುಂತಾದವುಗಳನ್ನ ಪರೀಕ್ಷಿಸುವುದರ ಯೋಜನೆ ಕೂಡ ಆಗಿರಬಹುದು.. ತನಿಖೆ ಬಳಿಕವಷ್ಟೇ ಇದು ಸ್ಪಷ್ಟವಾಗುತ್ತೆ ಅನ್ನೋದು ವೇದ್ಯ.. ಹಾಗಂತ.. ದಾಳಿಗೆ ಕಾರಣವಾದವರನ್ನು ಉದಾಸೀನ ಮಾಡೋ ಅವಕಾಶವೇ ಇಲ್ಲ..!

ದಾಳಿಯ ಹಿಂದೆ ಉಗ್ರರ ಕೈವಾಡ ಇರೋದು ಬಹುತೇಕ ಖಚಿತ.!
ಮತ್ತು ಕಿರಿಕ್​​ಗೆ ಕುಮ್ಮಕ್ಕು ಕೊಡ್ತಿರೋ ದೇಶಗಳ್ಯಾವವು ಗೊತ್ತಾ?

ಬಾಂಬ್ ದಾಳಿಯ ಪ್ಯಾಟರ್ನ್ ಮತ್ತು ಪ್ರಾರಂಭಿಕ ತನಿಖೆ ನಡೆಸಿದಾಗ ಇದು ಉಗ್ರರ ಕೃತ್ಯ ಅನ್ನೋದು ಬಹುತೇಕ ಖಚಿವಾಗಿದೆ. ಇನ್​ಫ್ಯಾಕ್ಟ್​ ಇದೊಂದು ಉಗ್ರರ ದಾಳಿ ಅಂತಾ ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ ಇನ್ನೊಬ್ಬ ವ್ಯಕ್ತಿಯನ್ನೂ ಅರೆಸ್ಟ್ ಮಾಡಿದ್ದು ಆತನಿಂದ ಸುಮಾರು 5/6 ಕೆಜಿ ತೂಕದ ಐಇಡಿ ಸ್ಫೋಟಕ ವಶಪಪಡಿಸಿಕೊಂಡಿರೋದಾಗಿಯೂ ಅವರು ತಿಳಿಸಿದ್ದಾರೆ. ಈ ಮೂಲಕ ಮತ್ತೊಂದು ದೊಡ್ಡ ಸ್ಫೋಟದ ಸಂಚನ್ನ ವಿಫಲಗೊಳಿಸಿರೋದಾಗಿ ಅವರು ತಿಳಿಸಿದ್ದಾರೆ.

ಈ ದಾಳಿಗೆ ಕಾರಣ ಉಗ್ರರು ಅಂದ್ರೆ.. ಖಂಡಿತವಾಗಿಯೂ ಮೊದಲು ಬರೋ ಪ್ರಶ್ನೆಯೆಂದ್ರೆ.. ಇಷ್ಟು ಸುಧಾರಿತ ತಂತ್ರಜ್ಞಾನ ಉಗ್ರರ ಕೈಗೆ ಹೇಗೆ ಸಿಗೋಕೆ ಸಾಧ್ಯ? ಈ ದಾಳಿ ನಡೆಸೋಕೆ ಬೇಕಾದಂಥ ಡ್ರೋಣ್​ಗಳು ಅವರಿಗೆ ಸಿಕ್ಕಿದ್ದು ಹೇಗೆ? ಅನ್ನೋದು.. ಇದಕ್ಕೆ ಉತ್ತರ ಏನು ಅಂತ ನೋಡೋದಾದ್ರೆ.. ಚಿತ್ರಣ ಬೇರೇನೂ ಇಲ್ಲ.. ಈ ದಾಳಿಯ ಹಿಂದೆ ಇರೋದೂ ಪಾಕಿಸ್ತಾನ ಅನ್ನೋ ದೇಶ ಅನ್ನೋದು ಸ್ಪಷ್ಟವಾಗುತ್ತೆ.. ಜೊತೆಗೆ.. ಈ ಸುಧಾರಿತ ಡ್ರೋಣ್​ಗಳನ್ನ ಉಗ್ರರಿಗೆ ನೀಡಿದ್ದು ಯಾರು? ಅಂತ ನೋಡಿದ್ರೆ.. ಇನ್ನೊಂದು ದೇಶದ ಹೆಸರು ಮುಂಚೂಣಿಗೆ ಬರುತ್ತೆ.. ಆ ದೇಶ ಯಾವುದು ಗೊತ್ತಾ?

ಅಷ್ಟಕ್ಕೂ ಉಗ್ರರ ಈ ದಾಳಿ ಹಿಂದೆ ಪಾಕಿಸ್ತಾನದ ಕೈವಾಡವಿರೋ ಗುಮಾನಿ ಯಾಕೆ ಬಲವಾಗುತ್ತೆ ಗೊತ್ತಾ? ಇದು ಕೇವಲ ಊಹಾಪೋಹ ಅಲ್ಲ.. ಬದಲಿಗೆ ಕಠಿಣ ಸತ್ಯಗಳು ಈ ಗುಮಾನಿಗೆ ಬಲ ತುಂಬುತ್ತೆ.. ಮೊದಲನೇಯದಾಗಿ ಈ ಸ್ಫೋಟ ಸಂಭವಿಸಿದ ಜಮ್ಮುವಿನ ಏರ್​ಫೋರ್ಸ್​ ಸ್ಟೇಷನ್​​ನಿಂದ ಕೇವಲ 16 ಕಿಲೋ ಮೀಟರ್ ದೂರದಲ್ಲಿ ಪಾಕಿಸ್ತಾನ ಗಡಿ ಇದೆ.. ಎರಡನೇಯದಾಗಿ.. ಈ ಹಿಂದೆ ಕೂಡ ಪಾಕಿಸ್ತಾನದಿಂದ ಸಾಕಾಷ್ಟು ಶಸ್ತ್ರಾಸ್ತ್ರಗಳು, ಡ್ರಗ್ಸ್​, ಕರೆನ್ಸಿಗಳು ಭಾರತದ ಗಡಿ ಪ್ರವೇಶಿಸಿರೋ ಉದಾಹರಣೆ ಇದೆ.. ಮೂರನೇಯದಾಗಿ ಪಾಕಿಸ್ತಾನದ ಬೆಂಬಲವಿಲ್ಲದೇ ಉಗ್ರ ಸಂಘಟನೆಗಳು ಏನೂ ಮಾಡೋಕೆ ಸಾಧ್ಯವಿಲ್ಲ ಅನ್ನೋದು.. ನಾಲ್ಕನೇಯದಾಗಿ.. ಇಲ್ಲಿ ಕೇವಲ ಪಾಕಿಸ್ತಾನ ಮಾತ್ರವಲ್ಲ.. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮತ್ತೊಂದು ದೇಶದ ಕೈವಾಡ ಇರೋ ಸಾಧ್ಯತೆಯನ್ನ ಕೂಡ ತಳ್ಳಿಹಾಕುವಂತಿಲ್ಲ..!

blank

ಪಾಕಿಸ್ತಾನ ಅನ್ನೋ ದೇಶದ ಅಸ್ತಿತ್ವದ ಏಕಮಾತ್ರ ಉದ್ದೇಶ ಮತ್ತು ಕಾರಣ ಅಂದ್ರೆ ಅದು ಭಾರತದ ವಿರೋಧ.. ನೇರವಾಗಿ ನಾಲ್ಕು ಬಾರಿ ಯುದ್ಧ ಘೋಷಿಸಿ ಸೋತುಹೋದ ಪಾಕಿಸ್ತಾನ.. ಕೊನೆಗೆ ಆಯ್ದುಕೊಂಡಿದ್ದೇ ಅಡ್ಡ ಮಾರ್ಗ.. ಅಧಿಕೃತವಾಗಿ ಸೇನೆಯಿಂದ ದಾಳಿ ನಡೆಸದೇ.. ಎಲ್ಲ ರೀತಿಯ ಸಹಕಾರ ನೀಡಿ ಉಗ್ರಸಂಘಟನೆಗಳನ್ನ ಬಳಸಿಕೊಂಡು ಭಾರತದ ಮೇಲೆ ದಾಳಿ ನಡೆಸೋದು ಅದರ ಪ್ರತಿನಿತ್ಯದ ಕೆಲಸವಾಗಿದೆ.. ಹೀಗಾಗಿಯೇ ಸಹಜವಾಗಿ ಈ ಡ್ರೋಣ್ ದಾಳಿಯ ಹಿಂದೆ ಆ ದೇಶದ ಕೈವಾಡ ಇಲ್ಲ ಅಂತ ಹೇಳೋಕೆ ಯಾವುದೇ ಆಧಾರ ಸದ್ಯಕ್ಕೆ ಸಿಕ್ಕಿಲ್ಲ.. ಬದಲಿಗೆ ಡ್ರೋಣ್​​ ಬಳಸಿ ಅದೇನು ಮಾಡಿದೆ ಅಂತಾ ನೋಡೋದಾದ್ರೆ..

ದಿನಾಂಕ; 13-08-2019
ಸ್ಥಳ : ಪಂಜಾಬ್, ಅಮೃತ್ಸರ್​‘

ಪಾಕ್​​ಗಡಿಗೆ ಹೊಂದಿಕೊಂಡಿರೋ ಭಾರತದ ಪಂಜಾಬ್​ನಲ್ಲಿ ಸ್ಥಳೀಯ ಪೊಲೀಸರು ಮಹಾವಾ ಅನ್ನೋ ಗ್ರಾಮದಲ್ಲಿ ಪಾಕಿಸ್ತಾನದಿಂದ ಹಾರಿ ಬಂದಿದ್ದ ಆರು ರೆಕ್ಕೆಗಳ ಡ್ರೋಣ್ ಕ್ರಾಶ್ ಆಗಿರೋದನ್ನ ಗಮನಿಸಿ, ಅದನ್ನ ವಶಕ್ಕೆ ಪಡೆದಿದ್ದರು.

ದಿನಾಂಕ; 20-06-20
ಸ್ಥಳ : ಕಥುವಾ, ಕಾಶ್ಮೀರ

ಕಾಶ್ಮೀರದ ಕಥುವಾ ಜಿಲ್ಲೆಯ ಹಿರಾನಗರ್​​ನಲ್ಲಿ ಬಿಎಸ್​ಎಫ್ ಪಾಕಿಸ್ತಾನದ ಸ್ಪೈ ಡ್ರೋಣ್​​ ಅನ್ನ ಹೊಡೆದುರುಳಿಸಿತ್ತು.. ಜೊತೆಗೆ ಇದು ಹೊತ್ತು ತರುತ್ತಿದ್ದ ರೇಡಿಯೋ ಸಿಗ್ನಲ್ ರಿಸೀವರ್, 4 ಬ್ಯಾಟರೀಗಳು,7 ಗ್ರೆನೇಡ್ಸ್​​, ಒಂದು ಎಕೆ-47 ರೈಫಲ್​​ ಮತ್ತು 60 ಜೀವಂತ ಗುಂಡುಗಳನ್ನ ವಶಕ್ಕೆ ಪಡೆಯಲಾಗಿತ್ತು..

ಇದು ಕೇವಲ ಒಂದೆರಡು ಘಟನೆಯಲ್ಲ ಹೀಗೆ ಪಾಕಿಸ್ತಾನದಿಂದ ಹಾರಿ ಬರುವ ಹಲವು ಡ್ರೋಣ್​ಗಳು ಶಸ್ತ್ರಾಸ್ತ್ರ ಕಳ್ಳಸಾಗಣೆ, ಹಣ ವರ್ಗಾವಣೆ, ಮಾದಕ ದ್ರವ್ಯ ಕಳ್ಳಸಾಗಣೆ ಮುಂತಾದ ಕೃತ್ಯಗಳಲ್ಲಿ ನಿವೃತ್ತವಾಗಿರೋ ಹಲವು ಘಟನೆಗಳು ನಡೆದಿವೆ.. ಇಂದಿಗೂ ಅದು ಪಾಕಿಸ್ತಾನ ಗಡಿಗುಂಟ ನಡೆಯುತ್ತಲೇ ಇವೆ.. ಹೀಗಾಗಿ ಸಹಜವಾಗಿ ಪಾಕಿಸ್ತಾನಕ್ಕೂ ಈ ಘಟನೆಗೂ ಲಿಂಕ್ ಇರೋದು ಮೇಲ್ನೋಟಕ್ಕೆ ಕಂಡು ಬರ್ತಿದೆ ಅಂತಾ ಎನ್​​ಐಎ ಮೂಲಗಳು ಕೂಡ ತಿಳಿಸಿವೆ.. ಒಂದು ಕಡೆ ಪಾಕಿಸ್ತಾನ ಆದ್ರೆ.. ಇನ್ನೊಂದು ಕಡೆ ಮತ್ತೊಂದು ದೇಶ ಕೂಡ ಉಗ್ರರಿಗೆ ಸಹಾಯ ಮಾಡಿರುವ ಸಾಧ್ಯತೆ ಕೂಡ ಇಲ್ಲದೇ ಇಲ್ಲ..

 ಒಂದು ವೇಳೆ ಈ ದಾಳಿ ಹಿಂದೆ ಪಾಕಿಸ್ತಾನದ ನೇರ ಕೈವಾಡ ಇರೋದಕ್ಕೆ ಸಾಕ್ಷ್ಯ ಸಿಕ್ಕರೆ, ಇದನ್ನ ಖಂಡಿತವಾಗಿಯೂ ಭಾರತ ಆ್ಯಕ್ಟ್ ಆಫ್ ವಾರ್ ಅಂತಾ ಪರಿಗಣಿಸುತ್ತೆ. ಮತ್ತು ತನ್ನ ರಕ್ಷಣೆಗಾಗಿ ಮರು ದಾಳಿ ಮಾಡುವ ಎಲ್ಲ ಅವಕಾಶವನ್ನೂ ಭಾರತ ಬಳಸಿಕೊಳ್ಳುತ್ತೆ. ಇದೇ ಕಾರಣದಿಂದಾಗಿ ಹೆಚ್ಚಾಗಿ ಪಾಕ್​ ಸೈನಿಕರು ಉಗ್ರರ ಸಹಾಯ ಪಡೆದುಕೋಂಡೇ ಬಂದಿದ್ದಾರೆ.. ಇನ್ನು ಇದನ್ನ ಉಗ್ರ ಸಂಘಟನೆಗಳೇ ಮಾಡಿದ್ರೆ.. ಪಾಕಿಸ್ತಾನದ ಗಡಿಯಲ್ಲಿ ಉಗ್ರರು ಸಕ್ರಿಯವಾಗಿರೋದು ಕನ್ಫರ್ಮ್ ಆಗುತ್ತೆ.. ಈ ನಡುವೆ ಇನ್ನೊಂದು ದೇಶದ ಕೈವಾಡ ಇರೋದೇ ಆಗಿದ್ರೆ.. ಅದು ದೊಡ್ಡ ಮಟಟದ ಸವಾಲನ್ನು ಒಡ್ಡೋದು ಖಚಿತವಾಗಿದೆ..

ಭಾರತದ ನೆಲದ ಮೇಲೆ ಉಗ್ರರು ನಡೆಸಿದ ಮೊದಲ ಡ್ರೋಣ್ ಬಾಂಬ್ ದಾಳಿ ಅನ್ನೋದು ಇಂದು ಇತಿಹಾಸದ ಪುಟ ಸೇರಿದೆ.. ಇದಕ್ಕೆ ತಕ್ಕ ಶಾಸ್ತಿಯನ್ನ ಭಾರತ ಖಂಡಿತ ಮಾಡಲಿದೆ.. ಜೊತೆಗೆ ಕೆಲ ಮೂಲಗಳ ಪ್ರಕಾರ ಇನ್ನೊಂದು ದೇಶ ಉಗ್ರರಿಗೆ ಡ್ರೋಣ್ ಒದಗಿಸಿರುವ ಸಾಧ್ಯತೆ ತೆರೆದುಕೊಂಡಿದೆ..

ಅಷ್ಟಕ್ಕೂ ಆ ಇನ್ನೊಂದು ದೇಶ ಯಾವುದು ಅಂತಾ ನೋಡಿದ್ರೆ.. ಅದು ಬೇರೆ ಯಾವುದೂ ಅಲ್ಲ.. ಇತ್ತೀಚಿನ ದಿನಗಳಲ್ಲಿ ಭಾರತಕ್ಕೆ ಮಗ್ಗಲು ಮುಳ್ಳಿನಂತಾಗಿರೋ ಚೀನಾ.. ಎಸ್​ ಇದೇ ಮೇಡ್​ ಇನ್ ಚೀನಾದ ಹಲವು ಶಸ್ತ್ರಾಸ್ತ್ರಗಳು ಉಗ್ರರ ಬಳಿ ಇರೋದು ಈ ಹಿಂದೆ ಕೂಡ ಪತ್ತೆಯಾಗಿತ್ತು.. ಜೊತೆಗೆ ಉಗ್ರರ ಬಳಿ ಚೀನಾದ್ದೇ ಡ್ರೋಣ್​ಗಳು ಇರೋ ಸಾಧ್ಯತೆ ಇರೋದನ್ನ ಅಲ್ಲಗಳೆಯುವಂತಿಲ್ಲ.. ನೇರವಾಗಿ ಮತ್ತು ಅಧಿಕೃತವಾಗಿ ಚೀನಾ ಉಗ್ರರಿಗೆ ಡ್ರೋಣ್​ ನೀಡದೇ ಇರಬಹುದು ಅಥವಾ ನೀಡಿರಲೂ ಬಹುದು.. ಭಾರತದೊಂದಿಗೆ ಶಾಂತಿ ಬೇಡವೇ ಬೇಡ ಅಂತ ತೀರ್ಮಾನ ಮಾಡಿಕೊಂಡಂತಿರೋ ಚೀನಾ.. ಒಂದು ಕಡೆ ಪಾಕಿಸ್ತಾನಕ್ಕೂ ಸಾಕಷ್ಟು ವಿಭಿನ್ನ ರೀತಿಯ ಡ್ರೋಣ್​ಗಳನ್ನು ಮಾರಾಟ ಮಾಡ್ತಿದೆ.. ಇದ್ರಲ್ಲಿ ಅತ್ಯಂತ ಚೀಪ್ ಆಗಿರೋ ಡ್ರೋಣ್​ಗಳೂ ಇವೆ.. ದಾಳಿ ನಡೆಸಬಲ್ಲ ಡ್ರೋಣ್​ಗಳೂ ಇವೆ.. ಹೀಗಾಗಿ.. ಪಾಕಿಸ್ತಾನದ ಮಾರ್ಗದ ಮೂಲಕ ಕೂಡ ಈ ಡ್ರೋಣ್​ಗಳು ಉಗ್ರರ ಕೈ ಸೇರಿರೋ ಸಾಧ್ಯತೆ ಇದ್ದೇ ಇದೆ..

blank
ಡ್ರೋಣ್​ ತಂತ್ರಜ್ಞಾನದ ವಿಷಯಕ್ಕೆ ಬಂದಾಗ ಚೀನಾಕ್ಕೆ ಹೋಲಿಸಿದರೆ ಭಾರತ ಇನ್ನೂ ಸವೆಸಬೇಕಾದ ದಾರಿ ತುಂಬಾ ದೂರವಿದೆ. ಹಾಗಂತ ಭಾರತವೇನೂ ತೀರ ಹಿಂದುಳಿದೂ ಇಲ್ಲ.. ಶತ್ರುಗಳ ನೆಲೆ ಹೊಕ್ಕು ಹೊಡೆದುರುಳಿಸಬಹುದಾದ ಅತ್ಯಾಧುನಿಕ ಮಿಸೈಲ್​ಗಳಿಂದ ಹಿಡಿದು.. ಸ್ವಾನ್ ಡ್ರೋಣ್​ ಅಥವಾ ಡ್ರೋಣ್​ಗಳ ಗುಂಪು ಟೆಕ್ನಾಲಜಿಯನ್ನೂ ಭಾರತ ಸಿದ್ಧಿಸಿಕೊಂಡಿದೆ. ಇದೇ ಕಾರಣದಿಂದಾಗಿ ಶತ್ರುಗಳು ನೇರವಾಗಿ ಕಣ್ಣಲ್ಲಿ ಕಣ್ಣಿಟ್ಟು ದಾಳಿ ನಡೆಸುವಲ್ಲಿ ಹೇಡಿಗಳಾಗಿದ್ದು.. ಉಗ್ರರನ್ನ ಬಳಸಿಕೊಳ್ತಿದ್ದಾರೆ.. ಹೀಗಾಗಿ ಸದ್ಯ ಭಾರತ ಆಂಟಿ-ಡ್ರೋಣ್ ಟೆಕ್ನಾಲಜಿಯನ್ನ ತುರ್ತಾಗಿ ಅಭಿವೃದ್ಧಿಪಡಿಸಲೇ ಬೇಕಿದೆ. ಜೊತೆಗೆ, ಭವಿಷ್ಯದಲ್ಲಿ ಇಂಥ ದಾಳಿಗಳು ನಗರಗಳಲ್ಲಿಯೂ ನಡೆಯುವ ಸಾಧ್ಯತೆಗಳು ಇಲ್ಲದಂಥ ವಾತಾವರಣ ನಿರ್ಮಿಸಬೇಕಿದೆ.

ಒಟ್ಟಿನಲ್ಲಿ ಭಾರತ ಶತ್ರುಗಳನ್ನು ಎದುರಿಸಲು ಎಷ್ಟೇ ಸಮರ್ಥವಾಗಿದ್ರೂ.. ಹೆಚ್ಚಾಗಿ ಡಿಫೆಂಡರ್​ ರೂಪದಲ್ಲಿಯೇ ಕಂಡು ಬರುತ್ತೆ. ಅಂದ್ರೆ ಬೇರೆಯವರು ದಾಳಿ ಮಾಡಿದ್ರೆ ಅದನ್ನ ತಡೆಯೋದು ಅಥವಾ ದಾಳಿ ಬಳಿಕ ಪ್ರತಿಕ್ರಿಯಿಸೋದು.. ಇದೇ ಶತ್ರುಗಳಿಗೂ ಸಲುಗೆ ನೀಡಿದಂತಾಗಿರೋದು ಸುಳ್ಳಲ್ಲ.. ಹೀಗಾಗಿ, ಭಾರತ ಈ ವಿಷಯದಲ್ಲಿ ತನ್ನ ರಣನೀತಿಯನ್ನು ಸುಧಾರಿಸಿಕೊಳ್ಳಲೇ ಬೇಕಿದ್ದು.. ಶತ್ರುಗಳನ್ನು ಬೇರಿನಲ್ಲೇ ಹುಟ್ಟಡಗಿಸಲೇಬೇಕಿದೆ..

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ದೇಶದ ಮೇಲೆ ಮೊಟ್ಟ ಮೊದಲ ಡ್ರೋಣ್​ ಅಟ್ಯಾಕ್; ಭವಿಷ್ಯದ ಯುದ್ಧಕ್ಕೆ ಟರ್ನಿಂಗ್ ಪಾಯಿಂಟ್ appeared first on News First Kannada.

Source: newsfirstlive.com

Source link