ಮಂಗನಿಂದ ಮಾನವ ಅನ್ನೋ ವಾದವನ್ನೇ ಉಲ್ಟಾ ಮಾಡುತ್ತಿದೆ ಚೀನಾದಲ್ಲಿ ಸಿಕ್ಕ ತಲೆಬುರುಡೆ

ಮಂಗನಿಂದ ಮಾನವ ಅನ್ನೋ ವಾದವನ್ನೇ ಉಲ್ಟಾ ಮಾಡುತ್ತಿದೆ ಚೀನಾದಲ್ಲಿ ಸಿಕ್ಕ ತಲೆಬುರುಡೆ

ಮಂಗನಿಂದ ಮಾನವ ಎನ್ನುವ ಮಾತು ಕೇಳಿದ್ದೀರಿ ಅಲ್ವಾ ? ಹೌದು, ಡಾರ್ವಿನ್ ರವರ ವಿಕಸನ ಥಿಯರಿ ಹೇಳೋದು ಇದನ್ನೆ. ಈ ಮಾನವ ಜನ್ಮ ರೂಪುಗೊಳ್ಳುವ ಮುನ್ನ ಹಲವು ಪೂರ್ವಜರ ಅಸ್ತಿತ್ವ ಇತ್ತು ಅನ್ನೋದೇ ಡಾರ್ವಿನ್‌ನ ವಾದವಾಗಿತ್ತು. ಆದರೆ ಇದನ್ನು ಹಲವರು ವಿರೋಧಿಸುವ ನಡುವೆಯೇ, ಚೀನಾದಿಂದ ಮತ್ತೊಂದು ಸಂಶೋಧನೆ ಹೊಸ ಜಾತಿಯ ಮನುಷ್ಯನನ್ನು ಜಗತ್ತಿಗೆ ಪರಿಚಯಿಸುತ್ತಿದೆ. ಹೇಗಿದ್ದಾನೆ ಈ ಪೂರ್ವಜ ?

ಮಾನವ ಜಾತಿಯ ವಿಕಸನದ ಹೆಜ್ಜೆಯನ್ನು ಅಲ್ಲಿ ಇಲ್ಲಿ, ಚಿತ್ರಗಳಲ್ಲಿ ನೋಡೆ ಇರ್ತೀರಾ. ಮಂಗನಾಗಿದ್ದ ಮಾನವ ಎಷ್ಟೊ ವರ್ಷಗಳ ವಿಕಾಸದ ಬಳಿಕ ಸಹಜ ಮಾನವ ಅಂದ್ರೆ ಹೋಮೋ ಸೇಪಿಯನ್ ಆಗಿ ಬದಲಾಗಿರೋದು. ಇದಕ್ಕೂ ಮುಂಚೆ ನಮ್ಮ ಪೂರ್ವಜ ಜಾತಿಯ ಮಾನವರ ಈ ಪ್ರಪಂಚದಲ್ಲಿ ಬದುಕುಳಿದು ತಮ್ಮ ಅಸ್ತಿತ್ವವನ್ನು ಅಲ್ಲಿ- ಇಲ್ಲಿ ತೋರಿಸಿ ಹೋಗಿದ್ದಾರೆ. ಈ ವಾದವನ್ನು ಮೊದಲು ಮಂಡಿಸಿದ್ದು ವಿಕಸನದ ಪಿತಾಮಹ ಚಾರ್ಲ್ಸ್ ಡಾರ್ವಿನ್‌.

ಚಾರ್ಲ್ಸ್ ಡಾರ್ವಿನ್ ರವರ 19 ನೇ ಶತಮಾನದಲ್ಲಿ ಪ್ರಮುಖ ಜೀವ ವಿಜ್ಞಾನಿ. ಫೆಬ್ರವರಿ 12 , 1809ರಲ್ಲಿ ಇಂಗ್ಲೆಂಡ್‌ನಲ್ಲಿ ಜನಿಸಿದ ಇವರು ಜೀವ ವಿಜ್ಞಾನ, ಭೂಗರ್ಭ ವಿಜ್ಞಾನ ಹಾಗೂ ಸಮಾಜವಿಜ್ಞಾನಗಳಲ್ಲಿ ಆಸಕ್ತಿ ಇದ್ದವರು. ಆದ ಕಾರಣ ಭೂಮಿಯಲ್ಲಿ ಅಡಗಿರುವ ಹೊಸ ಹೊಸ ಅಂಶಗಳನ್ನು ಕಲೆ ಹಾಕಿ ಡಾರ್ವಿನ್ಸ್ ಥಿಯರಿ ಆಫ್ ಎವಲ್ಯೂಷನ್ ಎನ್ನುವ ವಿಶೇಷ ಸಿದ್ಧಾಂತವನ್ನು ಭೂಮಿಗೆ ಪರಿಚಯಿಸಿದರು. ಇದರಲ್ಲಿ ಭೂಮಿ ಒಳಗೆ ಮಣ್ಣಾಗಿ ಉಳಿದಿರುವ ಹಲವು ಮಾನವನ ದೇಹದ ಅವಶೇಷಗಳನ್ನು ಒಂದಕ್ಕೊಂದು ಹೋಲಿಸಿ. ಮಾನವನ ಹುಟ್ಟು ಹಾಗೂ ಮಾನವ ವಿಕಸನದ ಬಗ್ಗೆ ಸಮಾಜಕ್ಕೆ ತಿಳಿಸಿದರು. ಈ ವರದಿಯನ್ನು ಒಪ್ಪಿ ಹಲವರು ಬೆರಗಾದರೆ ಇನ್ನು ಹಲವರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು.

blank

ಡಾರ್ವಿನ್ ಥಿಯರಿಯನ್ನು ಬಹಿಷ್ಕರಿಸಿದ ಯೂರೋಪಿಯನ್ನರು
ಡಾರ್ವಿನ್ ಈ ಎವಲ್ಯೂಷನ್ ಥಿಯರಿಯನ್ನು ಪ್ರತಿಪಾದಿಸಿದಾಗ, ಯೂರೋಪಿಯನ್ನರು ಇದನ್ನು ಖಡಾಖಂಡಿತವಾಗಿ ಬಹಿಷ್ಕರಿಸಿದ್ದರು. ಯೂರೋಪಿಯನ್ನರ ಮಾನವ ದೇಹ ಆಕರ್ಷಿತವಾಗಿರುವುದು ಇದಕ್ಕೆ ಮೂಲ ಕಾರಣ. ಡಾರ್ವಿನ್ ಹೇಳುವಂತೆ ನಮ್ಮ ಪೂರ್ವಜರು ನೋಡಲು ಮಂಗಗಳಂತೆ ಇದ್ದು, ದೀರ್ಘ ವಿಕಸನದ ಬಳಿಕವಷ್ಟೆ ನಾವು ಈ ಶರೀರ ಪಡೆದಿದ್ದೇವೆ ಎನ್ನುವುದು. ಆದರೆ ಯೂರೋಪಿಯನ್ನರು ತಮ್ಮ ಪೂರ್ವಜರ ಕಥೆಗಳನ್ನು ದೃಢವಾಗಿ ನಂಬಿದ ಕಾರಣ, ತಾವು ದೇವರ ವರ, ನಮ್ಮ ಹುಟ್ಟು ಆ್ಯಡಂ ಎಂಬಾತನಿಂದ ಆಗಿರುವುದು ಎಂದು ಡಾರ್ವಿನ್ ಥಿಯರಿಯನ್ನು ಸಂಪೂರ್ಣ ಕಡೆಗಣಿಸಿದ್ದರು. ಆದರೆ ಡಾರ್ವಿನ್ ಮಾತ್ರ ಹಲವು ಮಾನವನ ಮೂಳೆ, ತಲೆ ಬುರುಡೆಗಳನ್ನು ಕಲೆ ಹಾಕಿ ಪ್ರತಿಯೊಂದು ಹೆಜ್ಜೆಯಲ್ಲಿ ಮನುಷ್ಯನ ಗುಣ ಹೇಗಿತ್ತು , ಶರೀರದ ಅಂಗಾಂಗಗಳು ಹೇಗಿದ್ದವು ಎಂದು ಸಂಪೂರ್ಣ ವರದಿ ಜಗತ್ತಿಗೆ ನೀಡಿದ್ದ.

ಸಂಶೋಧನೆಯಲ್ಲಿ ಸಿಕ್ಕವು ಹಲವು ಬುರುಡೆಗಳು
ಹಲವು ಕಥೆಗಳನ್ನು ಹೇಳಿದವು ಪ್ರತಿ ಅವಶೇಷಗಳು

ಹೀಗೆ ಸಂಶೋಧನೆ ಮಾಡಿದಾಗ, ಭೂಮಿ ಒಳಗೆ ಹಲವು ಪೂರ್ವಜರ ತಲೆ ಬುರುಡೆಗಳು ಕಾಣಸಿಕ್ಕಿವೆ. ಪ್ರತಿ ತಲೆ ಬುರುಡೆಗಳು ಒಂದೊಂದು ಹೊಸ ಹೊಸ ಕಥೆಗಳನ್ನು ಹೇಳ್ತಾ ಹೋಗ್ತವೆ. ಆ ಭೂವಿಜ್ಞಾನಿಗಳ ಸಂಶೋಧನೆ ಎಷ್ಟರ ಮಟ್ಟಿಗೆ ಇತ್ತು ಅಂದ್ರೆ ಆ ಬರುಡೆ, ಎಷ್ಟು ವರ್ಷಗಳ ಹಿಂದೆ ಮಣ್ಣು ಮಾಡಲಾಗಿತ್ತು. ಅಂಗಾಂಗಳ ಆಕಾರ, ದೇಹದಲ್ಲಿನ ಡಿ.ಎನ್.ಎ ಎಲ್ಲವನ್ನು ಆಧುನಿಕ ಸಂಶೋಧಕರು ಬಗೆ ಹರಿಸಿ ಬಿಟ್ಟಿದ್ದಾರೆ. ಆ ಪೂರ್ವಜರಿಗೆ ಒಂದೊಂದು ಹೆಸರಿಟ್ಟು, ಅವರುಗಳಿಂದ ಈಗಿನ ಮಾನವನ ಏನೇನೆಲ್ಲ ಪಡೆದಿದ್ದಾನೆ ಹಾಗೂ ಇನ್ನಿತರೆ ವಿಷಯಗಳನ್ನು ಕಲೆ ಹಾಕಿದ್ದಾರೆ. ಅದರಲ್ಲಿ ಕೆಲವನ್ನು ಹೇಳ್ತಿವಿ ಕೇಳಿ.

blank

ಹೋಮೊ ರುಡೋಲ್​ಫೇನ್ಸಿಸ್ ಎನ್ನುವ ಈ ಮಾನವರು 20 ಲಕ್ಷ ವರ್ಷಗಳ ಹಿಂದೆ ಪೂರ್ವ ಆಫ್ರಿಕಾದಲ್ಲಿ ಕಾಣಸಿಕ್ಕಿದೆ. ಹೋಮೊ ಎರೆಕ್ಟಸ್ ಹತ್ತು ಲಕ್ಷ ವರ್ಷಗಳ ಹಿಂದೆ ಪೂರ್ವ ಏಷಿಯಾದಲ್ಲಿ ಈ ಜಾತಿ ಮಾನವರ ಬುರುಡೆಗಳು ಸಿಕ್ಕಿವೆ. ಈಗಿರುವ ಮಾನವರಿಗೆ ಹೆಚ್ಚು ಹೋಲಿಕೆ ಇರುವ ಹೋಮೊ ನಿಯಾಂಡರ್ತಲ್ ಜಾತಿ 40 ಸಾವಿರ ವರ್ಷಗಳ ಹಿಂದೆ ಯೂರೋಪ್ ಹಾಗೂ ವೆಸ್ಟ್ ಏಷಿಯಾದಲ್ಲಿ ಸಿಕ್ಕಿರುತ್ತದೆ.

 

ಇದಿಷ್ಟು ಹೋಮೊ ಸೇಪಿಯನ್ಸ್ ಗಳ ವಿಕಸನ ಆಗುವ ಮುಂಚೆ ಹತ್ತಿರದ ಮಾನವ ಸ್ಪೀಸೀಸ್ ಎನ್ನಬಹುದು. ಇದಕ್ಕೂ ಮುಂಚೆ ಹಲವು ಮಾನವ ಜನ್ಮಗಳು ಬಂದು ನಶಿಸಿ ಹೋಗಿವೆ. ಆದರೆ ದೀರ್ಘ ಕಾಲದವರೆಗೂ ಅಸ್ತಿತ್ವದಲ್ಲಿರುವವರು ಹೋಮೊ ಸೇಪಿಯನ್ಸ್ ಮಾತ್ರ. ಕಾರಣ ಈ ಸ್ಪೀಸೀಸ್ ತನ್ನ ಬುದ್ದಿ ಶಕ್ತಿಯನ್ನು ಬಳಸುವ ಸಾಮರ್ಥ್ಯ ಹೊಂದಿ, ಎಲ್ಲರೂ ಒಗ್ಗಟ್ಟಾಗಿ ಇರುವ ಮನೋಬಲ ಇರುವುದರಿಂದ ಇನ್ನು ಹೋಮೋ ಸೇಪಿಯನ್ಸ್ ಬದುಕುಳಿದಿದೆ. ಆದರೆ ಈ ನಡುವೆ ಚೀನಿಯರು ಮಾನವ ಸ್ಪೀಸೀಸ್‌ಗಳ ನಡುವಿನ ಹೊಸ ಪೂರ್ವಜರ ಬುರುಡೆ ಸಿಕ್ಕಿದೆ ಎಂದು ವಿಶೇಷ ವರದಿ ಜಗತ್ತಿಗೆ ಒಪ್ಪಿಸುತ್ತಿದ್ದಾರೆ.

ಚೀನಾದ ಸಂಶೋಧಕರಿಗೆ ಸಿಕ್ತು ಪುರಾತನ ತಲೆಬುರುಡೆ
ಡ್ರಾಗನ್ ಮ್ಯಾನ್ ಎಂದು ಹೆಸರಿಸಿದ ಚೀನಿಯರು

ಚೀನಾದ ಸಂಶೋಧಕರಿಗೆ ಹೊಸ ಪುರಾತನ ತಲೆಬುರುಡೆಯೊಂದು ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಹೋಮೋ ಸೇಪಿಯನ್ ಗೆ ಹತ್ತಿರದ ಪ್ರಭೇದಗಳಾದ ನಿಯಾಂಡರ್ತಲ್ ಮತ್ತು ಹೋಮೋ ಎರೆಕ್ಟಸ್ನಂತಹ ಪ್ರಾಚೀನ ಮಾನವನ ಪ್ರಭೇದಗಳಲ್ಲಿ ಈಗ ಸಿಕ್ಕಿರುವ ತಲೆ ಬುರುಡೆ ಹತ್ತಿರದ ವಿಕಸನೀಯ ಸಂಬಂಧಿ ಎಂದು ಚೀನಾ ಸಂಶೊಧಕರ ತಂಡ ಹೇಳಿಕೊಂಡಿದೆ.
ಹೊಸದಾಗಿ ಸಿಕ್ಕಿರುವ ಈ ತಲೆ ಬುರುಡೆ, ಚೀನಾದ ಡ್ರಾಗನ್ ಲೇಕ್ ಬಳಿ ಕಾಣಸಿಕ್ಕಿರುವ ಕಾರಣ, ಈ ವಂಶಜರು ತಮ್ಮ ನೆಲೆಯನ್ನು ಅದೆ ನದಿಯ ಸಮೀಪದಲ್ಲಿ ಇದ್ದಿರ ಬಹುದು ಎನ್ನುವ ಕಾರಣಕ್ಕೆ ಈ ಜನಾಂಗಿಯರನ್ನು ಡ್ರಾಗನ್ ಮ್ಯಾನ್ ಎಂದು ಹೆಸರಿಸಲಾಗಿದೆ. ಮಾನವ ವಿಕಾಸ ಸಂಶೋಧನೆಯ ಯುಕೆ ಪ್ರಮುಖ ತಜ್ಞರಲ್ಲಿ ಒಬ್ಬರಾದ ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಪ್ರೊಫೆಸರ್ ಕ್ರಿಸ್ ಸ್ಟ್ರಿಂಗರ್ ಸಂಶೋಧನಾ ತಂಡ ಈ ವರದಿಯನ್ನು ಬಹಿರಂಗ ಪಡಿಸಿದೆ.

blank

1993ರಲ್ಲಿ ಕಾರ್ಮಿಕನಿಗೆ ಸಿಕ್ಕಿತ್ತು ಬುರುಡೆ
ಮಾನವನ ಹತ್ತಿರದ ಸಂಬಂಧಿ ಎಂದು ಘೋಷಣೆ

1993 ರಲ್ಲಿ ಈ ಡ್ರಾಗನ್ ಮ್ಯಾನ್ ನ ಬುರುಡೆ ಚೀನಾದ ಒಬ್ಬ ಕಾರ್ಮಿಕನಿಗೆ ಸಿಕ್ಕಿದೆ. ಅದನ್ನು ಸಂಶೋದಕರ ಕೈಗೆ ಒಪ್ಪಿಸದೆ ಅವನು ನೇರವಾಗಿ ತಮ್ಮ ಮನೆಯ ಬಾವಿಯಲ್ಲಿ ಹಾಕಿದ್ದನಂತೆ. ಅವನು ಸಾಯುವ ವೇಳೆಯಲ್ಲಿ ಅದನ್ನು ಮನೆಯವರಿಗೆ ತಿಳಿಸಿದ್ದಾನೆ. ಇದಾದ ಬಳಿಕ ಸಂಶೋಧಕರ ಅದರ ಮೇಲೆ ವರ್ಕ್ ಮಾಡಿದಾಗ, ಇದು ಮಾನವನ ಜನ್ಮದ ಹತ್ತಿರದ ಸಂಬಂಧಿ ಎಂದು ಘೋಷಿಸಿ ಬಿಟ್ಟಿದ್ದಾರೆ.

ದಪ್ಪ ದಪ್ಪ ಕಣ್ಣು, ಅಗಲವಾದ ಬಾಯಿ ಇರುವ ಡ್ರಾಗನ್ ಮ್ಯಾನ್
1,46,000 ವರ್ಷದ ಹಿಂದೆ ಡ್ರಾಗನ್ ಮ್ಯಾನ್ ಬದುಕಿದ್ನಾ?

ಡ್ರ್ಯಾಗನ್ ಮ್ಯಾನ್ ಗೆ ದೊಡ್ಡದಾದ, ಕಣ್ಣಿನ ಸಾಕೆಟ್‌ಗಳು, ದಪ್ಪ ಹುಬ್ಬು ರೇಖೆಗಳು, ಅಗಲವಾದ ಬಾಯಿ ಮತ್ತು ಗಾತ್ರದ ಹಲ್ಲುಗಳಿವೆ. ಮುಂದುವರೆದು ಸಂಶೋದನೆಯಿಂದ ಇದು 1 ಲಕ್ಷದ 46 ಸಾವಿರ ವರ್ಷಗಳ ಹಿಂದಿನ ಮಾನವ ಜಾತಿ ಎನ್ನುತ್ತಿದ್ದಾರೆ. ಇದುವರೆಗೆ ಪತ್ತೆಯಾದ ಅತ್ಯಂತ ಆರಂಭಿಕ ಮಾನವ ತಲೆಬುರುಡೆ ರೀತಿ ಇದು ಕಾಣಿಸುತ್ತಿದೆ ಎಂದು ಪ್ರೊಫೆಸರ್ ಕಿಯಾಂಗ್ ಜಿ ಹೇಳುತ್ತಿದ್ದಾರೆ. ಹಾಗಾದ್ರೆ ಆ ಕಾಲದಲ್ಲಿ ಡ್ರಾಗನ್ ಮ್ಯಾನ್ ಬದುಕಿದ್ನಾ ? ಅನ್ನೊ ಪ್ರಶ್ನೆ ಶುರುವಾಗಿದೆ. ಆದರೆ ಇದರ ವಿರುದ್ಧ ಹಲವು ವರದಿಗಳು ಕೇಳಿ ಬರ್ತಾ ಇದೆ. ಇದು ಹೊಸ ಜನಾಂಗಿಯವಲ್ಲ. ಈಗಿರುವ ಪ್ರಮುಖ ಪೂರ್ವಜರಲ್ಲೆ ಒಬ್ಬರು ಎನ್ನುತ್ತಿದ್ದಾರೆ ಸಂಶೋಧಕರು.
ಒಟ್ಟಿನಲ್ಲಿ, ಹೋಮೊ ಸೇಪಿಯನ್ಸ್ ವಿಕಾಸದ ಮುಂಚೆ ಅದೆಷ್ಟೊ ಸಂಬಂದಿಕರು ಬಂದಿರೋದಂತು ಸತ್ಯ. ಈಗ ಸಿಕ್ಕ ಹೊಸ ತಲೆ ಬುರುಡೆ, ಇರುವ ಸ್ಪೀಸೀಸ್ ಗೆ ಸೇರುತ್ತಾನೋ, ಅಥವಾ ಮುಂದಿನ ಸಂಶೋಧನೆಯಲ್ಲಿ ಇವನ ನಿಜವಾದ ಹುಟ್ಟು ಏನಾಗಿತ್ತು ಅನ್ನೋದು ಕಾದು ನೋಡಬೇಕಿದೆ.

ಮಾನವ ವಿಕಸನದಲ್ಲಿ ಹಲವು ಹೊಸ ಆವಿಷ್ಕಾರಗಳು ಬರ್ತಾನೆ ಇರ್ತಾವೆ. ಒಂದೊಂದು ಹೊಸ ಸಂಶೋಧನೆಯಲ್ಲಿ ಹೊಸ ಹೊಸ ವಿಚಾರಗಳು ತಿಳಿಸಿ ಜಗತ್ತಿಗೆ ಅಚ್ಚರಿ ಮೂಡಸ್ತಾನೆ ಇರ್ತಾವೆ. ಇದೀಗ ಡ್ರಾಗನ್ ಮ್ಯಾನ್ ಹೊಸ ಮಾನವ ಪ್ರಭೇದವಾಗಿ ಸಿಕ್ಕಿದ್ದಾನೆ, ಅವನ ಸಂಶೋಧನೆ ಹಿಂದೆ ಜಗತ್ತೇ ಬಿದ್ದಿದೆ.

The post ಮಂಗನಿಂದ ಮಾನವ ಅನ್ನೋ ವಾದವನ್ನೇ ಉಲ್ಟಾ ಮಾಡುತ್ತಿದೆ ಚೀನಾದಲ್ಲಿ ಸಿಕ್ಕ ತಲೆಬುರುಡೆ appeared first on News First Kannada.

Source: newsfirstlive.com

Source link