ಟ್ವಿಟರ್​​​ ಭಾರತೀಯ ಗ್ರಾಹಕರ ಕುಂದುಕೊರತೆ ಅಧಿಕಾರಿ ದಿಢೀರ್ ರಾಜೀನಾಮೆ

ಟ್ವಿಟರ್​​​ ಭಾರತೀಯ ಗ್ರಾಹಕರ ಕುಂದುಕೊರತೆ ಅಧಿಕಾರಿ ದಿಢೀರ್ ರಾಜೀನಾಮೆ

ನವದೆಹಲಿ: ದಿಢೀರ್‌ ಬೆಳವಣಿಗೆಯೊಂದರಲ್ಲಿ ಟ್ವಿಟರ್‌ ಸಂಸ್ಥೆಯಲ್ಲಿ ಭಾರತೀಯ ಗ್ರಾಹಕರ ಕುಂದು ಕೊರತೆ ನಿವಾರಣಾ ಅಧಿಕಾರಿಯಾಗಿ ಇತ್ತೀಚೆಗಷ್ಟೇ ನೇಮಕವಾಗಿದ್ದ ಧರ್ಮೇಂದ್ರ ಚತುರ್‌, ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಕೇಂದ್ರದ ಐಟಿ ನಿಯಮ ಪ್ರಕಾರ, ಭಾರತದಲ್ಲಿ ಕುಂದುಕೊರತೆ ನಿವಾರಣಾ ಅಧಿಕಾರಿಯನ್ನು ನೇಮಿಸುವುದು ಎಲ್ಲಾ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಕಡ್ಡಾಯವಾಗಿದೆ. ಹಾಗಾಗಿ, ಚತುರ್‌ರನ್ನ ಟ್ವಿಟರ್‌ ನೇಮಿಸಿಕೊಂಡಿತ್ತು. ಐಟಿ ನಿಯಮ ಪಾಲನೆ ಮಾಡದ ಟ್ವಿಟರ್‌ ಹಾಗೂ ಕೇಂದ್ರದ ನಡುವೆ ಕಾರ್ಮೋಡದ ವಾತಾವರಣ ಆವರಿಸಿರುವ ನಡುವೆಯೇ ಚತುರ್‌ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಲು ಟ್ವಿಟರ್‌ ನಿರಾಕರಿಸಿದೆ.

The post ಟ್ವಿಟರ್​​​ ಭಾರತೀಯ ಗ್ರಾಹಕರ ಕುಂದುಕೊರತೆ ಅಧಿಕಾರಿ ದಿಢೀರ್ ರಾಜೀನಾಮೆ appeared first on News First Kannada.

Source: newsfirstlive.com

Source link