ಚಾ.ನಗರ ಆಕ್ಸಿಜನ್ ದುರಂತ: ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಸಂತ್ರಸ್ತರಿಗೆ ಡಿಕೆಎಸ್​ ಸಾಂತ್ವನ, ಪರಿಹಾರ

ಚಾ.ನಗರ ಆಕ್ಸಿಜನ್ ದುರಂತ: ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಸಂತ್ರಸ್ತರಿಗೆ ಡಿಕೆಎಸ್​ ಸಾಂತ್ವನ, ಪರಿಹಾರ

ಚಾಮರಾಜನಗರ:  ಆಕ್ಸಿಜನ್ ದುರಂತ ಪ್ರಕರಣದ ಹಿನ್ನೆಲೆ ಕಳೆದ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​, ಮಧ್ಯರಾತ್ರಿಯಾದರೂ ಬಿಡದೆ ಸಂತ್ರಸ್ತ ಕುಟುಂಬಗಳನ್ನು ಖುದ್ದು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಆಕ್ಸಿಜನ್ ದುರಂತದಲ್ಲಿ ಮಡಿದವರ 36 ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಣೆ ಮಾಡಿದ್ದಾರೆ.

ಜಿಲ್ಲೆಯ ವಿವಿಧ ಗ್ರಾಮಗಳಿಗೆ ಧಾವಿಸಿ ಪ್ರತಿಯೊಂದು ಕುಟುಂಬವನ್ನು ಖುದ್ದಾಗಿ ಭೇಟಿ ಮಾಡಿ ಶಿವಕುಮಾರ್​ ಧೈರ್ಯ ತುಂಬಿದರು. ಚಾಮರಾಜನಗರ ತಾಲ್ಲೂಕಿನ ನಂಜೇದೇವನಪುರ, ದೇಶೀಗೌಡನಪುರ, ಗುಂಡ್ಲುಪೇಟೆ ತಾಲೂಕಿನ ಲಕ್ಕೂರು, ಯರಿಯೂರು ಪುತ್ತನಪುರ, ಗುಂಡ್ಲುಪೇಟೆ ಪಟ್ಟಣದಲ್ಲಿ ಮೃತರ ಮನೆಗಳಿಗೆ ನೇರವಾಗಿ ತೆರಳಿದ್ರು.

blank

ಮೃತಪಟ್ಟವರ ಮನೆಗಳಿಗೆ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಖುದ್ದಾಗಿ ಭೇಟಿ ನೀಡಲು ಆರಂಭಿಸಿದ ಡಿಕೆಎಸ್​, ನಿನ್ನೆ ಇಡೀ ದಿನ ಮಧ್ಯರಾತ್ರಿವರೆಗೂ ಬಿಡುವಿಲ್ಲದೆ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಪರಿಹಾರ ವಿತರಿಸಿದರು.

ನಿನ್ನೆ ಬೆಳಿಗ್ಗೆ 9 ಗಂಟೆಯಿಂದ ಹನೂರು ತಾಲೂಕಿನ ಗ್ರಾಮಗಳಿಂದ ಪ್ರವಾಸ ಆರಂಭಿಸಿ ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ, ಗುಂಡ್ಲುಪೇಟೆ ಈ ಐದೂ ತಾಲೋಕಿನ ವಿವಿಧ ಗ್ರಾಮಗಳಿಗೆ ತೆರಳಿ ಸಂತ್ರಸ್ಥ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಊಟ ಮುಗಿಸಿದ ಬಳಿಕ 2.30 ಕ್ಕೆ ಬೆಂಗಳೂರಿಗೆ ವಾಪಸ್ ತೆರಳಿದರು. ಸಮಯದ ಅಭಾವದಿಂದ ಉಳಿದ 7 ಕುಟುಂಬಗಳಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಮೂಲಕ ಪರಿಹಾರದ ಚೆಕ್ ಕಳುಹಿಸಿದರು.

The post ಚಾ.ನಗರ ಆಕ್ಸಿಜನ್ ದುರಂತ: ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಸಂತ್ರಸ್ತರಿಗೆ ಡಿಕೆಎಸ್​ ಸಾಂತ್ವನ, ಪರಿಹಾರ appeared first on News First Kannada.

Source: newsfirstlive.com

Source link