ಡೆಲ್ಟಾ ಪ್ಲಸ್ ಬಗ್ಗೆ ಎಚ್ಚರ ವಹಿಸಿ: ಕರ್ನಾಟಕ ಸೇರಿ 8 ರಾಜ್ಯಗಳಿಗೆ ಕೇಂದ್ರದಿಂದ ಪತ್ರ

ಡೆಲ್ಟಾ ಪ್ಲಸ್ ಬಗ್ಗೆ ಎಚ್ಚರ ವಹಿಸಿ: ಕರ್ನಾಟಕ ಸೇರಿ 8 ರಾಜ್ಯಗಳಿಗೆ ಕೇಂದ್ರದಿಂದ ಪತ್ರ

ಬೆಂಗಳೂರು: ಶ್ವಾಸಕೋಶಕ್ಕೆ ಹಾನಿ ಮಾಡುವ ರೂಪಾಂತರಿ ಕೊರೊನಾ ತಳಿ ಡೆಲ್ಟಾ ಪ್ಲಸ್​  ಬಗ್ಗೆ  ಆತಂಕ ಹೆಚ್ಚಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ 8 ರಾಜ್ಯಗಳಿಗೆ ಪತ್ರ ಬರೆದು ಎಚ್ಚರಿಸಿದೆ. ಅದರಲ್ಲಿ ಕರ್ನಾಟಕ ಕೂಡ ಒಂದು.

ರಾಜ್ಯದ ಗಡಿ ಭಾಗಗಳಲ್ಲಿ ಭದ್ರತೆ ಬಗ್ಗೆ ಕಟ್ಟೆಚ್ಚರ ವಹಿಸಬೇಕು. ತುರ್ತು ನಿಗಾ ಇಡಬೇಕು. ರಾಜ್ಯಕ್ಕೆ ಎಂಟ್ರಿಯಾಗಬೇಕಾದರೆ ಕೊರೊನಾ ನೆಗಟಿವ್ ರಿಪೋರ್ಟ್​ ಕಡ್ಡಾಯಗೊಳಿಸಬೇಕು ಎಂದು ಆದೇಶಿಸಲಾಗಿದೆ.

ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದು ಡೆಲ್ಟಾ ಪ್ಲಸ್​ ರೂಪಾಂತರಿ ವೈರಸ್ ದೃಢತೆಗಾಗಿ 500 ಸ್ಯಾಂಪಲ್​​​ಗಳನ್ನ ಪರೀಕ್ಷೆಗಾಗಿ ಲ್ಯಾಬ್​​ಗೆ ಕಳಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಸ್ಯಾಂಪಲ್ಸ್ ರಿಸಲ್ಟ್ ಬರಲಿದೆ.  ಆರೋಗ್ಯ ಇಲಾಖೆಯ ಹೆಲ್ತ್ ಸೆಕ್ರೆಟರಿ ಕೂಡ ಪತ್ರ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.

ಡೆಲ್ಟಾ ಪ್ಲಸ್​ ಶ್ವಾಸಕೋಶಕ್ಕೆ ಹಾನಿ ಉಂಟುಮಾಡುತ್ತೆ ಎಂದು ಪತ್ರ ಬರೆದಿದ್ದಾರೆ. ಇದು ಅತಿವೇಗವಾಗಿ ಹರಡುವ ರೂಪಾಂತರಿ ವೈರಸ್. ಈ ವೈರಸ್ ಹರಡದಂತೆ ಸರ್ಕಾರ ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡಿದೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಎರಡೇ ಪ್ರಕರಣ ದಾಖಲಾಗಿದ್ರೂ, ನಮ್ಮನ್ನು ಸೇರಿಸಿ ಪತ್ರ ಬರೆದಿದ್ದಾರೆ. ಇದಕ್ಕೆ ಅನೇಕ ಕಾರಣಗಳಿದ್ದಾವೆ. ನಾನು ಈಗಲೇ ಹೇಳಿ ಜನರನ್ನು ಭಯಪಡಿಸೋದಿಲ್ಲ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ರೋಗ ಹರಡದಂತೆ ತಡೆಯಬೇಕು ಎಂದಿದ್ದಾರೆ.

ಇನ್ನು ಶಾಲೆ ಆರಂಭದ ಬಗ್ಗೆ ಇಂದು ಮಹತ್ವದ ನಿರ್ಧಾರ ಹೊರಬೀಳಲಿದ್ದು, ಅದರ ಬಗ್ಗೆ ಸುಧಾಕರ್ ಆತಂಕ ವ್ಯಕ್ತಪಡಿಸಿದರು. ನನ್ನ ಜೊತೆ ಶಿಕ್ಷಣ ಸಚಿವರು ಚರ್ಚೆ ಮಾಡಿಲ್ಲ. ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚಿಸಿ ನಾನು ಶಿಕ್ಷಣ ಸಚಿವರ ಜತೆ ಮಾತನಾಡುತ್ತೇನೆ. ಆತುರದ ಹೆಜ್ಜೆ ಇಟ್ಟರೆ ಜನ ನಮ್ಮನ್ನು ಕ್ಷಮಿಸುವುದಿಲ್ಲ. ಬಹಳ ಎಚ್ಚರಿಕೆಯ ಹೆಜ್ಜೆ ಇರಿಸಬೇಕು ಎಂದು ಹೇಳಿದ್ರು.

The post ಡೆಲ್ಟಾ ಪ್ಲಸ್ ಬಗ್ಗೆ ಎಚ್ಚರ ವಹಿಸಿ: ಕರ್ನಾಟಕ ಸೇರಿ 8 ರಾಜ್ಯಗಳಿಗೆ ಕೇಂದ್ರದಿಂದ ಪತ್ರ appeared first on News First Kannada.

Source: newsfirstlive.com

Source link