’30 ವರ್ಷದ ಮಹಿಳೆ, ಶಾರ್ಟ್​​ ಹೇರ್.. ಆಸ್ತಿ ಇರೋ, ಅಡುಗೆ ಮಾಡೋ ವರ ಬೇಕಾಗಿದ್ದಾನೆ’

’30 ವರ್ಷದ ಮಹಿಳೆ, ಶಾರ್ಟ್​​ ಹೇರ್.. ಆಸ್ತಿ ಇರೋ, ಅಡುಗೆ ಮಾಡೋ ವರ ಬೇಕಾಗಿದ್ದಾನೆ’

‘ಸ್ತ್ರೀ ಸಮಾನತಾವಾದಿ, ಶಾರ್ಟ್​ ಹೇರ್​​, ವಿದ್ಯಾವಂತೆ, ಕ್ಯಾಪಿಟಲಿಸಂ ವಿರೋಧಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 30 ವರ್ಷದ ಮಹಿಳೆಗೆ.. ಸುಂದರವಾದ, ಉತ್ತಮ ದೇಹ ಹೊಂದಿರುವ 25-28 ವರ್ಷದ ವರ ಬೇಕಾಗಿದ್ದಾನೆ. ವ್ಯಾಪಾರ, ಬಂಗಲೆ, ಕನಿಷ್ಠ 20 ಎಕರೆ ಫಾರ್ಮ್​ ಹೌಸ್​ ಇರೋ ಏಕೈಕ ಪುತ್ರನಾಗಿರೋ ಯುವಕನಾಗಿರಬೇಕು. ಆತನಿಗೆ ಅಡುಗೆ ಮಾಡುವುದು ಬರಬೇಕು. ಆಸ್ತಕಿ ಹೊಂದಿರುವವರು ಸಂಪರ್ಕಿಸಿ’. ಇದು ಪತ್ರಿಕೆಯೊಂದರಲ್ಲಿ ವಧು-ವರ ಬೇಕಾಗಿದ್ದಾರೆ ಕಾಲಂ ನಲ್ಲಿ ಪ್ರಕಟವಾಗಿರುವ ಜಾಹೀರಾತು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಒಬ್ಬ ಸ್ತ್ರೀ ಸಮಾನತಾವಾದಿ ಇಂತಹ ವಿಶೇಷ ಜಾಹೀರಾತು ನೀಡಿದ್ದು, ಭಾರತದಲ್ಲೇ ಅತಿ ಹೆಚ್ಚು ಮಾರಾಟವಾಗುವ ವಾರ ಪತ್ರಿಕೆಯಲ್ಲಿ ಈ ಜಾಹೀರಾತು ಪ್ರಕಟಗೊಂಡಿದೆ. ಈ ಜಾಹೀರಾತಿನ ಫೋಟೋವನ್ನ ಹಲವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಖ್ಯಾತ ಸ್ಟ್ಯಾಂಡ್​ ಅಪ್ ಕಾಮಿಡಿಯನ್ ಅದಿತಿ ಮಿತ್ತಲ್​​, ನನಗಾಗಿಯೇ ಯಾರಾದರೂ ಈ ಜಾಹೀರಾತು ನೀಡಿದ್ದಾರಾ..? ಎಂದು ನಗೆ ಚೆಲ್ಲಿ ಟ್ವೀಟ್​ ಮಾಡಿದ್ದಾರೆ.

ಕೆಲವರು ಈ  ಜಾಹೀರಾತಿನ ಹಿಂದಿರುವ ವ್ಯಂಗವನ್ನ ಅರ್ಥ ಮಾಡಿಕೊಳ್ಳದೆ, ಇದು ಟಾಕ್ಸಿಕ್ ಅಂತ ಖಂಡಿಸಿದ್ದಾರೆ. ಇನ್ನೂ ಕೆಲವರು ಇದು ನಿಜವಾದ ಜಾಹೀರಾತಾ ಅಥವಾ ಯಾರಾದರೂ ಹಾಸ್ಯ ಮಾಡಲು ಇಂತಹ ಪ್ರಕಟಣೆ ನೀಡಿದ್ದಾರಾ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆಗಿದ್ದೇನಂದ್ರೆ, ಸಹೋದರಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಹೋದರ ಆಕೆಯ ಸ್ನೇಹಿತರೊಂದಿಗೆ ಸೇರಿ ಈ ವ್ಯಂಗ್ಯ ಜಾಹೀರಾತು ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಜಾಹೀರಾತು ನೀಡಲು 13 ಸಾವಿರ ರೂಪಾಯಿ ಖರ್ಚು ಮಾಡಿದ್ದಾಗಿ ಮಾಧ್ಯಮವೊಂದಕ್ಕೆ ಯುವತಿಯ ಸಹೋದರ ಮಾಹಿತಿ ನೀಡಿದ್ದಾರೆ.

The post ’30 ವರ್ಷದ ಮಹಿಳೆ, ಶಾರ್ಟ್​​ ಹೇರ್.. ಆಸ್ತಿ ಇರೋ, ಅಡುಗೆ ಮಾಡೋ ವರ ಬೇಕಾಗಿದ್ದಾನೆ’ appeared first on News First Kannada.

Source: newsfirstlive.com

Source link