ಇಂಗ್ಲೆಂಡ್​ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಸುತ್ತಾಟ- ಪತ್ನಿಯೊಂದಿಗೆ ಮಯಾಂಕ್​ ಡೇ ಔಟ್

ಇಂಗ್ಲೆಂಡ್​ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಸುತ್ತಾಟ- ಪತ್ನಿಯೊಂದಿಗೆ ಮಯಾಂಕ್​ ಡೇ ಔಟ್

ಟೀಂ​​ ಇಂಡಿಯಾ ಎ ತಂಡ ಇಂಗ್ಲೆಂಡ್​​ನಲ್ಲಿ ಬೀಡು ಬಿಟ್ಟಿದ್ರೆ, ಬಿ ತಂಡ ಮುಂಬೈನ ಗ್ರಾಂಡ್​ ಹಯಾತ್​​ ಹೋಟೆಲ್​ನಲ್ಲಿ ಕ್ವಾರಂಟೀನ್​ಗೆ ಒಳಗಾಗಿದೆ. ಇನ್ನು ವನಿತೆಯರ ತಂಡ ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯುಸಿಯಾಗಿದೆ. ಆದರೆ ಆಫ್​​ ದ ಫೀಲ್ಡ್​​ನಲ್ಲಿ ಕ್ರಿಕೆಟರ್ಸ್​ ಏನ್ಮಾಡ್ತಿದ್ದಾರೆ. ಇಲ್ಲಿದೆ ನೋಡಿ ​ರೌಂಡಪ್ ಸ್ಟೋರಿ​.

ಅಪಾರ ನಿರೀಕ್ಷೆಗಳನ್ನಿಟ್ಟುಕೊಂಡು ಇಂಗ್ಲೆಂಡ್​​ ಫ್ಲೈಟ್​​ ಹತ್ತಿದ್ದ ಟೀಮ್​ ಇಂಡಿಯಾ ಮೊದಲ ಟೆಸ್ಟ್​ ಚಾಂಪಿಯನ್​ಶಿಪ್​ ಅಗ್ನಿಪರೀಕ್ಷೆಯಲ್ಲೇ ಎಡವಿದೆ. ಸೋಲಿನ ಬಳಿಕ ಇಷ್ಟು ದಿನ ಆತ್ಮವಲೋಕನಕ್ಕೆ ಇಳಿದಿದ್ದ ಇಡೀ ತಂಡ ನಿಧಾನವಾಗಿ ರಿಲ್ಯಾಕ್ಸ್​ ಮೂಡ್​ಗೆ ಜಾರುತ್ತಿದೆ. ಸೋಲಿನ ಪರಾಮರ್ಶೆಯೊಂದಿಗೆ ಆಟಗಾರರಿಗೆ ಮೆಂಟಲ್​ ರಿಲ್ಯಾಕ್ಸೇಷನ್​ ಕೂಡ ಅಷ್ಟೇ ಮುಖ್ಯ. ಹೀಗಾಗಿಯೇ ಟೀಮ್​ ಮ್ಯಾನೇಜ್​ಮೆಂಟ್​​ ಆಟಗಾರರಿಗೆ ಸುತ್ತಾಟಕ್ಕೆ ಅನುಮತಿ ನೀಡಿದೆ.

blankಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೂ ಮುನ್ನವೇ ಕೆಎಲ್​ ರಾಹುಲ್​, ಮಯಾಂಕ್​ ಅಗರ್​ವಾಲ್, ವಾಷಿಂಗ್ಟನ್​ ಸುಂದರ್​, ಅಕ್ಷರ್​ ಪಟೇಲ್​ ಹಾಗೂ ಶಾರ್ದೂಲ್​ ಠಾಕೂರ್​ಗೆ ಬಯೋ ಬಬಲ್​ನಿಂದ ಹೊರಗೆ ತೆರಳಲು ಅವಕಾಶ ನೀಡಲಾಗಿತ್ತು. ಇದೀಗ ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​ ಸರಣಿ ಆರಂಭಕ್ಕೆ ಇನ್ನೂ 6 ವಾರಗಳ ಅಂತರವಿರೋದ್ರಿಂದ ಉಳಿದ ಆಟಗಾರರಿಗೂ ಓಡಾಟಕ್ಕೆ ಅನುಮತಿ ನೀಡಲಾಗಿದೆ.

ಮಗಳೊಂದಿಗೆ ಮಸ್ತಿ, ರಿಲ್ಯಾಕ್ಸ್​​ ಮೂಡ್​ಗೆ ಜಾರಿದ ರೋಹಿತ್
ಪತ್ನಿಯೊಂದಿಗೆ ಮಯಾಂಕ್ ಅಗರ್​​ವಾಲ್​​ ಸುತ್ತಾಟ

ಈ ಅವಕಾಶ ಬಳಸಿಕೊಂಡಿರುವ ರೋಹಿತ್​ ಶರ್ಮಾ, ತಮ್ಮ ಮಗಳು ಹಾಗೂ ಪತ್ನಿಯೊಂದಿಗೆ ಕಾಲ ಕಳೆದಿದ್ದಾರೆ. ಇನ್ನು ಕನ್ನಡಿಗ ಮಯಾಂಕ್​ ಅಗರ್​ವಾಲ್​ ಕೂಡ ತಮ್ಮ ಪತ್ನಿಯೊಂದಿಗೆ ಬ್ರೈಟನ್​ನಲ್ಲಿ ಸುತ್ತಾಟ ನಡೆಸಿದ್ದಾರೆ. ಮೊದಲ ಇಂಗ್ಲೆಂಡ್​ ಪ್ರವಾಸದಲ್ಲಿರುವ ಶಾರ್ದೂಲ್​ ಠಾಕೂರ್​, ವಾಷಿಂಗ್ಟನ್​ ಸುಂದರ್​, ಅಕ್ಷರ್​ ಪಟೇಲ್​ ಕೂಡ ಲಂಡನ್​ನ ಪ್ರಮುಖ ಸ್ಥಳಗಳಲ್ಲಿ ಸುತ್ತಾಡಿದ್ದಾರೆ.

ಇವರಂತೆ ಸುತ್ತಾಟದಲ್ಲೇ ಇನ್ನೊರ್ವ ಕನ್ನಡಿಗ ಕೆಎಲ್​ ರಾಹುಲ್​ ಕೂಡ ಬ್ಯುಸಿಯಾಗಿದ್ದಾರೆ. ಆದ್ರೆ, ಸುತ್ತಾಟದ ಜೊತೆಗೆ ಜಿಮ್​ನಲ್ಲೂ ಬೆವರು ಸುರಿಸ್ತಾ ಇರೋ ಕೆಎಲ್​, ಫಿಟ್​​ನೆಸ್​​​ಗೂ ಒತ್ತು ನೀಡ್ತಿದ್ದಾರೆ.

ಬ್ರಿಸ್ಟೋಲ್​ನಲ್ಲಿ ವನಿತೆಯರ ತಂಡದ ಡೇ ಔಟಿಂಗ್​​
ಮೆನ್ಸ್​ ಟೀಮ್​ ಮಾತ್ರವಲ್ಲ.. ಸದ್ಯ ಏಕದಿನ ಸರಣಿಯಲ್ಲಿ ಬ್ಯುಸಿಯಾಗಿರುವ ಟೀಮ್​ಇಂಡಿಯಾ ವನಿತೆಯರ ಬಳಗವೂ ಟೆಸ್ಟ್​ ಪಂದ್ಯದ ಮುಕ್ತಾಯದ ಬಳಿಕ ಒನ್​ ಡೇ ಔಟಿಂಗ್​ಗೆ ತೆರಳಿತ್ತು. ಮಹಿಳಾ ತಂಡ ಬ್ರಿಸ್ಟೋಲ್​​ ನಗರ ಪ್ರದಕ್ಷಿಣೆ ಹಾಕಿದ ವಿಡಿಯೋವನ್ನ ಸ್ವತಃ ಬಿಸಿಸಿಐ ಇದೀಗ ಪ್ರಕಟಿಸಿದೆ.

ಜಿಮ್​ನಲ್ಲಿ ಬೆವರಿಳಿಸಿದ ಶಿಖರ್​ ಧವನ್​ ಪಡೆ​​
ಒಂದೆಡೆ ಕೊಹ್ಲಿ ನೇತೃತ್ವದ ಟೀಮ್​ಇಂಡಿಯಾ ಹಾಗೂ ವನಿತೆಯರ ತಂಡ ಇಂಗ್ಲೆಂಡ್​​ನಲ್ಲಿ ಸುತ್ತಾಟ ನಡೆಸ್ತಾ ಇದ್ರೆ, ಮುಂಬೈನಲ್ಲಿ ಬೀಡು ಬಿಟ್ಟಿರುವ ಶಿಖರ್​ ಧವನ್​ ನೇತೃತ್ವದ ತಂಡ ಫಿಟ್​ನೆಸ್​ನಲ್ಲಿ ಬ್ಯುಸಿಯಾಗಿದೆ.

ಇಷ್ಟು ದಿನ ಮುಂಬೈನ ಗ್ರ್ಯಾಂಡ್​​ ಹಯಾತ್​ ಹೋಟೆಲ್​ನಲ್ಲಿ ಕ್ವಾರಂಟೀನ್​ಗೆ ಒಳಗಾಗಿದ್ದ ಧವನ್​ ಪಡೆ, ಬಾಡಿ ಫಿಟ್​​ನೆಸ್​​ ಕಾಯ್ದುಕೊಳ್ಳುವತ್ತ ಗಮನಹರಿಸಿತ್ತು. ಬಹುತೇಕ ಯುವ ಆಟಗಾರರನ್ನೇ ಒಳಗೊಂಡ ತಂಡ ಜಿಮ್​ನಲ್ಲಿಯೇ ಹೆಚ್ಚು ಕಾಲಕಳೆದಿತ್ತು. ಇಂದಿಗೆ ಧವನ್​ ನೇತೃತ್ವದ ತಂಡ ಕ್ವಾರಂಟೀನ್​ ಅವಧಿ ಮುಗಿಯಲಿದ್ದು, ಇಡೀ ತಂಡ ಇಂದು ಶ್ರೀಲಂಕಾಕ್ಕೆ ತೆರಳಲಿದೆ.

ಟೆಸ್ಟ್​​ ಸರಣಿ ಸೋಲಿನ ಬಳಿಕ ಕೊಹ್ಲಿ ಪಡೆ ರಿಲ್ಯಾಕ್ಸ್​ ಮೂಡ್​ಗೆ ಜಾರಿದ್ರೆ, ಅಗ್ನಿ ಪರೀಕ್ಷೆಗೆ ಸಿದ್ಧವಾಗಿರುವ ಶಿಖರ್​ ಧವನ್​ ನೇತೃತ್ವದ ಪಡೆ ಲಂಕಾ ಸರಣಿಗೆ ಭರ್ಜರಿ ತಯಾರಿ ನಡೆಸಿದೆ. ನ್ಯೂಜಿಲೆಂಡ್​​ ವಿರುದ್ಧದ ಸೋಲಿನಿಂದ ನಿರಾಶರಾಗಿರುವ ಅಭಿಮಾನಿಗಳು ಕೂಡ ಲಂಕಾ ಸರಣಿಯಲ್ಲಿ ಗೆಲುವಿನ ಸಿಹಿ ಸಿಗುತ್ತಾ ಅನ್ನೋ ನಿರೀಕ್ಷೆಯಲ್ಲಿದ್ದಾರೆ.

 

View this post on Instagram

 

A post shared by Shikhar Dhawan (@shikhardofficial)

The post ಇಂಗ್ಲೆಂಡ್​ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಸುತ್ತಾಟ- ಪತ್ನಿಯೊಂದಿಗೆ ಮಯಾಂಕ್​ ಡೇ ಔಟ್ appeared first on News First Kannada.

Source: newsfirstlive.com

Source link