ದೇಶದಲ್ಲಿಂದು 46,148 ಜನರಿಗೆ ಕೊರೊನಾ.. ರಿಕವರಿ ರೇಟ್ 96.80%

ದೇಶದಲ್ಲಿಂದು 46,148 ಜನರಿಗೆ ಕೊರೊನಾ.. ರಿಕವರಿ ರೇಟ್ 96.80%

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 46,148 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇಂದಿನ ಪ್ರಕರಣಗಳು ಸೇರಿ ದೇಶದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 3,02,79,331ಕ್ಕೆ ತಲುಪಿದೆ.

ಇಂದು 58,578 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,93,09,607ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 979 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಇದುವರೆಗೆ ಒಟ್ಟಾರೆ 3,96,730 ಮಂದಿ ಕೋವಿಡ್​ಗೆ ಬಲಿಯಾದಂತಾಗಿದೆ. ಸದ್ಯ ದೇಶದಲ್ಲಿ ರಿಕವರಿ ರೇಟ್​(ಸೋಂಕಿತರು ಗುಣಮುಖರಾಗ್ತಿರುವ ಪ್ರಮಾಣ) ಶೇಕಡ 96.80 ಇದೆ. 

ಕೊರೊನಾ ಅಂಕಿ-ಅಂಶಗಳು
ಒಟ್ಟು ಸೋಂಕಿತರು: 3,02,79,331
ಒಟ್ಟು ಡಿಸ್ಚಾರ್ಜ್ ಆದವರು: 2,93,09,607
ಒಟ್ಟು ಸಾವುಗಳು: 3,96,730
ಒಟ್ಟು ಆ್ಯಕ್ಟಿವ್ ಕೇಸ್​​ಗಳು: 5,72,994
ಈವರಗೆ ವ್ಯಾಕ್ಸಿನ್ ಪಡೆದವರು: 31.50 ಕೋಟಿ

 

The post ದೇಶದಲ್ಲಿಂದು 46,148 ಜನರಿಗೆ ಕೊರೊನಾ.. ರಿಕವರಿ ರೇಟ್ 96.80% appeared first on News First Kannada.

Source: newsfirstlive.com

Source link