ಇಂಗ್ಲೆಂಡ್​ ವಿರುದ್ಧ ಭಾರತ ಗೆದ್ದೇ ಗೆಲ್ಲುತ್ತೆ ಅಂದಿದ್ಯಾಕೆ ಲೆಜೆಂಡ್ಸ್​​? ಭಾರತದ ಕ್ಯಾಂಪ್​ನಲ್ಲಿ ಆಶಾಕಿರಣ

ಇಂಗ್ಲೆಂಡ್​ ವಿರುದ್ಧ ಭಾರತ ಗೆದ್ದೇ ಗೆಲ್ಲುತ್ತೆ ಅಂದಿದ್ಯಾಕೆ ಲೆಜೆಂಡ್ಸ್​​? ಭಾರತದ ಕ್ಯಾಂಪ್​ನಲ್ಲಿ ಆಶಾಕಿರಣ

ವಿಶ್ವ ಟೆಸ್ಟ್​​ ಚಾಂಪಿಯನ್​​ಶಿಪ್​ ನಂತ್ರ ಹೆಚ್ಚು ಚರ್ಚೆಯಾಗ್ತಿರೋ ವಿಷ್ಯ ಅಂದ್ರೆ ಅದು ಇಂಗ್ಲೆಂಡ್ ವಿರುದ್ಧದ ಸರಣಿ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲೇ ಮುಗ್ಗರಿಸಿರುವ ಟೀಮ್​ ಇಂಡಿಯಾ, ಅವರದ್ದೇ ನೆಲದಲ್ಲಿ ಇಂಗ್ಲೆಂಡ್​ ವಿರುದ್ಧ ಗೆಲ್ಲುತ್ತಾ ಅನ್ನೋ ಪ್ರಶ್ನೆ ಸಹಜವಾಗೇ ಎಲ್ಲರಲ್ಲೂ ಮೂಡಿದೆ. ಈ ಇಬ್ಬರು ದಿಗ್ಗಜರು ನೀಡಿರುವ ಹೇಳಿಕೆಗಳು​​, ಟೀಮ್​ ಇಂಡಿಯಾ ಕ್ಯಾಂಪ್​​​​​ನಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಬಹುನಿರೀಕ್ಷಿತ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​​ ಸದ್ಯ ಮುಗಿದ ಅಧ್ಯಾಯ​​. ನ್ಯೂಜಿಲೆಂಡ್​ನ ಆಲ್​​ರೌಂಡ್​ ಆಟಕ್ಕೆ ಶರಣಾದ ಟೀಮ್​ ಇಂಡಿಯಾದ ಗಮನ ಈಗ ಸಂಪೂರ್ಣವಾಗಿ ಇಂಗ್ಲೆಂಡ್​ ಟೆಸ್ಟ್ ಸರಣಿಯತ್ತ ನೆಟ್ಟಿದೆ. ಇದರ ಜೊತೆಗೆ ಆಂಗ್ಲರನ್ನ ಮಣಿಸೋಕೆ ಪಕ್ಕಾ ಗೇಮ್​ ಪ್ಲಾನ್, ಟೆಕ್ನಿಕ್​​​ಗಳನ್ನ ರೂಪಿಸಿಕೊಂಡು ಕಣಕ್ಕಿಳಿಯೋಕೆ ಮುಂದಾಗಿದೆ.

blankಇದೀಗ ಇಂಗ್ಲೆಂಡ್​​ ವಿರುದ್ಧದ ಸರಣಿಯಲ್ಲಿ ಯಾರು ಗೆಲ್ತಾರೆ ಅನ್ನೋ ಪ್ರಶ್ನೆ ಹುಟ್ಟಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​​​ ಸೋತ ಭಾರತ, ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲೂ ಸೋಲುತ್ತೆ, ಅಲ್ಲಿನ ಪಿಚ್-ಕಂಡಿಷನ್​ ಭಾರತ ತಂಡಕ್ಕೆ ವ್ಯತಿರಿಕ್ತವಾಗಿದೆ ಅನ್ನೋ ವಾದಗಳ ನಡುವೆಯೇ ಭಾರತವೇ ಗೆಲ್ಲುತ್ತೆ ಎಂಬ ಪಾಸಿಟಿವ್​ ಮಾತುಗಳು ಕೇಳಿಬಂದಿವೆ.

ಹೌದು. ಇಂಗ್ಲೆಂಡ್ ವಿರುದ್ಧದ ಟೆಸ್ಟ್​​​​ ಸರಣಿಯಲ್ಲಿ ಭಾರತವೇ ಗೆಲ್ಲೋ ಫೇವರಿಟ್​ ಅಂತಿದ್ದಾರೆ ಕ್ರಿಕೆಟ್​​​ ದಿಗ್ಗಜರು. ಕಳೆದ ಫೆಬ್ರವರಿ-ಮಾರ್ಚ್​​ನಲ್ಲಿ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನಾಡಿದ್ದ ಭಾರತ 3-1 ಅಂತರದಿಂದ ಗೆದ್ದಿತ್ತು. ಆದರೆ ಇಂಗ್ಲೆಂಡ್​ ವಿರುದ್ಧ ಅವರದ್ದೇ ಪಿಚ್​​​​ನಲ್ಲಿ ಭಾರತ ಗೆಲ್ಲುತ್ತೆ ಅಂದ್ರೆ ಅದು ಸುಲಭದ ಮಾತಲ್ಲ. ಪಿಚ್​, ವಾತಾವರಣ ಎಲ್ಲವೂ ಟೀಮ್​ ಇಂಡಿಯಾಕ್ಕೆ ಡೆಡ್​​ ಆಪೋಸಿಟ್​​. ಈ ಕಾರಣದಿಂದಲೇ ವಿರಾಟ್​ ಪಡೆ ಗೆಲ್ಲೋದು ಕಷ್ಟ ಅಂತಾ ಹಲವರು ಅಭಿಪ್ರಾಯಪಡ್ತಿರೋದು. ಆದರೆ ಫೈನಲ್​ ಪಂದ್ಯದ ಸೋಲಿನ ಬಳಿಕವೂ ಭಾರತವೇ ಗೆಲ್ಲೋ ಫೇವರಿಟ್​ ಅಂತಿರೋದು, ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

blankಆಂಗ್ಲರ ವಿರುದ್ಧ ಭಾರತ ಗೆಲ್ಲುತ್ತೆ ಅಂತಿದ್ದಾರೆ ದಿಗ್ಗಜರು.!
ಕಳೆದ ಬಾರಿ ಇಂಗ್ಲೆಂಡ್​ನಲ್ಲಿ ಆಯೋಜಿಸಿದ್ದ ಟೆಸ್ಟ್​​​ ಸರಣಿಯಲ್ಲಿ, 4-1ರ ಅಂತರದಲ್ಲಿ ಭಾರತ ಸೋತಿತ್ತು. ಈಗ ಮತ್ತೆ ಇಂಗ್ಲೆಂಡ್​​ನಲ್ಲಿ ಸರಣಿ ಆಯೋಜನೆಯಾಗ್ತಿದೆ. ಇದರ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಕೂಡ ಇಂಗ್ಲೆಂಡ್​​ನಲ್ಲೇ ನಡೆದಿದೆ. ಈ ಹಿಂದಿನ ಸರಣಿ ಮತ್ತು ಫೈನಲ್​ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಇವೆಲ್ಲದರ ಹೊರತಾಗಿಯೂ ಭಾರತ ಗೆಲ್ಲುತ್ತೆ ಅಂತ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಹಾಗೆಯೇ ಇಂಗ್ಲೆಂಡ್​ನ ಮಾಜಿ ನಾಯಕ ಮೈಕಲ್​ ವಾನ್​ ಕೂಡ, ಭಾರತಕ್ಕೇ ವೋಟ್​ ಹಾಕಿದ್ದಾರೆ.

ಭಾರತಕ್ಕಿದು ಗೋಲ್ಡನ್​ ಚಾನ್ಸ್​ ಎಂದ ಗವಾಸ್ಕರ್
ಪ್ರಸ್ತುತ ಇಂಗ್ಲೆಂಡ್​​ನಲ್ಲಿ ಮಳೆಗಾಲ. ಸರಣಿ ಆರಂಭಕ್ಕೆ ಇನ್ನೂ ಒಂದು ತಿಂಗಳ ಕಾಲ ಗ್ಯಾಪ್​ ಇದೆ. ಟೀಮ್​ ಇಂಡಿಯಾ ಪೂರ್ವ ಸಿದ್ಧತೆ ಮಾಡಿಕೊಳ್ಳೋದಕ್ಕೂ ಇದು ಬೆಸ್ಟ್​ ಟೈಮ್​​. ಇದರ ಜೊತೆಗೆ ಆಗಸ್ಟ್​​ನಿಂದ ಬೇಸಿಗೆ ಶುರುವಾಗ್ತಿರೋದು ಭಾರತಕ್ಕೆ ಗೋಲ್ಡನ್​ ಸಮ್ಮರ್​ ಎಂದೇ ಹೇಳಲಾಗ್ತಿದೆ. ಗವಾಸ್ಕರ್​ ಕೂಡ ಇದೇ ಮಾತನ್ನೇ ಉಲ್ಲೇಖಿಸಿದ್ದಾರೆ. ಬೇಸಿಗೆ ಅವಧಿಯಲ್ಲಿ ಟೀಮ್​ ಇಂಡಿಯಾ ಬ್ಯಾಟ್ಸ್​​​ಮ್ಯಾನ್​​ಗಳು ಘರ್ಜಿಸೋದು ಪಕ್ಕಾ. ಭಾರತಕ್ಕೆ ಇದು ಗೋಲ್ಡನ್​ ಚಾನ್ಸ್​ ಅಂತ ಗವಾಸ್ಕರ್ ಹೇಳಿದ್ದಾರೆ. ಹಾಗೆಯೇ ಬೇಸಿಗೆಯಲ್ಲಿ ಇಂಗ್ಲೆಂಡ್​ ಬೌಲರ್​​ಗಳ ಆಟ ಹೇಗಿರಲಿದೆ ಅನ್ನೋದನ್ನ ಕೂಡ ಬಹಿರಂಗಪಡಿಸಿದ್ದಾರೆ.

‘ಇಂಗ್ಲೆಂಡ್​ ಬೌಲರ್​​ಗಳ ಪ್ರದರ್ಶನ ಅಷ್ಟಕಷ್ಟೆ’

‘ಆಗಸ್ಟ್​-ಸೆಪ್ಟೆಂಬರ್​​​ ಅವಧಿಯಲ್ಲಿ ಇಂಗ್ಲೆಂಡ್​ ಎದುರಿನ ಸರಣಿ ಬಗ್ಗೆ ಟೀಮ್​ ಇಂಡಿಯಾ ಆಟಗಾರರು ಚಿಂತಿಸಬೇಕಾಗಿಲ್ಲ.​ ಏಕೆಂದರೆ ಬೇಸಿಗೆ ಆರಂಭವಾಗಿರುತ್ತೆ. ಹೀಗಾಗಿ ಪಿಚ್​​​​​ಗಳು ಸಂಪೂರ್ಣ ಒಣಗಿರುತ್ತವೆ. ಜೊತೆಗೆ ಇಂಗ್ಲೆಂಡ್​​ ಬೌಲರ್​​ಗಳ ಪ್ರದರ್ಶನ ಕೂಡ ಅಷ್ಟಕಷ್ಟೆಯಾಗಿರುತ್ತೆ. ಅದರಲ್ಲೂ ಜೇಮ್ಸ್​ ಆ್ಯಂಡರ್​​ಸನ್​ ಮತ್ತು ಸ್ಟುವರ್ಟ್​​​ ಬ್ರಾಡ್​​ ಮೊದಲ ಸ್ಪೆಲ್​​​ನಲ್ಲಿ ವಿಕೆಟ್​ ಪಡೆಯದಿದ್ದರೆ, ತಮ್ಮ ಮುಂದಿನ ಸ್ಪೆಲ್​​​ಗಳಲ್ಲಿ ವಿಕೆಟ್​​ಗಾಗಿ ಹೋರಾಡಬೇಕಾಗುತ್ತೆ. ನಿರಾಸೆಯಿಂದ ಆರಂಭವಾದ ಭಾರತದ ಇಂಗ್ಲೆಂಡ್​​ ಜರ್ನಿ, ಸಂತೋಷದಿಂದ ಮುಕ್ತಾಯವಾಲಿದೆ’

-ಸುನಿಲ್​ ಗವಾಸ್ಕರ್​, ಮಾಜಿ ಕ್ರಿಕೆಟಿಗ

blankಗವಾಸ್ಕರ್ ಹೇಳಿದ ಮಾತಿನಂತೆ ಟೀಮ್​ ಇಂಡಿಯಾದ ಹುಲಿಗಳು ಬೌನ್ಸ್​ಬ್ಯಾಕ್​ ಮಾಡೋಕೆ ಇದೊಂದು ಸುಸಂದರ್ಭ. ಹಾಗಾಗಿ ವಿಶ್ವ ಟೆಸ್ಟ್​ ಚಾಂಪಿಯನ್​​​​​ಶಿಪ್​​ ಫೈನಲ್​​ನಲ್ಲಿ ಮಾಡಿಕೊಂಡ ತಪ್ಪುಗಳನ್ನ ಮರುಕಳಿಸದಂತೆ ನೋಡಿಕೊಳ್ಳೊಕು ಮ್ಯಾನೇಜ್​ಮೆಂಟ್​ಗೆ ಅವಕಾಶ ಸಿಕ್ಕಂತಾಗಿದೆ. ಹಾಗಾಗಿ ಎಚ್ಚರಿಕೆ ಹೆಜ್ಜೆ ಇಡಬೇಕಾಗಿದೆ. ಗವಾಸ್ಕರ್​ ಮಾತ್ರವಲ್ಲ..! ಟೀಮ್ ಇಂಡಿಯಾವನ್ನ ಪದೆಪದೇ ಕಾಲೆಳೆದು, ವಿರುದ್ಧವಾಗಿ ನಿಲ್ತಿದ್ದ ಮೈಕಲ್​ ವಾನ್​, ಇದೀಗ ಭಾರತದ ಪರ ಬ್ಯಾಟ್​ ಬೀಸಿದ್ದಾರೆ. ಇಂಗ್ಲೆಂಡ್​​ ಎದುರಿನ ಸರಣಿಯಲ್ಲಿ ಭಾರತ ಜಯಿಸೋದು ಕನ್​ಫರ್ಮ್​​ ಎಂದು ಭವಿಷ್ಯ ನುಡಿದಿದ್ದಾರೆ.

‘ಇಂಗ್ಲೆಂಡ್​​ ಲೈನ್​ಅಪ್​ ಸದೃಢವಾಗಿಲ್ಲ’

‘ವಿಶ್ವ ಟೆಸ್ಟ್​ ಚಾಂಪಿಯನ್​​​ಶಿಪ್​​ ಫೈನಲ್​​​ ಸೋಲಿನಿಂದ ವಿರಾಟ್​​ ಸೇನೆ ಕೆರಳಿದೆ. ಜೊತೆಗೆ ಇಂಗ್ಲೆಂಡ್‌ ತಂಡದ ಬ್ಯಾಟಿಂಗ್‌ ಲೈನ್‌ಅಪ್‌ ಸದೃಢವಾಗಿಲ್ಲ. ಅಲ್ಲದೆ ಇಂಗ್ಲೆಂಡ್ ತಂಡದಲ್ಲಿ ಇನ್ನೊಂದಿಷ್ಟು ಸಮಸ್ಯೆಗಳಿವೆ. ಹೀಗಾಗಿ ಭಾರತವನ್ನು ಸೋಲಿಸೋದು ಇಂಗ್ಲೆಂಡ್‌ಗೆ ಕಷ್ಟವಾಗಬಹುದು. ತಂಡದ ಬ್ಯಾಟಿಂಗ್‌ ಲೈನ್​​ಅಪ್ ಬದಲಾಗದಿದ್ದರೆ, ಉತ್ತಮ ಬೌಲಿಂಗ್ ಹೊಂದಿರುವ ತಂಡದ ವಿರುದ್ಧ ಬೃಹತ್​​​ ಮೊತ್ತ ಕಲೆ ಹಾಕೋದು ಅಸಾಧ್ಯದ ಮಾತು’

ಮೈಕಲ್​ ವಾನ್​, ಮಾಜಿ ಕ್ರಿಕೆಟಿಗ

blank

ಮಾಜಿ ಕ್ರಿಕೆಟಿಗರ ಭರವಸೆಯ ಮಾತುಗಳೇನೋ ಟೀಮ್​ ಇಂಡಿಯಾ ಪಾಳಯದಲ್ಲಿ ಹೊಸ ಆಶಾಕಿರಣವನ್ನ ಹುಟ್ಟಿಸಿವೆ. ಆದರೆ ಟೀಮ್​ ಮ್ಯಾನೇಜ್​ಮೆಂಟ್ ಮಾಡ್ತಿರೋ ತಪ್ಪುಗಳು ತಂಡದ ಸೋಲಿಗೆ ಕಾರಣವಾಗ್ತಿರೋದು ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಇಂಗ್ಲೆಂಡ್​ ವಿರುದ್ಧದ ಸರಣಿಗೆ ಯಾವೆಲ್ಲಾ ಕಾರ್ಯ ತಂತ್ರಗಳನ್ನ ರೂಪಿಸಿಕೊಳ್ಳಲಿದೆ ಅನ್ನೋದು ಕುತೂಹಲ ಹುಟ್ಟಿಸಿದೆ.

ಸರಣಿ ಆರಂಭಕ್ಕೆ ಇನ್ನೂ ಆರು ವಾರಗಳ ಕಾಲ ಸಮಯವಿದೆ. ಸದ್ಯ ಆಟಗಾರರಿಗೆ ಮೂರು ವಾರ ಬ್ರೇಕ್​ ನೀಡಲಾಗಿದ್ದು, ಜೂನ್​ 14ರ ಬಳಿಕ ಭಾರತ ಶಸ್ತ್ರಾಭ್ಯಾಸ ಆರಂಭಿಸಲಿದೆ. ಗವಾಸ್ಕರ್​ ಹೇಳಿದಂತೆ ನಿರಾಸೆಯಿಂದ ಆರಂಭವಾದ ಭಾರತದ ಇಂಗ್ಲೆಂಡ್​​ ಜರ್ನಿ, ಸಂತೋಷದಿಂದ ಮುಕ್ತಾಯ ಕಾಣುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

The post ಇಂಗ್ಲೆಂಡ್​ ವಿರುದ್ಧ ಭಾರತ ಗೆದ್ದೇ ಗೆಲ್ಲುತ್ತೆ ಅಂದಿದ್ಯಾಕೆ ಲೆಜೆಂಡ್ಸ್​​? ಭಾರತದ ಕ್ಯಾಂಪ್​ನಲ್ಲಿ ಆಶಾಕಿರಣ appeared first on News First Kannada.

Source: newsfirstlive.com

Source link