ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿ ‘ಕಪ್’ ಗೆದ್ದ ದಿವ್ಯಾ

ಬಿಗ್ ಬಾಸ್ ಮನೆಯಲ್ಲಿ ನಡೆದ ಕ್ರಿಕೆಟ್ ಪಂದ್ಯದಲ್ಲಿ ದಿವ್ಯಾ ಉರುಡುಗ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಅರವಿಂದ್ ಅವರನ್ನು ಸೋಲಿಸಿ ‘ಕಪ್’ ಗೆದ್ದುಕೊಂಡಿದ್ದಾರೆ.

ಅರವಿಂದ್ ಉತ್ತಮ ಕ್ರೀಡಾಪಟು, ಬೈಕ್ ರೇಸರ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ದಿವ್ಯಾ ಉರುಡುಗ ಕೂಡ ಅತ್ಯುತ್ತಮ ಕ್ರೀಡಾಪಟು. ಆದರೆ ಏಕಾಂಗಿ ಕ್ರಿಕೆಟ್ ಮ್ಯಾಚ್‍ನಲ್ಲಿ ಕೇವಲ 6 ಎಸೆತಗಳಲ್ಲಿ 15 ರನ್ ಸಿಡಿಸಿ ಬಿಗ್ ಮನೆಯ ಎಲ್ಲರನ್ನು ಸೋಲಿಸಿ ಜಯಗಳಿಸಿದ್ದಾರೆ. ಇದನ್ನೂ ಓದಿ: ನನಗೆ ಎರಡು ಡೈವೋರ್ಸ್ ಆಗಿದೆ: ಚಕ್ರವರ್ತಿ ಚಂದ್ರಚೂಡ್

ಮನೆಯ ಸದಸ್ಯರಿಗೆ ‘ಟೇಬಲ್ ಕ್ರಿಕೆಟ್’ ಟಾಸ್ಕ್ ನೀಡಲಾಗಿತ್ತು. ಟೇಬಲ್ ಕೊನೆಯಲ್ಲಿ 6 ಕಪ್‍ಗಳನ್ನು ಫಿಕ್ಸ್ ಮಾಡಲಾಗಿತ್ತು. ಪ್ರತಿಯೊಂದು ಲೋಟಕ್ಕೆ ಅನುಕ್ರಮವಾಗಿ 1 ರಿಂದ 6 ರನ್ ಗಳನ್ನು ನಮೂದಿಸಲಾಗಿತ್ತು. ಮನೆಯ ಸದಸ್ಯರು ನೀಡಲಾಗುವ 6 ಚೆಂಡುಗಳನ್ನು ಗ್ಲಾಸ್ ಮೂಲಕ ಟೇಬಲ್ ಮೇಲೆ ಉರುಳಿಸಿ ಫಿಕ್ಸ್ ಮಾಡಿದ ಗ್ಲಾಸ್‍ ಒಳಗಡೆ ಹಾಕಬೇಕು. ಯಾರು ಹೆಚ್ಚು ರನ್ ಗಳಿಸುತ್ತಾರೋ ಅವರು ಪಂದ್ಯವನ್ನು ಗೆಲ್ಲುತ್ತಾರೆ ಎನ್ನುವುದು ಸ್ಪರ್ಧೆಯ ನಿಯಮ. ಇದನ್ನೂ ಓದಿ:ಪತ್ತರವಳ್ಳಿ ಅಂದರೆ ಬೇಲಿ ಸಂದಿಯಲ್ಲಿ ನಡೆಯುವ ಕಾಮ: ಮಂಜು ವಿರುದ್ಧ ಚಕ್ರವರ್ತಿ ಗರಂ

ತಮ್ಮ ಸರದಿ ಬಂದಾಗ ದಿವ್ಯಾ ಮೊದಲ ಎಸೆತದಲ್ಲಿ ಸಿಕ್ಸ್ ಸಿಡಿಸಿದರು. ನಂತರ ಎಸೆತಗಳಲ್ಲಿ ಕ್ರಮವಾಗಿ 3, 0, 5, 0, 1 ರನ್ ಗಳಿಸಿ ಒಟ್ಟು 15 ರನ್ ಹೊಡೆದರು. ಈ ಟೇಬಲ್ ಕ್ರಿಕೆಟ್‍ನಲ್ಲಿ ಪ್ರಿಯಾಂಕ, ರಘು, ಅರವಿಂದ್ ತಲಾ 10 ರನ್ ಹೊಡೆದಿದ್ದರು. ಕೊನೆಗೆ ಎಲ್ಲರ ಸರದಿ ಮುಗಿದ ಬಳಿಕ ಅತಿ ಹೆಚ್ಚು ರನ್ ಹೊಡೆದ ದಿವ್ಯಾ ಅವರು ವಿಜೇತರಾಗಿದ್ದಾರೆ ಎಂದು ನಾಯಕ ಮಂಜು ಫಲಿತಾಂಶ ಪ್ರಕಟಿಸಿದರು. ಇದನ್ನೂ ಓದಿ: ನಾನು ಇಲ್ಲಿವರೆಗೂ ಅವರನ್ನು ಏಕವಚನದಲ್ಲಿ ಕರೆದಿಲ್ಲ : ದಿವ್ಯಾ

blank

ಪ್ರತಿ ಶುಕ್ರವಾರ ಬಿಗ್ ಬಾಸ್ ಮನಯ ಸದಸ್ಯರಿಗೆ ವಿಶೇಷ ಟಾಸ್ಕ್ ನೀಡಲಾಗುತ್ತದೆ. ಈ ಟಾಸ್ಕ್‍ನಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗುತ್ತದೆ. ಈ ಮೊದಲು ನಡೆದ ಟಾಸ್ಕ್ ನಲ್ಲಿ  ಗೆದ್ದಿದ್ದಕ್ಕೆ ದಿವ್ಯಾ ಅವರಿಗೆ 7,500 ರೂ. ಸಿಕ್ಕಿತ್ತು. ಈಗ ಕ್ರಿಕೆಟ್ ಪಂದ್ಯದಲ್ಲಿ ಕಪ್ ಗೆದ್ದಿದ್ದಕ್ಕೆ ಮತ್ತೆ 5 ಸಾವಿರ ರೂ. ಸಿಕ್ಕಿದೆ.

The post ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿ ‘ಕಪ್’ ಗೆದ್ದ ದಿವ್ಯಾ appeared first on Public TV.

Source: publictv.in

Source link