ನಗರದಲ್ಲಿ ಹಾಡಹಗಲೇ ಒಂಟಿ ಮಹಿಳೆ ಕೈಗಳನ್ನು ಕಟ್ಟಿ 170 ಗ್ರಾಂ ಚಿನ್ನ, ₹2 ಲಕ್ಷ ಹಣ ದರೋಡೆ

ನಗರದಲ್ಲಿ ಹಾಡಹಗಲೇ ಒಂಟಿ ಮಹಿಳೆ ಕೈಗಳನ್ನು ಕಟ್ಟಿ 170 ಗ್ರಾಂ ಚಿನ್ನ, ₹2 ಲಕ್ಷ ಹಣ ದರೋಡೆ

ಬೆಂಗಳೂರು: ಕೊರೊನಾ ಲಾಕ್​ಡೌನ್ ಸಡಿಲಿಕೆ ಬೆನ್ನಲ್ಲೇ  ನಗರದಲ್ಲಿ ಕಳ್ಳತನ ಸೇರಿದಂತೆ ಹಲವು ಕ್ರೈಂ ಪ್ರಕರಣಗಳು ಹೆಚ್ಚಳವಾಗ್ತಿದ್ದು, ಆತಂಕ ಮೂಡಿಸಿದೆ. ಅದಕ್ಕೆ ಪುಷ್ಟಿ ಕೊಡುವ ರೀತಿ ವಿದ್ಯಾರಣ್ಯಪುರದಲ್ಲಿ ಹಾಡಹಗಲೇ ದರೋಡೆಕೋರರು ಮನೆಗೆ ನುಗ್ಗಿ, ಮಹಿಳೆಯ ಕೈಗಳನ್ನ ಕಟ್ಟಿಹಾಕಿ ಚಿನ್ನ-ಹಣ ಕದ್ದೊಯ್ದಿದ್ದಾರೆ.

ವಿದ್ಯಾರಣ್ಯಪುರದ ತಿಂಡ್ಲು ಮುಖ್ಯರಸ್ತೆಯ ಬಸವ ಸಮಿತಿ ಲೇಔಟ್​ನಲ್ಲಿ ಸುಭಾಷ್ ಎಂಬುವವರ ಮನೆಯಲ್ಲಿ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ. ಒಂಟಿ ಮಹಿಳೆಯ ಕೈಗಳನ್ನು ಕಟ್ಟಿ ಹಾಕಿದ ದರೋಡೆಕೋರರು 170 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ರೂಪಾಯಿ ನಗದು ಹಣವನ್ನ ದೋಚಿಕೊಂಡು ಹೋಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ.

ಗಂಡ ಆಫೀಸ್​​ಗೆ ಹೋಗ್ತಿದ್ದಂತೆ ದರೋಡೆಕೋರರ ಎಂಟ್ರಿ
ಪೀಣ್ಯದ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರೋ ಸುಭಾಷ್ ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಡ್ಯೂಟಿಗೆ ಹೋಗಿದ್ರು. ಆದಾದ ಅರ್ಧ ಗಂಟೆಯಲ್ಲಿ ಅಪರಿಚಿತರು ಮನೆಗೆ ನುಗ್ಗಿದ್ದರು  ಸುಭಾಷ್ ಪತ್ನಿ ಜಯಶ್ರೀ ಅಡುಗೆ ಮನೆಯಲ್ಲಿ ಇದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿ ಜಯಶ್ರೀ ಅವರ ಬಾಯಿಯನ್ನ ಮುಚ್ಚಿ, ಅವರ ತಲೆಯನ್ನ ಸಂಪೂರ್ಣವಾಗಿ ಕೆಳಗೆ ಬಗ್ಗಿಸಿದ್ದು, ಇನ್ನೊಬ್ಬ ಅವರ ಎರಡು ಕೈಗಳನ್ನ ಹಿಂದಕ್ಕೆ ತೆಗೆದು ಕಟ್ಟಿದ್ದ. ಅಲ್ಲದೇ ಹಿಂಬದಿಯಿಂದ ಜಯಶ್ರೀ ಕುತ್ತಿಗೆಗೆ ಮಾರಾಕಾಸ್ತ್ರ ತೋರಿಸಿ, ಚಿರಾಡಿದ್ರೆ ಚುಚ್ಚಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ರು ಎನ್ನಲಾಗಿದೆ.

ಬಳಿಕ ಹಣ-ಒಡವೆ ಬಗ್ಗೆ ಹೇಳುವಂತೆ ಬೆದರಿಸಿ ತಿಳಿದುಕೊಂಡ ಖದೀಮರು, ಜಯಶ್ರೀ ಅವರ ಬೀರುವಿನಲ್ಲಿ ಇದ್ದಿದ್ದನ್ನೆಲ್ಲಾ ದೊಚಿದ್ದಾರೆ. 170 ಗ್ರಾಂ ಚಿನ್ನಾಭರಣ, 2 ಲಕ್ಷ ಕ್ಯಾಶ್ ಸಮೇತ ಕ್ಷಣಮಾತ್ರದಲ್ಲಿ ಎಸ್ಕೇಪ್ ಆಗಿದ್ದಾರೆ. ತಕ್ಷಣ ಜಯಶ್ರೀ ಪಕ್ಕದ ಮನೆಯವರನ್ನ ಕೂಗಿದ್ದಾರೆ. ಆದ್ರೆ ಅಕ್ಕಪಕ್ಕದವರು ಬರುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ರು. ಬಳಿಕ ಸ್ಥಳಿಯರು ವಿದ್ಯಾರಣ್ಯಪುರ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಹಾಗೂ FSL ಟೀಂ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ.

ಗುರುತು ಸಿಗದಂತೆ ಕೃತ್ಯವೆಸಗಿದ ಚಾಲಾಕಿಗಳು
ಕೃತ್ಯ ನಡೆಸುವ ವೇಳೆ ದುಷ್ಕರ್ಮಿಗಳು ಚಾಲಾಕಿತನ ತೋರಿದ್ದು, ತಮ್ಮ ಗುರುತು ಸಿಗದಂತೆ ಜಯಶ್ರೀ ಬೆನ್ನ ಹಿಂದೆಯೇ ನಿಂತು ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಆಕೆ ತಿರುಗಲು ಆಗದಂತೆ ಹಿಂಭಾಗದಿಂದ ಕೆಳಗೆ ಬಗ್ಗಿಸಿಯೇ ನಿಲ್ಲಿಸಿದ್ದಾರೆ. ಬಳಿಕ ಜಯಶ್ರೀಯನ್ನ ಕೆಳಗೆ ತಳ್ಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ತಾನು ಬಗ್ಗಿದ್ದ ಕಾರಣ ಜಯಶ್ರೀಗೆ ಆರೋಪಿಗಳ ಬಗ್ಗೆ ಸಣ್ಣ ಗುರುತು ಸಿಕ್ಕಿಲ್ಲ. ಸದ್ಯ ಪೊಲೀಸರು ರಸ್ತೆ ಅಕ್ಕಪಕ್ಕದ ಸಿಸಿಟಿವಿ ಪರಿಶೀಲಿಸ್ತಿದ್ದಾರೆ.

ಸುಭಾಷ್ ಹಾಗೂ ಪತ್ನಿ ಜಯಶ್ರೀ ಇಬ್ಬರೇ ಮನೆಯಲ್ಲಿ ವಾಸವಾಗಿದ್ದು, ಯಾರೋ ಗೊತ್ತಿರುವವರೇ ಕೃತ್ಯ ಮಾಡಿರಬಹುದು ಎಂದು ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ.

The post ನಗರದಲ್ಲಿ ಹಾಡಹಗಲೇ ಒಂಟಿ ಮಹಿಳೆ ಕೈಗಳನ್ನು ಕಟ್ಟಿ 170 ಗ್ರಾಂ ಚಿನ್ನ, ₹2 ಲಕ್ಷ ಹಣ ದರೋಡೆ appeared first on News First Kannada.

Source: newsfirstlive.com

Source link