‘ಅಗ್ನಿ’ ಪರೀಕ್ಷೆಗೆ ಗೆದ್ದ ಅಗ್ನಿ ಪ್ರೈಮ್ – ಒಡಿಸ್ಸಾದಲ್ಲಿ ನಡೆದ ಪರೀಕ್ಷಾರ್ಥ ಉಡಾವಣೆ ಯಶಸ್ವಿ

‘ಅಗ್ನಿ’ ಪರೀಕ್ಷೆಗೆ ಗೆದ್ದ ಅಗ್ನಿ ಪ್ರೈಮ್ – ಒಡಿಸ್ಸಾದಲ್ಲಿ ನಡೆದ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ನವದೆಹಲಿ: ಕೊರೊನಾ ಕಾರಣದಿಂದ ತಡವಾಗಿದ್ದ ಅಗ್ನಿ ಪ್ರೈಮ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ಬೆಳಗ್ಗೆ 10:55ರ ಸಮಯದಲ್ಲಿ ಒಡಿಶಾದ ಕರಾವಳಿ ಭಾಗದಲ್ಲಿ ಪರೀಕ್ಷೆಯನ್ನು ನಡೆಸಲಾಗಿದೆ.

ಒಡಿಸ್ಸಾದ ಚಂಡಿಪುರ ಉಡಾವಣ ಕೇಂದ್ರದ 4ನೇ ಲಾಂಚ್​ ಪ್ಯಾಡ್​​ನಿಂದ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿತ್ತು. ನ್ಯೂಕ್ಲಿಯರ್​ ಸ್ಫೋಟಕವನ್ನು ಹೊತ್ತು ಸಾಗಬಲ್ಲ ಕ್ಷಿಪಣಿಯನ್ನು ಕಂಪೋಸಿಟ್ ಮೆಟೀರಿಯಲ್​​ಗಳಿಂದಲೇ ತಯಾರಿಸಲಾಗಿದೆ.
ಭಾರತದ ಬಳಿ ಈಗಾಗಲೇ ಅಗ್ನಿ 1, 2, 3, 4 ಹಾಗೂ 5 ಹೆಸರಿನ ಮಿಸೈಲ್​ಗಳ ಭಂಡಾರವೇ ಇದೆ. ಇದರ ಸಾಲಿಗೆ ಸದ್ಯ ಮತ್ತೊಂದು ‘ಅಗ್ನಿ’ ಸೇರ್ಪಡೆಯಾಗಿದೆ.

ಅಗ್ನಿ ಸಿರೀಸ್‌ನ 5 ಕ್ಷಿಪಣಿಗಳು ಭಾರತೀಯ ಸೇನೆಯಲ್ಲಿದ್ದು ಸೇನಾ ಸಾಮರ್ಥ್ಯಕ್ಕೆ ಆನೆಬಲ ತಂದಿವೆ. ಯಾವುದೇ ರಾಷ್ಟ್ರ ಭಾರತದ ತಂಟೆಗೆ ಬರುವ ಮುನ್ನ ಮೈಮುಟ್ಟಿ ನೋಡಿಕೊಳ್ಳುವಂತೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿವೆ. ಇದನ್ನು ನೋಡಿಯೇ ಎದುರಾಳಿ ದೇಶಗಳು ಯುದ್ಧಕ್ಕೆ ಬರುವ ಮುನ್ನವೇ ಯೋಚಿಸುತ್ತಿವೆ. ಈ ನಡುವೆ ಮತ್ತೊಂದು ದೈತ್ಯ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ.

ಅಗ್ನಿ ಪ್ರೈಮ್​​ ವಿಶೇಷತೆಗಳೇನು..?
ಅಗ್ನಿ-1 ಕ್ಷಿಪಣಿಯ ರೂಪಾಂತರಿಯೇ ಅಗ್ನಿ ಪ್ರೈಮ್‌ ಆದರೂ ಕೆಲವಷ್ಟು ಬದಲಾವಣೆಗಳು ಇವೆ. ದೇಶಿಯ ನಿರ್ಮಿತ ಹಲವಾರು ತಂತ್ರಜ್ಞಾನವನ್ನು ಹೊಸದಾಗಿ ಅಳವಡಿಸಿಕೊಳ್ಳಲಾಗಿದೆ. ಅಗ್ನಿ-1 ಕ್ಷಿಪಣಿಯಲ್ಲಿ ಸಿಂಗಲ್‌ ಎಂಜಿನ್‌ ಬಳಸಲಾಗಿತ್ತು. ಆದ್ರೆ, ಅಗ್ನಿ ಪ್ರೈಮ್‌ನಲ್ಲಿ ಡಬಲ್‌ ಎಂಜಿನ್‌ ಬಳಸಲಾಗಿದೆ. ಮಾನವ ರಹಿತ ವೈಮಾನಿಕ ವಾಹನಕ್ಕೆ ಬಳಸುವ ರಷ್ಯಾ ನಿರ್ಮಿತ ಎಂಜಿನ್‌ ಇದು. ಇದುವೇ ಅಗ್ನಿ ಪ್ರೈಮ್‌ನ ಪ್ರಮುಖ ಆಕರ್ಷಣೆ. ಶಕ್ತಿಶಾಲಿ ಡಬಲ್‌ ಎಂಜಿನ್‌ ಅಳವಡಿಸಿ ಭಾರವನ್ನು ಕಡಿಮೆ ಮಾಡಿರುವುದರಿಂದ ಮಿಂಚಿನ ವೇಗದಲ್ಲಿ ಕ್ಷಿಪಣಿ ಗುರಿ ಮುಟ್ಟಲಿದೆ.

The post ‘ಅಗ್ನಿ’ ಪರೀಕ್ಷೆಗೆ ಗೆದ್ದ ಅಗ್ನಿ ಪ್ರೈಮ್ – ಒಡಿಸ್ಸಾದಲ್ಲಿ ನಡೆದ ಪರೀಕ್ಷಾರ್ಥ ಉಡಾವಣೆ ಯಶಸ್ವಿ appeared first on News First Kannada.

Source: newsfirstlive.com

Source link